ನವದೆಹಲಿ: ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಫೈನಾನ್ಸ್ ಸಾರ್ವಜನಿಕರಿಂದ 2,780 ಕೋಟಿ ರೂ. ಸಂಗ್ರಹಕ್ಕೆ ಮುಂದಾಗಿದೆ. ಒಂದು ಷೇರಿಗೆ 346-353 ರೂಪಾಯಿ ದರವನ್ನು ನಿಗದಿಪಡಿಸಿರುವುದಾಗಿ ಸಂಸ್ಥೆ ಹೇಳಿದೆ.
ಆರಂಭಿಕ ಷೇರು ಖರೀದಿಸಲು ಸಾರ್ವಜನಿಕರು ಚಂದಾದಾರಾಗಲು ಆಗಸ್ಟ್ 10 ರಿಂದ ಆರಂಭವಾಗಲಿ ಆ.12ಕ್ಕೆ ಮುಗಿಯಲಿದೆ ಎಂದು ಕಂಪನಿ ತಿಳಿಸಿದೆ. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) 500 ಕೋಟಿ ರೂ.ಗಳಿಗೆ ಒಟ್ಟುಗೂಡಿಸಿದ ಈಕ್ವಿಟಿ ಷೇರುಗಳ ಹೊಸ ಸಂಚಿಕೆಯನ್ನು ಒಳಗೊಂಡಿದೆ. ಪ್ರವರ್ತಕರು ಮತ್ತು ಅಸ್ತಿತ್ವದಲ್ಲಿರುವ ಷೇರುದಾರರಿಂದ 64,590,695 ವರೆಗಿನ ಇಕ್ವಿಟಿ ಷೇರುಗಳನ್ನು ಮಾರಾಟಕ್ಕೆ ಇಟ್ಟಿದೆ.
ಪ್ರೈಸ್ ಬ್ಯಾಂಡ್‌ನ ಮೇಲಿನ ತುದಿಯಲ್ಲಿ, ಐಪಿಒದಿಂದ 2,780 ಕೋಟಿ ರೂಪಾಯಿಗಳನ್ನು ಪಡೆಯುವ ನಿರೀಕ್ಷೆಯಿದೆ. ಹೊಸ ಸಂಚಿಕೆಯಿಂದ ಬರುವ ನಿವ್ವಳ ಆದಾಯವನ್ನು ಕಂಪನಿಯ ಶ್ರೇಣಿ -1 ಬಂಡವಾಳದ ಅವಶ್ಯಕತೆಗಳನ್ನು ಹೆಚ್ಚಿಸಲು ಬಳಸಲಾಗುವುದು. ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಫೈನಾನ್ಸ್ ವೆಸ್ಟ್‌ಬ್ರಿಡ್ಜ್, ಮಲಬಾರ್ ಇನ್ವೆಸ್ಟ್‌ಮೆಂಟ್ಸ್, ಸಿಕ್ವೊಯಾ ಕ್ಯಾಪಿಟಲ್, ಸ್ಟೆಡ್‌ವ್ಯೂ ಕ್ಯಾಪಿಟಲ್ ಮತ್ತು ಮ್ಯಾಡಿಸನ್ ಇಂಡಿಯಾದಂತಹ ಬಂಡವಾಳ ಹೂಡಿಕೆದಾರರಿಂದ ಅತಿ ಹೆಚ್ಚು ಬಂಡವಾಳ ಪ್ರಾಯೋಜಕತ್ವ ಹೊಂದಿದೆ.
ಮಾರಾಟಕ್ಕೆ ಇಟ್ಟಿರುವ ಒಟ್ಟು ಷೇರುಗಳಲ್ಲಿ ಅರ್ಧದಷ್ಟು ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಕ್ಯೂಐಬಿ), ಶೇ.35 ರಷ್ಟು ಚಿಲ್ಲರೆ ಹೂಡಿಕೆದಾರರಿಗೆ, ಉಳಿದ ಶೇ.15 ಅನ್ನು ಸಾಂಸ್ಥಿಕೇತರ ಹೂಡಿಕೆದಾರರಿಗೆ ಮೀಸಲಿಡಲಾಗಿದೆ. ಹೂಡಿಕೆದಾರರು ಕನಿಷ್ಠ 42 ಇಕ್ವಿಟಿ ಷೇರುಗಳನ್ನು ಬಿಡ್ ಮಾಡಬಹುದು. 2010 ರಲ್ಲಿ ಕಂಪನಿಯು ಆರಂಭವಾದಾಗಿನಿಂದ ಉತ್ತಮ ಆಸ್ತಿ ಗುಣಮಟ್ಟವನ್ನು ಹೊಂದಿದೆ. ಅತ್ಯಂತ ಕಡಿಮೆ ನಿಷ್ಕ್ರಿಯ ಸ್ವತ್ತುಗಳನ್ನು(ಎನ್‌ಪಿಎ) ಹೊಂದಿದೆ. ನಿರ್ವಹಣೆಯಲ್ಲಿರುವ ಸಂಸ್ಥೆಯ ಸ್ವತ್ತುಗಳು ಸಿಎಜಿಆರ್‌ನಲ್ಲಿ ಶೇಕಡಾ 34.54 ರಷ್ಟು ಏರಿಕೆಯಾಗಿ 4,067.76 ಕೋಟಿಗೆ ಏರಿಕೆಯಾಗಿದೆ.
ಇದನ್ನೂ ಓದಿ: ಐಪಿಒನಿಂದ 4 ಸಾವಿರ ಕೋಟಿ ಸಂಗ್ರಹದ ಗುರಿ; ಸೆಬಿಗೆ ದಾಖಲೆಗಳನ್ನು ಸಲ್ಲಿಸಿದ ನೈಕಾ
2021ರ ಮಾರ್ಚ್ ವೇಳೆಗೆ ಸ್ವ-ಉದ್ಯೋಗದ ಗ್ರಾಹಕರಿಗೆ ಸಾಲದ ನಿರ್ವಹಣೆ ಅಡಿ ಶೇ.72.05 ಸಾಲ ನೀಡಿದೆ. ಉಳಿದವು ಶೇಕಡಾ 27.95 ರಷ್ಟು ಸಂಬಳ ಪಡೆದ ವ್ಯಕ್ತಿಗಳಿಗೆ. ಕಂಪನಿಯು 190 ಶಾಖೆಗಳ ನೆಟ್‌ವರ್ಕ್ ಅನ್ನು ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಾದ್ಯಂತ ಗ್ರಾಹಕರನ್ನು ಹೊಂದಿದೆ.
ದಕ್ಷಿಣ ಭಾರತದ ಇತರ ಪ್ರಮುಖ ಮಾರುಕಟ್ಟೆಗಳಿಗೆ ತನ್ನ ತವರು ರಾಜ್ಯವಾದ ತಮಿಳುನಾಡಿನ ಹೊರಗೆ ತನ್ನ ಅಸ್ತಿತ್ವವನ್ನು ಯಶಸ್ವಿಯಾಗಿ ಬೆಳೆಸಿದೆ. ಆ ನಂತರ ಆಪ್ಟಸ್ ವ್ಯಾಲ್ಯೂ ಹೌಸಿಂಗ್ ಫೈನಾನ್ಸ್ ತನ್ನ ಶಾಖೆಯ ಜಾಲವನ್ನು ಮಹಾರಾಷ್ಟ್ರ, ಒಡಿಶಾ ಮತ್ತು ಛತ್ತೀಸ್‌ಗಢ ರಾಜ್ಯಗಳಲ್ಲಿ ದೊಡ್ಡ ವಸತಿ ಮಾರುಕಟ್ಟೆಗಳಲ್ಲಿ ವಿಸ್ತರಿಸಲು ಉದ್ದೇಶಿಸಿದೆ. ಐಸಿಐಸಿಐ ಸೆಕ್ಯುರಿಟೀಸ್, ಸಿಟಿಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ, ಎಡೆಲ್ವಿಸ್ ಫೈನಾನ್ಶಿಯಲ್ ಸರ್ವೀಸಸ್ ಮತ್ತು ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಈ ಕಂಪನಿಗೆ ಹೂಡಿಕೆ ಬ್ಯಾಂಕರ್‌ಗಳಾಗಿವೆ.