ಕರ್ನಾಟಕ

karnataka

ETV Bharat / business

ಕೋವಿಡ್​-19: ಬಜಾಜ್ ವಾಹನಗಳ ಉಚಿತ ಸೇವಾ ವಾಯ್ದೆ 2 ತಿಂಗಳು ವಿಸ್ತರಣೆ

ಏಪ್ರಿಲ್ 1 ಮತ್ತು ಮೇ 31ರ ನಡುವೆ ಮುಕ್ತಾಯಗೊಳ್ಳುವ ವಾಹನಗಳ ಉಚಿತ ಸೇವಾ ಅವಧಿಯನ್ನು ಈಗ ಜುಲೈ 31ರವರೆಗೆ ವಿಸ್ತರಿಸಲಾಗುವುದು. ಉಚಿತ ಸೇವಾ ಅವಧಿಯ ವಿಸ್ತರಣೆಯು ಎಲ್ಲಾ ದ್ವಿಚಕ್ರ ಮತ್ತು ವಾಣಿಜ್ಯ ವಾಹನಗಳಿಗೆ ಅನ್ವಯಿಸುತ್ತದೆ ಎಂದು ಬಜಾಜ್ ಆಟೋ ಪ್ರಕಟಣೆಯಲ್ಲಿ ತಿಳಿಸಿದೆ.

Bajaj Auto
Bajaj Auto

By

Published : May 19, 2021, 3:25 PM IST

ಮುಂಬೈ:ಕೋವಿಡ್​ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ವೇಳೆ ಹಲವು ರಾಜ್ಯಗಳು ಘೋಷಿಸಿದ ಲಾಕ್‌ಡೌನ್ ಮತ್ತು ಪ್ರಯಾಣ ನಿರ್ಬಂಧಗಳ ಹಿನ್ನೆಲೆಯಲ್ಲಿ ದೇಶದ ಎಲ್ಲ ಬ್ರಾಂಡ್‌ಗಳ ಉಚಿತ ಸೇವಾ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿದೆ ಎಂದು ಬಜಾಜ್ ಆಟೋ ತಿಳಿಸಿದೆ.

ಏಪ್ರಿಲ್ 1 ಮತ್ತು ಮೇ 31ರ ನಡುವೆ ಮುಕ್ತಾಯಗೊಳ್ಳುವ ವಾಹನಗಳ ಉಚಿತ ಸೇವಾ ಅವಧಿಯನ್ನು ಈಗ ಜುಲೈ 31ರವರೆಗೆ ವಿಸ್ತರಿಸಲಾಗುವುದು ಎಂದು ಬಜಾಜ್ ಆಟೋ ಪ್ರಕಟಣೆಯಲ್ಲಿ ತಿಳಿಸಿದೆ.

ಉಚಿತ ಸೇವಾ ಅವಧಿಯ ವಿಸ್ತರಣೆಯು ಎಲ್ಲಾ ದ್ವಿಚಕ್ರ ಮತ್ತು ವಾಣಿಜ್ಯ ವಾಹನಗಳಿಗೆ ಅನ್ವಯಿಸುತ್ತದೆ ಎಂದಿದೆ.

ಇದನ್ನೂ ಓದಿ: ವಾಣಿಜ್ಯ ವಾಹನಗಳ ಉಚಿತ ಸೇವೆ.. ವಾರಂಟಿ​ ಅವಧಿ ವಿಸ್ತರಿಸಿದ ಟಾಟಾ ಮೋಟಾರ್ಸ್

ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ಉಂಟಾದ ಅಡ್ಡಿ ಕಾರಣ ನಮ್ಮ ಗ್ರಾಹಕರು ಎದುರಿಸುತ್ತಿರುವ ಸವಾಲುಗಳು ನಮಗೆ ಮನವರಿಕೆಯಾಗಿವೆ. ಕಳೆದ ವರ್ಷದಂತೆ, ನಮ್ಮ ಗ್ರಾಹಕರಿಗೆ ತಮ್ಮ ವಾಹನಗಳನ್ನು ನೋಡಿಕೊಳ್ಳಲಾಗುವುದು ಎಂದು ಧೈರ್ಯ ತುಂಬಲು ನಾವು ಮತ್ತೊಮ್ಮೆ ಎರಡು ತಿಂಗಳ ಕಾಲ ಸೇವಾ ಅವಧಿಯನ್ನು ವಿಸ್ತರಿಸುತ್ತಿದ್ದೇವೆ ಎಂದು ಬಜಾಜ್ ಆಟೋ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದರು.

ABOUT THE AUTHOR

...view details