ಕರ್ನಾಟಕ

karnataka

ETV Bharat / business

'ಅಶೋಕ್ ಲೇಲ್ಯಾಂಡ್​' ಕಂಪನಿಯ ಶೋಕ ಗೀತೆ: ವಾಣಿಜ್ಯ​ ವೆಹಿಕಲ್​ ಮೇಲೆ ಕರಾಳ ಛಾಯೆ

ಕಳೆದ ತಿಂಗಳಲ್ಲಿ ಅಶೋಕ್ ಲೇಲ್ಯಾಂಡ್​ 8,780 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ 19,374 ಯೂನಿಟ್​ಗಳು ಮಾರಾಟ ಆಗಿದ್ದವು. ದೇಶಿಯ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಸೆಪ್ಟಂಬರ್​ ತಿಂಗಳಂದು 7,851 ಯೂನಿಟ್​ಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಈ ತಿಂಗಳಲ್ಲಿ 18,078 ಯೂನಿಟ್​ಗಳು ಮಾರಾಟ ಆಗಿದ್ದವು. ಈ ಒಂದು ವರ್ಷದ ಅವಧಿಯಲ್ಲಿ ಮಾರಾಟ ದರವು ಶೇ. 56.57ರಷ್ಟು ಇಳಿಕೆಯಾಗಿದೆ ಎಂದು ಅಶೋಕ್ ಲೇಲ್ಯಾಂಡ್ ಹೇಳಿದೆ.

ಸಾಂದರ್ಭಿಕ ಚಿತ್ರ

By

Published : Oct 2, 2019, 1:12 PM IST

ನವದೆಹಲಿ:ಹಿಂದೂಜಾ ಗ್ರೂಪ್​ನ ಅಶೋಕ್ ಲೇಲ್ಯಾಂಡ್​ ಕಂಪನಿಯು ಸೆಪ್ಟಂಬರ್​ ತಿಂಗಳ ವಾಹನ ಮಾರಾಟದಲ್ಲಿ ಶೇ. 55ರಷ್ಟು ಕುಸಿತ ದಾಖಲಿಸಿದೆ.

ಕಳೆದ ತಿಂಗಳಲ್ಲಿ ಅಶೋಕ್ ಲೇಲ್ಯಾಂಡ್​ 8,780 ವಾಹನಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷದ ಇದೇ ತಿಂಗಳಲ್ಲಿ 19,374 ಯೂನಿಟ್​ಗಳು ಮಾರಾಟ ಆಗಿದ್ದವು ಎಂದು ತಿಳಿಸಿದೆ.

ದೇಶಿಯ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಸೆಪ್ಟಂಬರ್​ ತಿಂಗಳಲ್ಲಿ 7,851 ಯೂನಿಟ್​ಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಈ ತಿಂಗಳಲ್ಲಿ 18,078 ಯೂನಿಟ್​ಗಳು ಮಾರಾಟ ಆಗಿದ್ದವು. ಈ ಒಂದು ವರ್ಷದ ಅವಧಿಯಲ್ಲಿ ಮಾರಾಟ ದರವು ಶೇ. 56.57ರಷ್ಟು ಇಳಿಕೆಯಾಗಿದೆ ಎಂದು ಹೇಳಿದೆ.

ದೇಶಿಯ ಮಧ್ಯಮ ಮತ್ತು ದೊಡ್ಡ ಗಾತ್ರದ ವಾಣಿಜ್ಯ ವಾಹನಗಳ ಮಾರಾಟದಲ್ಲಿಯೂ ಇಳಿಕೆಯಾಗಿದ್ದು, ಶೇ. 69ರಷ್ಟು ಇಳಿಕೆಯಾಗಿ 4,035 ಯೂನಿಟ್​ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ವರ್ಷದಲ್ಲಿ 13,056 ಯೂನಿಟ್​ಗಳನ್ನು ಮಾರಲಾಗಿತ್ತು. ಲಗು ವಾಹನಗಳ ಮಾರಾಟ ಸಹ ಶೇ. 24ರಷ್ಟು ಕ್ಷೀಣಿಸಿದ್ದು, ಸೆಪ್ಟಂಬರ್​ 3,816 ಯೂನಿಟ್​ಗಳು ಬಿಕರಿಯಾಗಿವೆ. 2018ರ ಇದೇ ತಿಂಗಳಲ್ಲಿ 5,022 ಯೂನಿಟ್​ಗಳು ಸೇಲ್​ ಆಗಿದ್ದವು. ಒಟ್ಟಾರೆ ವಾಹನಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ ಎಂದು ಕಂಪನಿ ಹೇಳಿಕೊಂಡಿದೆ.

ABOUT THE AUTHOR

...view details