ನವದೆಹಲಿ:ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್‌ನ ನಿರ್ದೇಶಕ ಮಂಡಳಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ತೀರ್ಮಾನದಿಂದ ಗ್ರಾಹಕರು ಆತಂಕಗೊಂಡಿದ್ದಾರೆ.
ಇದರ ನಡುವೆ ಕೇಂದ್ರ ಸರ್ಕಾರ ಕೂಡ ಏಪ್ರಿಲ್ 3ರವರೆಗೆ ಬ್ಯಾಂಕ್ ವಹಿವಾಟಿಗೆ ತಡೆಯಾಜ್ಞೆ ನೀಡಿದೆ. ವಸೂಲಾಗದ ಸಾಲದ ಪ್ರಮಾಣ(NPA) ದ ಏರಿಕೆಯಿಂದ ಬ್ಯಾಂಕ್ ಬಿಕ್ಕಟ್ಟಿಗೆ ಸಿಲುಕಿದೆ. ಅನಿರೀಕ್ಷಿತ ಬಿಕ್ಕಟ್ಟಿನಿಂದ ಲಕ್ಷಾಂತರ ಹೂಡಿಕೆದಾರರು ಹಾಗೂ ಸಾವಿರಾರು ಉದ್ಯೋಗಿಗಳು ತಮ್ಮ ಉಳಿಕೆ, ಸಾಲದ ಬಗ್ಗೆ ತೀವ್ರ ಆತಂಕಗೊಂಡಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ನಡೆಗಳು ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಕೆಲವು ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಹಾಗೂ ಹಣಕಾಸು ಸಚಿವಾಲಯ ಉತ್ತರಗಳನ್ನು ನೀಡಿದೆ.
ನಿರ್ಬಂಧ ಸಮಯ:
ಠೇವಣಿದಾರರು ಯಾವುದೇ ವಿಧದ ಹೂಡಿಕೆಯ ಮೇಲಿಂದ ₹ 50,000 ಅಧಿಕ ಹಣ ಡ್ರಾ ಮಾಡಿಕೊಳ್ಳುವಂತಿಲ್ಲ. ಗ್ರಾಹಕ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದರೂ ಬ್ಯಾಂಕ್ಗಳು ಪಾವತಿ ಜವಾಬ್ದಾರಿ ₹ 50,000 ಮೀರುವಂತಿಲ್ಲ.
50,000 ರೂ. ಗರಿಷ್ಠ ನಗದು ಮಿತಿ ವಿನಾಯ್ತಿ:
* ಠೇವಣಿದಾರರ ಅಥವಾ ಅವನ ಮೇಲೆ ಅವಲಂಬಿತವಾಗಿರುವ ಯಾವುದೇ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಗೆ