ಕರ್ನಾಟಕ

karnataka

ETV Bharat / business

ಅಕಾಲಿಕ ಠೇವಣಿ ಸ್ಥಗಿತದ ಮೇಲಿನ ಶುಲ್ಕ ಮನ್ನಾ ಮಾಡಿದ ಆಕ್ಸಿಸ್ ಬ್ಯಾಂಕ್ - ಅಕಾಲಿಕ ಠೇವಣಿ ಸ್ಥಗಿತ

ಹೊಸ ವೈಶಿಷ್ಟ್ಯವು ಎಲ್ಲಾ ಹೊಸ ಸ್ಥಿರ ಠೇವಣಿ ಮತ್ತು ಮರು ಠೇವಣಿಗಳಿಗೆ ಅನ್ವಯಿಸುತ್ತದೆ. 2 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಕಾಯ್ದಿರಿಸಿದ ಹೊಸ ಠೇವಣಿಗಳಿಗೆ, 15 ತಿಂಗಳ ಬುಕಿಂಗ್ ನಂತರ ಸಂಪೂರ್ಣ ಠೇವಣಿ ಅಕಾಲಿಕವಾಗಿ ಹಿಂತೆಗೆದುಕೊಂಡರೆ ದಂಡ ವಿಧಿಸಲಾಗುವುದಿಲ್ಲ ಎಂದು ಚಿಲ್ಲರೆ ಹೊಣೆಗಾರಿಕೆ ಮತ್ತು ನೇರ ಬ್ಯಾಂಕಿಂಗ್ ಉತ್ಪನ್ನ ವಿಭಾಗದ ಮುಖ್ಯಸ್ಥ ಪ್ರವೀಣ್ ಭಟ್ ಹೇಳಿದರು.

Axis Bank
ಆಕ್ಸಿಸ್ ಬ್ಯಾಂಕ್

By

Published : Jan 11, 2021, 7:12 PM IST

ನವದೆಹಲಿ: ಭಾರತದ ಮೂರನೇ ಅತಿದೊಡ್ಡ ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್, 2020ರ ಡಿಸೆಂಬರ್ 15ರಂದು ಅಥವಾ 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಕಾಯ್ದಿರಿಸಿದ ಎಲ್ಲಾ ನೂತನ ಚಿಲ್ಲರೆ ಅವಧಿಯ ಠೇವಣಿಗಳ ಅಕಾಲಿಕವಾಗಿ ಸ್ಥಗಿತಗೊಳಿಸುವ ಮೇಲಿನ ದಂಡ ಪಾವತಿ ತೆಗೆದುಹಾಕುವುದಾಗಿ ತಿಳಿಸಿದೆ.

ಗ್ರಾಹಕ ಸ್ನೇಹಿ ಈ ನಿರ್ಧಾರವು ಚಿಲ್ಲರೆ ಗ್ರಾಹಕರ ಹಠಾತ್ ದ್ರವ್ಯತೆಯ ಅಗತ್ಯತೆಯ ಬಗ್ಗೆ ಚಿಂತಿಸದೆ, ದೀರ್ಘಕಾಲೀನ ಉಳಿತಾಯಕ್ಕಾಗಿ ಪ್ರೋತ್ಸಾಹಿಸುವುದಾಗಿ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ವೈಶಿಷ್ಟ್ಯವು ಎಲ್ಲಾ ಹೊಸ ಸ್ಥಿರ ಠೇವಣಿ ಮತ್ತು ಮರು ಠೇವಣಿಗಳಿಗೆ ಅನ್ವಯಿಸುತ್ತದೆ. 2 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಕಾಯ್ದಿರಿಸಿದ ಹೊಸ ಠೇವಣಿಗಳಿಗೆ, 15 ತಿಂಗಳ ಬುಕಿಂಗ್ ನಂತರ ಸಂಪೂರ್ಣ ಠೇವಣಿ ಅಕಾಲಿಕವಾಗಿ ಹಿಂತೆಗೆದುಕೊಂಡರೆ ದಂಡ ವಿಧಿಸಲಾಗುವುದಿಲ್ಲ ಎಂದು ಚಿಲ್ಲರೆ ಹೊಣೆಗಾರಿಕೆ ಮತ್ತು ನೇರ ಬ್ಯಾಂಕಿಂಗ್ ಉತ್ಪನ್ನ ವಿಭಾಗದ ಮುಖ್ಯಸ್ಥ ಪ್ರವೀಣ್ ಭಟ್ ಹೇಳಿದರು.

ಇದನ್ನೂ ಓದಿರಿ: ಮೋದಿಯ ಆ ಒಂದು ಘೋಷಣೆಗೆ ಗೂಳಿ ಗುಟುರು: ಹಳೆ ದಾಖಲೆ ಕುಟ್ಟಿ ಪುಡಿಪುಡಿ ಮಾಡಿದ ಸೆನ್ಸೆಕ್ಸ್!

ನಾವು 15 ತಿಂಗಳ ನಂತರ ಮುಚ್ಚಿದ ಎಲ್ಲಾ ಅವಧಿಯ ಠೇವಣಿಗಳ ಮೇಲಿನ ದಂಡವನ್ನು ಮನ್ನಾ ಮಾಡಿದ್ದೇವೆ. ಈ ಹೊಸ ವೈಶಿಷ್ಟ್ಯವು ಅನುಕೂಲತೆಯನ್ನು ನೀಡುವ ಮೂಲಕ ಗ್ರಾಹಕ ಕೇಂದ್ರಿತ ಪ್ರಯೋಜನಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ಇದರಿಂದ ನಮ್ಮ ಪುಸ್ತಕದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದರು.

ಟರ್ಮ್ ಠೇವಣಿಯ ಪ್ರಿನ್ಸಿಪಲ್​ ಮೌಲ್ಯದ ಶೇ 25ರವರೆಗೆ ಮೊದಲ ವಾಪಸಾತಿಗೆ ಹೊಸ ವೈಶಿಷ್ಟ್ಯವು ಯಾವುದೇ ದಂಡ ಇರುವುದಿಲ್ಲ.

ABOUT THE AUTHOR

...view details