ಕರ್ನಾಟಕ

karnataka

ETV Bharat / business

ATM ಬಳಕೆದಾರರೇ,ನಿಮ್ಮ ಜೇಬಿಗೆ ಶೀಘ್ರದಲ್ಲೇ ಬೀಳಲಿದೆ ಹೊರೆ - undefined

ಮುಂದಿನ ದಿನಗಳಲ್ಲಿ1.13 ಲಕ್ಷ ಎಟಿಎಂಗಳನ್ನು ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಎಟಿಎಂಗಳು ಸೇವೆಯಿಂದ ಹಿಂದೆ ಸರಿಯುತ್ತಿವೆ. ಎಟಿಎಂಗಳ ಸೇವೆ ಸ್ಥಗಿತಗೊಳಿಸುವ ಬದಲು ಸೇವಾ ಶುಲ್ಕ ಹೆಚ್ಚಿಸಿ ಅವುಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಇದರ ಹೊರೆಯನ್ನು ಗ್ರಾಹಕರ ಮೇಲೆ ಹೇರಲಾಗುತ್ತದೆ.

ಸಾಂದರ್ಭಿಕ ಚಿತ್ರ: ಚಿತ್ರ ಕೃಪೆ: ಗೆಟ್ಟಿ

By

Published : Apr 30, 2019, 10:01 PM IST

ನವದೆಹಲಿ:ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್​ ಇರದಿದ್ದರೆ ದಂಡ, ಎಸ್​ಎಂಎಸ್ ಸೇವಾ ಶುಲ್ಕ, ನಿಗದಿಗಿಂತ ಹೆಚ್ಚುವರಿ ವಿತ್​ ಡ್ರಾ ಸೇರಿದಂತೆ ಇತರೆ ದಂಡ ಪಾವತಿಯಿಂದ ಹೈರಾಣಾಗಿರುವ ಎಟಿಎಂ ಗ್ರಾಹಕರಿಗೆ ಶೀಘ್ರವೇ ಮತ್ತೊಂದು ಹೊರೆ ಬೀಳಲಿದೆ.

ಕೆಲವೇ ದಿನಗಳಲ್ಲಿ ಎಟಿಎಂಗಳಲ್ಲಿ ಮಾಡುವ ಹಣಕಾಸು ವರ್ಗಾವಣೆಗಳ ಶುಲ್ಕದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಎಟಿಎಂ ವಲಯದ ಒಕ್ಕೂಟ ಮಾಹಿತಿ ನೀಡಿದೆ.

ಎಟಿಎಂ ನಿರ್ವಹಣೆಯ ವಹಿವಾಟು ಮೂಲಕ ನಿರೀಕ್ಷಿತ ಆದಾಯ ಸಿಗದಿರುವುದು ಹಾಗೂ ನಗದುರಹಿತ ವಹಿವಾಟು ಅಧಿಕವಾಗುತ್ತಿದ್ದು, ವಿತ್ ಡ್ರಾ ಬಳಕೆ ಪ್ರಮಾಣ ತಗ್ಗುತ್ತಿರುವುದು ವೆಚ್ಚದಲ್ಲಿ ಏರಿಕೆಯಾಗಲು ಕಾರಣವಾಗಿದೆ. ಹೀಗಾಗಿ, ಶುಲ್ಕದಲ್ಲಿ ಹೆಚ್ಚಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಟಿಎಂ ಉದ್ದಿಮೆ ವಲಯ ತಿಳಿಸಿದೆ.

ಎಟಿಎಂ ನಿರ್ವಹಣೆ ಕುರಿತು ನಿಯಮಗಳಲ್ಲಿ ಬದಲಾವಣೆಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 50ರಷ್ಟು ಎಟಿಎಂಗಳು ವಾಣಿಜ್ಯಾತ್ಮಕವಾಗಿ ನಡೆಸಲು ಸಾಧ್ಯವಾಗದೆ ಮುಚ್ಚುವ ಹಂತಕ್ಕೆ ಬಂದಿವೆ ಎಂದು ಒಕ್ಕೂಟ ಕಳೆದ ವರ್ಷವೇ ಎಚ್ಚರಿಕೆ ನೀಡಿತ್ತು.

ಸದ್ಯ, ದೇಶದಲ್ಲಿ 2.38 ಲಕ್ಷ ಎಟಿಎಂಗಳು ಸೇವೆಯಲ್ಲಿವೆ. ಮುಂದಿನ ದಿನಗಳಲ್ಲಿ 1.13 ಲಕ್ಷ ಎಟಿಎಂಗಳು ಅನಿವಾರ್ಯವಾಗಿ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಎಟಿಎಂಗಳು ಸೇವೆಯಿಂದ ಹಿಂದೆ ಸರಿಯುತ್ತಿವೆ. ಎಟಿಎಂಗಳ ಸೇವೆ ಸ್ಥಗಿತಗೊಳಿಸುವ ಬದಲು ಸೇವಾ ಶುಲ್ಕದಲ್ಲಿ ಹೆಚ್ಚಳ ಮಾಡಿ ಅವುಗಳನ್ನು ಉಳಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೆ, ಇದರ ಹೊರೆಯನ್ನು ಬ್ಯಾಂಕುಗಳು ನೇರವಾಗಿ ಗ್ರಾಹಕರ ಮೇಲೆ ಹೇರಲಿವೆ.

ಭದ್ರತೆಗೆ ಸಂಬಂಧಿಸಿದ ಕೆಲ ಮಾನದಂಡಗಳನ್ನು ಎಟಿಎಂಗಳು ಪಾಲಿಸಬೇಕೆಂದು ಆರ್​ಬಿಐ ಈ ಹಿಂದೆಯೇ ಸೂಚಿಸಿತ್ತು. ಆದರೆ, ಇದರ ಹೊರೆಯನ್ನು ಬ್ಯಾಂಕ್​ಗಳು ಅಥವಾ ಎಟಿಎಂ ನಿರ್ವಹಿಸುವ ಕಂಪನಿಗಳು ಭರಿಸಬೇಕು ಎಂಬುದುರ ಬಗ್ಗೆ ನಿರ್ಧಾರವಾಗಿಲ್ಲ. ಒಂದು ವೇಳೆ ಈ ವಿಚಾರ ಇತ್ಯರ್ಥಗೊಂಡರೆ ಎಟಿಎಂ ಶುಲ್ಕದಲ್ಲಿ ಶೇ 10-16ರಷ್ಟು ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

For All Latest Updates

TAGGED:

ABOUT THE AUTHOR

...view details