ಕರ್ನಾಟಕ

karnataka

ETV Bharat / business

ಬ್ಯಾಂಕ್ ಸಿಬ್ಬಂದಿಗೆ ಸಂತಸದ ಸುದ್ದಿ.. ಭಾರತೀಯ ಬ್ಯಾಂಕಿಂಗ್ ಸಂಘದ ಪ್ರಮುಖ ಪ್ರಸ್ತಾಪಕ್ಕೆ ವಿತ್ತ ಸಚಿವರ ಅನುಮೋದನೆ! - ಭಾರತೀಯ ಬ್ಯಾಂಕಿಂಗ್ ಸಂಘದ ಪ್ರಮುಖ ಪ್ರಸ್ತಾಪ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಬ್ಯಾಂಕ್ ನೌಕರರ ಕುಟುಂಬ ಪಿಂಚಣಿಯನ್ನು ಕೊನೆಯದಾಗಿ ಪಡೆದಿರುವ ಸಂಬಳದ ಶೇ 30ರಷ್ಟಕ್ಕೆ ಹೆಚ್ಚಿಸುವ ಭಾರತೀಯ ಬ್ಯಾಂಕಿಂಗ್ ಸಂಘದ ಪ್ರಸ್ತಾಪವನ್ನು ಅನುಮೋದಿಸಿದರು. ಹೊಸ ಪಿಂಚಣಿ ಯೋಜನೆಯಡಿ ಉದ್ಯೋಗದಾತರ ಕೊಡುಗೆಯನ್ನು ಈಗಿರುವ ಶೇ10 ರಿಂದ 14 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿದೆ.

ಭಾರತೀಯ ಬ್ಯಾಂಕಿಂಗ್ ಸಂಘದ ಪ್ರಮುಖ ಪ್ರಸ್ತಾಪಕ್ಕೆ ವಿತ್ತ ಸಚಿವರ ಅನುಮೋದನೆ
ಭಾರತೀಯ ಬ್ಯಾಂಕಿಂಗ್ ಸಂಘದ ಪ್ರಮುಖ ಪ್ರಸ್ತಾಪಕ್ಕೆ ವಿತ್ತ ಸಚಿವರ ಅನುಮೋದನೆ

By

Published : Aug 25, 2021, 9:14 PM IST

ಮುಂಬೈ:ಸಾರ್ವಜನಿಕ ವಲಯದಲ್ಲಿ ಸುಮಾರು ಎಂಟು ಲಕ್ಷ ಬ್ಯಾಂಕ್ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ದೊಡ್ಡ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಬ್ಯಾಂಕ್ ನೌಕರರ ಕುಟುಂಬ ಪಿಂಚಣಿಯನ್ನು ಕೊನೆಯದಾಗಿ ಪಡೆದಿರುವ ಸಂಬಳದ ಶೇ30ಕ್ಕೆ ಹೆಚ್ಚಿಸುವ ಭಾರತೀಯ ಬ್ಯಾಂಕಿಂಗ್ ಸಂಘದ ಪ್ರಸ್ತಾಪವನ್ನು ಅನುಮೋದಿಸಿದರು.

ಈ ಕ್ರಮವು ಬ್ಯಾಂಕಿಂಗ್ ವಲಯದ ಉದ್ಯೋಗಿಗಳ ಕುಟುಂಬ ಪಿಂಚಣಿಯನ್ನು ಪ್ರತಿ ಕುಟುಂಬಕ್ಕೆ ರೂ. 30,000 ದಿಂದ ರೂ. 35,000 ವರೆಗೆ ಹೆಚ್ಚಿಸಲು ಸಾಧ್ಯವಾಗುವಂತೆ ಮಾಡುತ್ತದೆ.

ಸಾರ್ವಜನಿಕ ವಲಯದ ಬ್ಯಾಂಕ್​ಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ತಮ್ಮ ಎರಡು ದಿನಗಳ ಮುಂಬೈ ಭೇಟಿಯಲ್ಲಿ ಹಣಕಾಸು ಸಚಿವರು ಪ್ರಸ್ತಾಪವನ್ನು ಅನುಮೋದಿಸಿದ್ದಾರೆ. ಈ ನಿರ್ಧಾರವು ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆಯ 11 ನೇ ದ್ವಿಪಕ್ಷೀಯ ಪರಿಹಾರದ ಮುಂದುವರಿಕೆಯ ಭಾಗವಾಗಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಕುಟುಂಬ ಪಿಂಚಣಿ ಮತ್ತು ಉದ್ಯೋಗದಾತರ ಕೊಡುಗೆಯನ್ನು ಹೆಚ್ಚಿಸುವ ಪ್ರಸ್ತಾಪವು ಬ್ಯಾಂಕ್ ಆಡಳಿತ ಮತ್ತು ಕಾರ್ಮಿಕರ ಸಂಘಗಳು ಮತ್ತು ಅಧಿಕಾರಿ ಸಂಘಗಳ ನಡುವಿನ ದ್ವಿಪಕ್ಷೀಯ ಇತ್ಯರ್ಥದ ಭಾಗವಾಗಿತ್ತು.

ಈ ಯೋಜನೆಯು ಇದೇ ಸಮಯದಲ್ಲಿ ಶೇ 15, ಶೇ 20 ಮತ್ತು ಶೇ 30 ನಷ್ಟು ಸ್ಲಾಬ್‌ಗಳನ್ನು ಹೊಂದಿತ್ತು. ಆದರೆ ಇದು ಗರಿಷ್ಠ 9,284 ರೂಪಾಯಿಗಳ ಸೀಲಿಂಗ್ ಅನ್ನು ಸಹ ಹೊಂದಿದೆ. ಹೊಸ ಪಿಂಚಣಿ ಯೋಜನೆಯಡಿ ಉದ್ಯೋಗದಾತರ ಕೊಡುಗೆಯನ್ನು ಈಗಿರುವ ಶೇ 10 ರಿಂದ 14 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿದೆ.

ಸರ್ಕಾರದ ಈ ನಿರ್ಧಾರ ಲಕ್ಷಾಂತರ ಬ್ಯಾಂಕ್​ ನೌಕರರಲ್ಲಿ ಹರ್ಷವನ್ನುಂಟು ಮಾಡಿದೆ.

ABOUT THE AUTHOR

...view details