ಕರ್ನಾಟಕ

karnataka

ETV Bharat / business

ಆ್ಯಪಲ್​ ಪ್ರಿಯರಿಗೆ ಸಂತಸದ ಸುದ್ದಿ: ಕಡಿಮೆ ಬೆಲೆಗೆ ಸಿಗಲಿದೆ ಐಫೋನ್.. ಹೇಗೆ ಗೊತ್ತೆ?

ಅಮೆರಿಕ- ಚೀನಾ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರದಿಂದ ಭಾರತದಲ್ಲಿ ಆ್ಯಪಲ್​ ಕಂಪನಿ ತನ್ನ ಉತ್ಪಾದನಾ ಘಟಕವನ್ನು ತೆರೆಯುವುದಾಗಿ ಹೇಳಿತ್ತು. ಈಗ ಚೆನ್ನೈ ತಯಾರಿಕ ಘಟಕದಲ್ಲಿ ಐಫೋನ್ ಎಸ್​ಇ, ಐಫೋನ್​ ಎಕ್ಸ್​ಆರ್​, ಐಫೋನ್​-6 ಎಸ್​ ಹಾಗೂ ಐಫೋನ್ -7 ಶ್ರೇಣಿ ಸೇರಿದಂತೆ ಇತರ ಮಾದರಿಯ ಹಳೆಯ ಫೋನ್​ಗಳ ತಯಾರಿಕೆ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

By

Published : Oct 22, 2019, 8:51 PM IST

ನವದೆಹಲಿ: ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಯಾದ ಆ್ಯಪಲ್ ಇಂಕಾ ಭಾರತದಲ್ಲಿ ತನ್ನ ಜನಪ್ರಿಯ ಐಫೋನ್​ ಮಾದರಿಗಳ ತಯಾರಿಕೆಯನ್ನು ಆರಂಭಿಸಿದೆ ಎಂಬುದು ವರದಿಯಾಗಿದೆ.

ಅಮೆರಿಕ - ಚೀನಾ ನಡುವೆ ನಡೆಯುತ್ತಿರುವ ವಾಣಿಜ್ಯ ಸಮರದಿಂದ ಭಾರತದಲ್ಲಿ ಆ್ಯಪಲ್​ ಕಂಪನಿ ತನ್ನ ಉತ್ಪಾದನ ಘಕವನ್ನು ತೆರೆಯುವುದಾಗಿ ಹೇಳಿತ್ತು. ಈಗ ಚೆನ್ನೈ ತಯಾರಿಕ ಘಟಕದಲ್ಲಿ ಐಫೋನ್ ಎಸ್​ಇ, ಐಫೋನ್​ ಎಕ್ಸ್​ಆರ್​, ಐಫೋನ್​-6 ಎಸ್​ ಹಾಗೂ ಐಫೋನ್ -7 ಶ್ರೇಣಿ ಸೇರಿದಂತೆ ಇತರ ಮಾದರಿಯ ಹಳೆಯ ಫೋನ್​ಗಳ ತಯಾರಿಕೆ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಆ್ಯಪಲ್​ ಉತ್ಪನ್ನಗಳಿಂದ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಿಮೆಯಾಗಲಿದೆ. ಇದರ ಹೊರತಾಗಿಯೂ ದರದಲ್ಲಿ ಯಾವುದೇ ರೀತಿಯಲೂ ಏರಿಕೆ ಮಾಡುವುದಿಲ್ಲ ಎಂದು ಆ್ಯಪಲ್​ ಭರವಸೆ ನೀಡಿದೆ. ಇಲ್ಲಿ ತಯಾರಾಗುವ ಆ್ಯಪಲ್​ ಉತ್ಪನ್ನಗಳು ವಿಯಾಟ್ನಾಂ, ಮೆಕ್ಸಿಕೊ, ಇಂಡೋನೇಷ್ಯಾ, ಮಲೇಷ್ಯಾ ಹಾಗೂ ತೈವಾನ್​ ರಾಷ್ಟ್ರಗಳಿಗೆ ರಫ್ತು ಮಾಡುವ ಯೋಜನೆ ರೂಪಿಸಿದೆ ಎನ್ನಲಾಗುತ್ತಿದೆ.

ಕಳೆದ ವರ್ಷ ಆ್ಯಪಲ್​ ತನ್ನ ಐಫೋನ್​ ಎಕ್ಸ್​ಆರ್​, ಐಫೋನ್​ ಎಕ್ಸ್​ಎಸ್​​ ಮತ್ತು ಎಕ್ಸ್​ಎಸ್​ ಮ್ಯಾಕ್ಸ್​ ಬಿಡುಗಡೆ ಮಾಡಿತ್ತು. ಇವುಗಳಲ್ಲಿ ಎ 12 ಬಯೋನಿಕ್​ ಚಿಪ್ಸ್​ ಒಳಗೊಂಡಂತೆ ಇತರ ವಿಶೇಷತೆಗಳನ್ನು ಅಳವಡಿಸಿತ್ತು. ಸದ್ಯ ₹ 76,900 ಮುಖಬೆಲೆಯಲ್ಲಿ ಬಿಡುಗಡೆಯಾದ ಈ ಗ್ಯಾಜೆಟ್​ಗಳು ಭಾರತದಲ್ಲಿ ₹ 44,900 ಆರಂಭಿಕ ಬೆಲೆಯಲ್ಲಿ ಮಾರಾಟ ಆಗುತ್ತಿವೆ. ಪ್ರಸ್ತುತ ಐಫೋನ್​ನ ಹಳೆಯ ಉತ್ಪಾದನೆಯನ್ನು ಭಾರತದಲ್ಲಿ ಆರಂಭಿಸಿರುವ ಕಂಪನಿಯು ಮುಂದಿನ ದಿನಗಳಲ್ಲಿ ಐಫೋನ್ 11 ಸೇರಿದಂತೆ ಎಲ್ಲ ಮಾದರಿಯ ಉತ್ಪನ್ನಗಳನ್ನು ತಯಾರಿಸಲು ಚಿಂತನೆ ನಡೆಸಿದೆ.

ಭಾರತದ ಸ್ಮಾರ್ಟ್​ಫೋನ್​ ಉದ್ಯಮದ ಭವಿಷ್ಯದಲ್ಲಿ ಐಫೋನ್​ ಪ್ರಮುಖ ಪಾತ್ರವಹಿಸಲಿದೆ. ಭಾರತ ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್​ಫೋನ್​ ಮಾರುಕಟ್ಟೆ ಆಗಿದೆ. ದುಬಾರಿ ಬೆಲೆಯ ಆ್ಯಪಲ್​ ಭಾರತದಲ್ಲಿ ಸ್ಥಳೀಯವಾಗಿ ಉತ್ಪಾದನೆ ಆಗುವುದುರಿಂದ ಶೇ. 20ರಷ್ಟು ಆಮದು ಸುಂಕ ಕಡಿತಗೊಳ್ಳಲಿದೆ. ಇದು ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ.

ABOUT THE AUTHOR

...view details