ಚೆನ್ನೈ: ಆರ್ಥಿಕ ಕುಸಿತದಿಂದ ಆಟೊಮೊಬೈಲ್ ವಲಯದ ಲಗು ಮತ್ತು ಬೃಹತ್ ಗಾತ್ರದ ವಾಣಿಜ್ಯ ವಾಹನಗಳ ತಯಾರಿಕಾ ಕಂಪನಿಯಾದ ಅಶೋಕ್ ಲೇಲ್ಯಾಂಡ್, ಚೆನ್ನೈ ಘಟಕದಲ್ಲಿ 5 ದಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗುತ್ತಿದೆ.
ಆರ್ಥಿಕ ಹಿಂಜರಿತದ ಕರಾಳ ಛಾಯೆ... 5 ದಿನ ಉತ್ಪಾದನೆ ಸ್ಥಗಿತಗೊಳಿಸಿದೆಯಾ ಅಶೋಕ್ ಲೇಲ್ಯಾಂಡ್? - Economics Slowdown news
ವಾಣಿಜ್ಯ ವಾಹನ ತಯಾರಕಾ ಚೆನ್ನೈ ಘಟಕದ ಕೆಲಸಗಾರರು ಐದು ದಿನಗಳ ರಜೆಯ ಸೂಚನೆಯು ಅಶೋಕ್ ಲೇಲ್ಯಾಂಡ್‌ನಿಂದ ಸ್ವೀಕರಿಸಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿನ ಜಡತೆ ಮತ್ತು ಸಂಕೋಚಿತ ಬೆಳವಣಿಗೆಯೇ ಈ ಕ್ರಮಕ್ಕೆ ಕಾರಣ ಎಂದಿವೆ.
ವಾಣಿಜ್ಯ ವಾಹನ ತಯಾರಕಾ ಚೆನ್ನೈ ಘಟಕದ ಕಾರ್ಮಿಕರಿಗೆ ಐದು ದಿನ ರಜೆ ಘೋಷಿಸಲಾಗಿದೆ ಎಂದು ಮೂಲಗಳು ಹೇಳುತ್ತಿವೆ. ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿನ ಜಡತೆ ಮತ್ತು ಸಂಕೋಚಿತ ಬೆಳವಣಿಗೆಯೇ ಈ ಕ್ರಮಕ್ಕೆ ಕಾರಣ ಎಂದಿವೆ.
ಆಶೋಕ್ ಲೇಲ್ಯಾಂಡ್ ಆಡಳಿತ ಮಂಡಳಿಯ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯಿಸಿ, 'ಉತ್ಪಾದನೆ ಸ್ಥಗಿತಗೊಳಿಸುವಂತಹ ಯಾವುದೇ ಅಧಿಸೂಚನೆ ಕಂಪನಿ ವತಿಯಿಂದ ಹೊರಬಿದಿಲ್ಲ' ಎಂದಿದ್ದಾರೆ.ಒಂದು ವೇಳೆ ಉತ್ಪಾದನೆ ಕಡಿತ ಜಾರಿಯಾದರೆ ಘಟಕದಲ್ಲಿ ಕಾರ್ಯನಿರ್ವಹಿಸುವ 3,000 ಗುತ್ತಿಗೆ ಕಾರ್ಮಿಕರು ಸೇರಿ ಒಟ್ಟು 5,000 ನೌಕರರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.