ಮುಂಬೈ:ಸುದ್ದಿ ಪರವಾಗಿ ರೇಟಿಂಗ್‌ಗಳನ್ನು ತಿರುಚಿದ್ದಕ್ಕೆ ಪ್ರತಿಯಾಗಿ ರಿಪಬ್ಲಿಕ್ ಟಿವಿ ಚಾನಲ್ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಂದ 12,000 ಡಾಲರ್ (8,75,286 ರೂ.) ಪಡೆದಿರುವುದಾಗಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಮುಂಬೈ ಪೊಲೀಸರಿಗೆ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚಾನಲ್ ರೇಟಿಂಗ್‌ಗಳನ್ನು ತಿದ್ದಿದ ಆರೋಪದ ಮೇಲೆ ಮುಂಬೈ ಪೊಲೀಸರು ಸೋಮವಾರ 3600 ಪುಟಗಳ ಹೆಚ್ಚುವರಿ ಚಾರ್ಜ್‌ಶೀಟ್ ಅನ್ನು ಬಾರ್ಕ್‌ನ ಮಾಜಿ ಸಿಇಒ ರೊಮಿಲ್ ರಾಮ್‌ಗರ್ಹಿಯಾ ಮತ್ತು ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಸಿಇಒ ವಿಕಾಸ್ ಖಂಚಂದಾನಿ ವಿರುದ್ಧ ಸಲ್ಲಿಸಿದ್ದಾರೆ. 12 ಜನರ ವಿರುದ್ಧ 2020ರ ನವೆಂಬರ್‌ನಲ್ಲಿ ಮೊದಲ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು.
ಚಾರ್ಜ್‌ಶೀಟ್‌ನಲ್ಲಿ ರಿಪಬ್ಲಿಕ್ ನ್ಯೂಸ್ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ವಿದೇಶ ಪ್ರವಾಸಕ್ಕಾಗಿ ದಾಸ್‌ಗುಪ್ತಾ ಅವರಿಗೆ 12,000 ಡಾಲರ್ ಪಾವತಿಸಿದ್ದಾರೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ರಿಪಬ್ಲಿಕ್ ಟಿವಿಯ ಪರವಾಗಿ ರೇಟಿಂಗ್ ನಿರ್ವಹಿಸಿದ್ದಕ್ಕಾಗಿ ಪಾರ್ಥೋ ದಾಸ್‌ಗುಪ್ತಾ ಅವರಿಗೆ 40 ಲಕ್ಷ ರೂ. ನೀಡಲಾಗಿದೆ ಎಂಬುದು ಸಹ ದಾಖಲಾಗಿದೆ ಎನ್ನಲಾಗ್ತಿದೆ.