ಕರ್ನಾಟಕ

karnataka

ETV Bharat / business

ರಸ್ತೆ ಅಪಘಾತಗಳ ತಡೆಗೆ ಭಾರತಕ್ಕೆ ಬರಲಿದೆ ಗೂಗಲ್​ ಮ್ಯಾಪ್​: ಹೇಗಿರಲಿದೆ ಈ ಆ್ಯಪ್​​ನ ಫೀಚರ್​? - Google Map

ಇತ್ತೀಚೆಗೆ ಗೂಗಲ್ ಮ್ಯಾಪ್​ ಹೊಸ ಸುಧಾರಣೆಗಳನ್ನು ಘೋಷಿಸಿದ್ದು, ಅದು ದೃಷ್ಟಿ ದೋಷ ಹೊಂದಿರುವವರಿಗೆ ಹೆಚ್ಚು ಸುಲಭ ಹಾಗೂ ಸರಳವಾಗಿ ನ್ಯಾವಿಗೇಟ್ ಮಾಡಲು ನೆರವಾಗುತ್ತಿದೆ. ನೂತನ ಫೀಚರ್​ ನಾಲ್ಕು ರೀತಿಯಲ್ಲಿ ಘಟನೆಗಳನ್ನು ವರದಿ ಮಾಡುವ ಸಾಮರ್ಥ್ಯ ಹೊಂದಿದೆ. ಘಟನೆಯ ಸಂಭವಿಸುವಿಕೆ, ಮಾರ್ಗ ಮುಚ್ಚುವಿಕೆ, ವಿಕಲಚೇತನರ ವಾಹನಗಳು ಮತ್ತು ರಸ್ತೆ ಬದಿಯ ವಸ್ತುಗಳನ್ನು ತಿಳಿಸಲಿದೆ.

ಸಾಂದರ್ಭಿಕ ಚಿತ್ರ

By

Published : Oct 18, 2019, 6:34 PM IST

ಸ್ಯಾನ್​ ಫ್ರಾನ್ಸಿಸ್ಕೋ: ಗೂಗಲ್ ಇಂಕಾ ಮೊಬೈಲ್ ಪ್ಲಾಟ್‌ಫಾರ್ಮ್‌ನಲ್ಲಿ ವಾಹನ ಅಪಘಾತ ತಡೆಯ ವೇಗದ ಚಾಲನೆ, ಸ್ಪೀಡ್​ ಜಂಪ್​ ಮುನ್ಸೂಚನೆಯಂತಹ ರಸ್ತೆ ಸುರಕ್ಷಾ ವರದಿಯ ವೈಶಿಷ್ಟ್ಯಗಳನ್ನು ತನ್ನ ಐಒಎಸ್​​ ಹಾಗೂ ಆ್ಯಪಲ್​​ ಮೊಬೈಲ್​ನಲ್ಲಿ ತರಲು ನಿರ್ಧರಿಸಿದೆ.

ಇತ್ತೀಚೆಗೆ ಗೂಗಲ್ ಮ್ಯಾಪ್​ ಹೊಸ ಸುಧಾರಣೆಗಳನ್ನು ಘೋಷಿಸಿದ್ದು, ಅದು ದೃಷ್ಟಿದೋಷ ಹೊಂದಿರುವವರಿಗೆ ಹೆಚ್ಚು ಸುಲಭ ಹಾಗೂ ಸರಳವಾಗಿ ನ್ಯಾವಿಗೇಟ್ ಮಾಡಲು ನೆರವಾಗುತ್ತಿದೆ. ಇದು ವಾಕಿಂಗ್ ಟ್ರಿಪ್‌ಗಳಿಗಾಗಿ ವಿವರವಾದ ಧ್ವನಿ ಮಾರ್ಗದರ್ಶನ ಮತ್ತು ಹೊಸ ರೀತಿಯ ಮೌಖಿಕ ಪ್ರಕಟಣೆ ನೀಡುತ್ತದೆ. ಪ್ರಸ್ತುತ, ಇದು ಅಮೆರಿಕದಲ್ಲಿ ಇಂಗ್ಲಿಷ್‌ ಮತ್ತು ಜಪಾನ್‌ನಲ್ಲಿ ಜಪಾನೀಸ್‌ನಲ್ಲಿ ಭಾಷೆಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಲಭ್ಯವಿದೆ.

ಈ ನೂತನ ಫೀಚರ್​ ನಾಲ್ಕು ರೀತಿಯಲ್ಲಿ ಘಟನೆಗಳನ್ನು ವರದಿ ಮಾಡುವ ಸಾಮರ್ಥ್ಯ ಹೊಂದಿದೆ. ಘಟನೆ ಸಂಭವಿಸುವಿಕೆ, ಮಾರ್ಗ ಮುಚ್ಚುವಿಕೆ, ವಿಕಲಚೇತನರ ವಾಹನಗಳು ಮತ್ತು ರಸ್ತೆ ಬದಿಯ ವಸ್ತುಗಳನ್ನು ತಿಳಿಸಲಿದೆ. ಬಳಕೆದಾರ ಯಾವ ರಸ್ತೆಯಲ್ಲಿ ಸಂಚರಿಸುತ್ತಿದ್ದಾನೆ, ಆ ರಸ್ತೆಯಲ್ಲಿ ಎಷ್ಟು ವೇಗದಲ್ಲಿ ಸಂಚರಿಸುವುದು ಉತ್ತಮ ಎಂಬುದಕ್ಕೂ ಸಹ ಈ ಗೂಗಲ್​ ಮ್ಯಾಪ್​ ಸಹಾಯಕ್ಕೆ ಬರಲಿದೆ.

ABOUT THE AUTHOR

...view details