ಕರ್ನಾಟಕ

karnataka

ETV Bharat / business

ಮಾರುತಿ ಸುಜುಕಿ ಮಾಜಿ ಎಂಡಿ ಹೃದಯ ಸ್ತಂಭನದಿಂದ ನಿಧನ - ಜಗದೀಶ್ ಖಟ್ಟರ್ ಸಾವು

1993ರ ಜುಲೈನಲ್ಲಿ ಅಂದಿನ ಮಾರುತಿ ಉದ್ಯೋಗ್ ಲಿಮಿಟೆಡ್‌ಗೆ ನಿರ್ದೇಶಕರಾಗಿ (ಮಾರ್ಕೆಟಿಂಗ್) ಸೇರ್ಪಡೆಯಾದರು. ಮುಂದಿನ ಆರು ವರ್ಷಗಳಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಮಾರ್ಕೆಟಿಂಗ್) ಕೆಲಸ ಮಾಡಿದರು. 1999ರಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ಪಡೆದ ಬಳಿಕ ಎಸ್‌ಎಂಸಿ ಮತ್ತು ಸರ್ಕಾರದ ನಡುವೆ ಹಲವು ಭಿನ್ನಾಭಿಪ್ರಾಯಗಳನ್ನು ಎದುರಿಸಿದರು.

Jagdish Khattar
Jagdish Khattar

By

Published : Apr 26, 2021, 8:37 PM IST

ನವದೆಹಲಿ: ಹೃದಯ ಸ್ತಂಭನದಿಂದ ಮಾರುತಿ ಸುಜುಕಿ ಇಂಡಿಯಾದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಖಟ್ಟರ್ ಇಂದು ಬೆಳಗ್ಗೆ ನಿಧನರಾದರು ಎಂದು ಆಪ್ತ ಮೂಲಗಳು ತಿಳಿಸಿವೆ.

1993ರ ಜುಲೈನಲ್ಲಿ ಅಂದಿನ ಮಾರುತಿ ಉದ್ಯೋಗ್ ಲಿಮಿಟೆಡ್‌ಗೆ ನಿರ್ದೇಶಕರಾಗಿ (ಮಾರ್ಕೆಟಿಂಗ್) ಸೇರ್ಪಡೆಯಾದರು. ಮುಂದಿನ ಆರು ವರ್ಷಗಳಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ (ಮಾರ್ಕೆಟಿಂಗ್) ಕೆಲಸ ಮಾಡಿದರು. 1999ರಲ್ಲಿ ಜಂಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಬಡ್ತಿ ಪಡೆದ ಬಳಿಕ ಎಸ್‌ಎಂಸಿ ಮತ್ತು ಸರ್ಕಾರದ ನಡುವೆ ಹಲವು ಭಿನ್ನಾಭಿಪ್ರಾಯಗಳನ್ನು ಎದುರಿಸಿದರು.

ಸರ್ಕಾರ ಮತ್ತು ಜಪಾನಿನ ಪಾಲುದಾರ ಮಾಲೀಕತ್ವ ಹಾಗೂ ತಂತ್ರಜ್ಞಾನ ವರ್ಗಾವಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಜಗಳವಾಡುತ್ತಲೇ ಇದ್ದರು. ಕಂಪನಿಯ ಗುರುಗಾಂವ್ ಪ್ಲಾಂಟ್​ನಲ್ಲಿ ಕಾರ್ಮಿಕರು ವೇತನ ಹೆಚ್ಚಳ, ಪ್ರೋತ್ಸಾಹ ಮತ್ತು ಪಿಂಚಣಿ ಸಹ ಅವಗಳಲ್ಲಿ ಸೇರಿವೆ. 2002ರಲ್ಲಿ ಎಂಡಿಯಾಗಿ ನೇಮಕವಾದರು.

ಐಎಎಸ್ ತೊರೆದು ಮಾರುತಿಗೆ ಸೇರಲು ಖಟ್ಟರ್ ಅವರನ್ನು ಮನವೊಲಿಸಿದ ಮಾರುತಿ ಸುಜುಕಿ ಅಧ್ಯಕ್ಷ ಆರ್ ಸಿ ಭಾರ್ಗವ, ಅವರನ್ನು ಪ್ರಥಮ ದರ್ಜೆ ವ್ಯಕ್ತಿ, ಅವರ ನಿಧನವು ವೈಯಕ್ತಿಕವಾಗಿ ಮತ್ತು ವಾಹನ ಉದ್ಯಮಕ್ಕೆ ದೊಡ್ಡ ನಷ್ಟ ಎಂದಿದ್ದಾರೆ.

ಅವರೊಂದಿಗಿನ ಒಡನಾಟ ನೆನಪಿಸಿಕೊಂಡ ಭಾರ್ಗವ, ಮಾರುತಿಗೆ ಸೇರುವ ಮೊದಲು ಖಟ್ಟರ್ ಒಬ್ಬ ಅಧಿಕಾರಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು ಎಂದರು.

ಆ ದಿನಗಳಲ್ಲಿ, ಐಎಎಸ್ ಅಧಿಕಾರಿಯೊಬ್ಬರು ನೀವು ಕಂಪನಿಗೆ ಬರಲು ಬಯಸಿದರೆ, ನೀವು ರಾಜೀನಾಮೆ ನೀಡಬೇಕು, ಸ್ವಯಂಪ್ರೇರಿತ ನಿವೃತ್ತಿ ತೆಗೆದುಕೊಳ್ಳಬೇಕು ಮತ್ತು ಸೇವಾ ವೃತ್ತಿಯನ್ನು ತೊರೆಯಬೇಕು. ನೀವು ಡೆಪ್ಯುಟೇಶನ್‌ನಲ್ಲಿರಲು ಸಾಧ್ಯವಿಲ್ಲ... ಹೀಗೆ ಹೇಳಿ ನಾನು ಅವನನ್ನು ಮನವೊಲಿಸಿದೆ. ಐಎಎಸ್​ ಹುದ್ದೆ ಬಿಟ್ಟು ಮಾರುತಿಗೆ ಸೇರ್ಪಡೆಯಾದರೇ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದಿದ್ದೆ ಎಂದು ಸ್ಮರಿಸಿದರು.

ಖಟ್ಟರ್ ಕಂಪನಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರು. ವ್ಯವಸ್ಥಾಪಕ ನಿರ್ದೇಶಕರಾದರು ಮತ್ತು 2007ರವರೆಗೆ ಎಂಡಿ ಆಗಿ ಮುಂದುವರಿದರು. ದೀರ್ಘಾವಧಿ ಅವರ ಆಡಳಿತದಲ್ಲಿ ಮಾರುತಿ ಉತ್ತಮವಾಗಿ ಕಾರ್ಯನಿರ್ವಹಿದೆ. ನೌಕರರ ಮುಷ್ಕರವನ್ನು ಚೆನ್ನಾಗಿ ನಿಭಾಯಿಸಿದರು. ಅದೊಂದು ರಾಜಕೀಯವಾಗಿ ಪ್ರಚೋದಿತ ಮುಷ್ಕರವಾಗಿತ್ತು ಎಂದು ಭಾರ್ಗವ ಹೇಳಿದರು.

ABOUT THE AUTHOR

...view details