ನವದೆಹಲಿ: ಹೊಸ ವರ್ಷದ ಆರಂಭದಲ್ಲಿ ಉತ್ತಮ ಮೌಲ್ಯದ ನೂತನ ಕಾರು ಖರೀದಿಗೆ ಗ್ರಹಾಕರು ಎದುರು ನೋಡುತ್ತಿದ್ದಾರೆ. ವರ್ಷದ ಉದ್ದಕ್ಕೂ ಮಸುಕಾದ ಮಾರಾಟದಿಂದ ಹೊರಬರಲು ಆಟೋಮೊಬೈಲ್ ಕಂಪನಿಗಳು ಕೊನೆಯ ನಿಮಿಷದ ರಿಯಾಯಿತಿ ಘೋಷಿಸಿವೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ದಾಖಲೆಯ ಮಾರಾಟ ಕುಸಿತದ ನಂತರ ದಸರಾ - ದೀಪಾವಳಿ ಹಬ್ಬದ ಋತುವಿನಲ್ಲಿ ಹೆಚ್ಚಿನ ಮಾರಾಟದಿಂದ ಉತ್ತೇಜನಗೊಂಡ ವಾಹನ ತಯಾರಕರು, 2020ರ ವರ್ಷವನ್ನು ಸಕಾರಾತ್ಮಕವಾಗಿ ಕೊನೆಗೊಳಿಸಲು ಲಾಸ್ಟ್ ಮಿನಿಟ್ ಆಫರ್ ಮೊರೆ ಹೋಗಿದ್ದಾರೆ.
ಮಾರುಕಟ್ಟೆ ದೈತ್ಯ ಮಾರುತಿ ಸುಜುಕಿ ಡಿಜೈರ್‌ಗೆ 34,000 ರೂ., ಬ್ರೀಜಾ ಮೇಲೆ 56,000 ರೂ ಮತ್ತು ಎಸ್-ಪ್ರೆಸ್ಸೊಗೆ 63,000 ರೂ.ಯಷ್ಟು ರಿಯಾಯಿತಿ ಘೋಷಿಸಿದೆ. ಅದೇ ರೀತಿ ದಕ್ಷಿಣ ಕೊರಿಯಾದ ವಾಹನ ತಯಾರಕ ಹ್ಯುಂಡೈ ತನ್ನ ಸ್ಯಾಂಟ್ರೊ ಮತ್ತು ಎಲಾಂಟ್ರಾ ಮಾದರಿಗಳಿಗೆ ಒಂದು ಲಕ್ಷ ರೂ. ತನಕ ರಿಯಾಯಿತಿಯನ್ನು ‘ಡಿಸೆಂಬರ್ ಡಿಲೈಟ್’ ಅಡಿ ನೀಡುತ್ತಿದೆ.
ಇದನ್ನೂ ಓದಿ: ವಾಹನ ಚಾಲಕ, ಮಾಲೀಕರ ಗಮನಕ್ಕೆ! ಹೊಸ ವರ್ಷದಿಂದ ಫಾಸ್ಟ್ಟ್ಯಾಗ್ ಕಡ್ಡಾಯ: ತಪ್ಪಿದ್ರೆ ದುಪ್ಪಟ್ಟು ಟೋಲ್
ಈ ಕೊಡುಗೆಗಳಲ್ಲದೆ ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ಬೆಲೆ ಏರಿಕೆಯು ವರ್ಷದ ಕೊನೆಯ ವಾರದಲ್ಲಿ ಕಾರು ಮಾರಾಟ ಹೆಚ್ಚಿಸಲು ಎಂದು ಆಟೋ ವಿತರಕರು ಎದುರು ನೋಡುತ್ತಿದ್ದಾರೆ.
ಮಾರುತಿ ಸುಜುಕಿ, ಟೊಯೋಟಾ, ಹ್ಯುಂಡೈ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ಸೇರಿದಂತೆ ಇತರ ಕಾರು ತಯಾರಕರು ಹೆಚ್ಚುತ್ತಿರುವ ಇನ್ಪುಟ್ ಮತ್ತು ಸವಕಳಿ ವೆಚ್ಚದ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿವೆ.
ನಮ್ಮ ಗ್ರಾಹಕರಲ್ಲಿ ಕೇವಲ 5 ರಿಂದ 10ರಷ್ಟು ಜನರು ಮಾತ್ರ ತಮ್ಮ ವಾಹನಗಳನ್ನು ಮೂರರಿಂದ ನಾಲ್ಕು ವರ್ಷಗಳ ನಂತರ ಮಾರಾಟ ಮಾಡುವ ಯೋಜನೆ ಹೊಂದಿದ್ದಾರೆ. ಉಳಿದ ಗ್ರಾಹಕರಿಗೆ, ಮರುಮಾರಾಟ ಮೌಲ್ಯವು ಅಪ್ರಸ್ತುತವಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಪ್ರಮುಖ ವಾಹನ ಮಾರಾಟ ಕಂಪನಿಯ ಹಿರಿಯ ಮಾರಾಟ ವಿಭಾಗದ ಕಾರ್ಯನಿರ್ವಾಹಕ ಹೇಳಿದರು.