ಕರ್ನಾಟಕ

karnataka

ETV Bharat / business

BOI ಗ್ರಾಹಕರ ಗಮನಕ್ಕೆ: ಬಡ್ಡಿದರ ಕಡಿತ, ವಾಹನ​, ಗೃಹ ಸಾಲ ಅಗ್ಗ - ವಾಣಿಜ್ಯ ಸುದ್ದಿ

ಬ್ಯಾಂಕ್ ಆಫ್  ಇಂಡಿಯಾ ಗೃಹ ಸಾಲದ ಮೇಲಿನ ಬಡ್ಡಿ ದರ ಸಹ ತಗ್ಗಿಸಿದ್ದು, ವಾರ್ಷಿಕ ಬಡ್ಡಿದರ ಇನ್ನು ಮುಂದೆ ಶೇ 8ರಷ್ಟು ಇರಲಿದೆ. ವಾಹನಗಳ ಮೇಲಿನ ಬಡ್ಡಿ ದರ ಶೇ 8.5ರಷ್ಟು ಇರಲಿದೆ. ಪರಿಷ್ಕೃತ ಬಡ್ಡಿ ದರ ಫೆಬ್ರವರಿ 10ರಿಂದ ಅನ್ವಯ ಆಗಲಿದೆ ಎಂದು ಬ್ಯಾಂಕ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಂಕ್ ಆಫ್ ಇಂಡಿಯಾ
Bank of India

By

Published : Feb 8, 2020, 4:11 PM IST

ನವದೆಹಲಿ: ಬ್ಯಾಂಕ್ ಆಫ್ ಇಂಡಿಯಾ ಆರು ತಿಂಗಳವರೆಗಿನ ಎಂಸಿಎಲ್​​ಆರ್​ ಬಡ್ಡಿ ದರವನ್ನು 10 ಎಂಬಿಪಿಎಸ್​​ ನಷ್ಟು ಕಡಿತ ಮಾಡಿದೆ.

ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಮೇಲಿನ ಬಡ್ಡಿ ದರ ಸಹ ತಗ್ಗಿಸಿದ್ದು, ವಾರ್ಷಿಕ ಬಡ್ಡಿದರ ಇನ್ನು ಮುಂದೆ ಶೇ 8ರಷ್ಟು ಇರಲಿದೆ. ವಾಹನಗಳ ಮೇಲಿನ ಬಡ್ಡಿ ದರ ಶೇ 8.5ರಷ್ಟು ಇರಲಿದೆ. ಪರಿಷ್ಕೃತ ಬಡ್ಡಿ ದರ ಫೆಬ್ರವರಿ 10ರಿಂದ ಅನ್ವಯ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನಿನ್ನೆ (ಶುಕ್ರವಾರ) ದೇಶದ ಅತಿದೊಡ್ಡ ಬ್ಯಾಂಕ್ ಆದ ಎಸ್​​ಬಿಐ 5 ಬೇಸಿಸ್​ ಪಾಯಿಂಟ್​ಗಳಷ್ಟು ಎಂಸಿಎಲ್​​ಆರ್ ಇಳಿಸಿತ್ತು. ಇದು ಫೆಬ್ರವರಿ 10ರಿಂದ ಜಾರಿಗೆ ಬರಲಿದೆ.

ಆರ್​ಬಿಐನ ವಿತ್ತೀಯ ನೀತಿ ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಯಥಾವತ್ತಾಗಿ ಈ ಹಿಂದಿನ ಶೇ 5.15 ದರದಲ್ಲಿ ಉಳಿಸಿಕೊಳ್ಳುವುದಾಗಿ ನಿರ್ಧರಿಸಿತ್ತು. ಈ ಬಳಿಕ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿ ದರವನ್ನು ಪರಿಷ್ಕೃತಗೊಳಿಸಿದೆ.

ABOUT THE AUTHOR

...view details