ನವದೆಹಲಿ:ಭಾರತದಲ್ಲಿ ಐಫೋನ್ 12 ಉತ್ಪನ್ನಗಳ ಜೋಡಣೆ ಕಾರ್ಯ ಪ್ರಾರಂಭಿಸಿದೆ ಎಂದು ಅಮೆರಿಕದ ಟೆಕ್ ದೈತ್ಯ ಸಂಸ್ಥೆ ಆ್ಯಪಲ್ ಹೇಳಿದೆ.
ಕಂಪೆನಿಯು ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಉತ್ಪಾದನಾ ಕಾರ್ಯಾಚರಣೆ ಕಾರ್ಯಾರಂಭ ಮಾಡಿದೆ. ನಮ್ಮ ಸ್ಥಳೀಯ ಗ್ರಾಹಕರಿಗಾಗಿ ಭಾರತದಲ್ಲಿ ಐಫೋನ್ 12 ಉತ್ಪಾದನೆ ಪ್ರಾರಂಭಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.
ಆ್ಯಪಲ್‌ನ ತೈವಾನೀಸ್ ಗುತ್ತಿಗೆ ತಯಾರಕ ಫಾಕ್ಸ್‌ಕಾನ್‌ನ ಭಾರತೀಯ ಘಟಕವು ತಮಿಳುನಾಡಿನ ತನ್ನ ಪ್ಲಾಂಟ್ನಲ್ಲಿ ಜೋಡಿಸಲಿದೆ ಎಂದು ಈ ಬಗ್ಗೆ ತಿಳಿದಿರುವ ಎರಡು ಮೂಲಗಳು ತಿಳಿಸಿವೆ. ಈ ಬಗ್ಗೆ ಫಾಕ್ಸ್‌ಕಾನ್ ತಕ್ಷಣ ಸ್ಪಂದಿಸಲಿಲ್ಲ. ಆದರೆ ಕ್ಲೈಂಟ್ನ ನಿರ್ದಿಷ್ಟ ಕೆಲಸದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: 4 ದಿನ ಬ್ಯಾಂಕ್ ಮುಷ್ಕರ.. ಹಣಕಾಸಿನ ಕೆಲಸ ಈಗಲೇ ಮುಗಿಸಿಕೊಳ್ಳಿ
ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವಿನ ವ್ಯಾಪಾರ ಸಮರದಲ್ಲಿ ಆ್ಯಪಲ್ ಉತ್ಪಾದನೆಯ ಕೆಲವು ಕ್ಷೇತ್ರಗಳನ್ನು ಚೀನಾದಿಂದ ಇತರ ಮಾರುಕಟ್ಟೆಗಳಿಗೆ ವರ್ಗಾಯಿಸುತ್ತಿದೆ. ಈ ಬಗ್ಗೆ ತಿಳಿದಿದ್ದ ವ್ಯಕ್ತಿಯೊಬ್ಬರು ನವೆಂಬರ್‌ನಲ್ಲಿ, ಫಾಕ್ಸ್‌ಕಾನ್ ತನ್ನ ಕೋರಿಕೆಯ ಮೇರೆಗೆ ಚೀನಾದಿಂದ ಕೆಲವು ಐಪ್ಯಾಡ್ ಮತ್ತು ಮ್ಯಾಕ್‌ಬುಕ್ ಜೋಡಣೆಯನ್ನು ವಿಯೆಟ್ನಾಂಗೆ ಸ್ಥಳಾಂತರಿಸುತ್ತಿದ್ದಾರೆ ಎಂದು ಹೇಳಿದ್ದರು.
ಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಮೂರನೇ ಸರಬರಾಜುದಾರ ಪೆಗಾಟ್ರಾನ್ ಒಟ್ಟಾಗಿ ಐದು ವರ್ಷಗಳಲ್ಲಿ ಭಾರತದಲ್ಲಿ ಐಫೋನ್‌ಗಳನ್ನು ತಯಾರಿಸಲು ಸುಮಾರು 900 ಮಿಲಿಯನ್ ಡಾಲರ್ ಹೂಡಲು ಬದ್ಧವಾಗಿವೆ. ಸ್ಮಾರ್ಟ್‌ಫೋನ್ ರಫ್ತು ಹೆಚ್ಚಿಸಲು ದೆಹಲಿಯ 6.7 ಬಿಲಿಯನ್ ಡಾಲರ್ ಯೋಜನೆ ಘೋಷಿಸಿದೆ.