ಕರ್ನಾಟಕ

karnataka

ETV Bharat / business

ಅಪೊಲೊ ಆಸ್ಪತ್ರೆಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಗೆ ಚಾಲನೆ: ಪ್ರತಿ ಡೋಸ್‌ಗೆ 1,250 ರೂ. ದರ ನಿಗದಿ

ಕಾರ್ಯಕ್ರಮದ ಮೊದಲ ಹಂತವು ಸೋಮವಾರ ಹೈದರಾಬಾದ್‌ನಲ್ಲಿ ಮತ್ತು ವಿಶಾಖಪಟ್ಟಣಂನಲ್ಲಿ ಮೇ 18ರಿಂದ ಅಪೊಲೊ ಸೌಲಭ್ಯಗಳಲ್ಲಿ ಲಸಿಕೆಗಳನ್ನು ನೀಡುತ್ತಿದೆ. ಕೋವಿನ್‌ನಲ್ಲಿ ನೋಂದಣಿ ಸೇರಿದಂತೆ ಸರ್ಕಾರ ಶಿಫಾರಸು ಮಾಡಿದಂತೆ ವ್ಯಾಕ್ಸಿನೇಷನ್‌ ಎಸ್‌ಒಪಿ ಅನುಸರಿಸುತ್ತವೆ.

Sputnik
Sputnik

By

Published : May 18, 2021, 5:31 PM IST

ನವದೆಹಲಿ:ರಷ್ಯಾದ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಅವರೊಟ್ಟಿಗೆ ಕೋವಿಡ್​-19 ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಪ್ರಾರಂಭಿಸಲು ತಾವು ಸಹಕರಿಸುತ್ತಿದ್ದೇವೆ ಎಂದು ಅಪೊಲೊ ಆಸ್ಪತ್ರೆ ಮತ್ತು ಡಾ. ರೆಡ್ಡಿಸ್​ ಪ್ರಯೋಗಾಲಯಗಳು ತಿಳಿಸಿವೆ.

ಕಾರ್ಯಕ್ರಮದ ಮೊದಲ ಹಂತವು ಸೋಮವಾರ ಹೈದರಾಬಾದ್‌ನಲ್ಲಿ ಮತ್ತು ವಿಶಾಖಪಟ್ಟಣಂನಲ್ಲಿ ಮೇ 18ರಿಂದ ಅಪೊಲೊ ಸೌಲಭ್ಯಗಳಲ್ಲಿ ಲಸಿಕೆಗಳನ್ನು ನೀಡುತ್ತಿದೆ. ಕೋವಿನ್‌ನಲ್ಲಿ ನೋಂದಣಿ ಸೇರಿದಂತೆ ಸರ್ಕಾರ ಶಿಫಾರಸು ಮಾಡಿದಂತೆ ವ್ಯಾಕ್ಸಿನೇಷನ್‌ ಎಸ್‌ಒಪಿ ಅನುಸರಿಸುತ್ತವೆ.

ಇದನ್ನೂ ಓದಿ: ಪಿಂಚಣಿದಾರರಿಗೆ ತಮ್ಮ ಪೂರ್ಣ ಜೀವಮಾನದ ಕೊಡುಗೆ ಹಿಂಪಡೆಯಲು ಅನುಮತಿ ಸಾಧ್ಯತೆ!

ಈ ಪ್ರಾಯೋಗಿಕ ಹಂತವು ಡಾ. ರೆಡ್ಡಿಸ್​ ಮತ್ತು ಅಪೊಲೊ ಸಿಸ್ಟಮ್​ ಮತ್ತು ಕೋಲ್ಡ್​​​ಚೈನ್ ಲಾಜಿಸ್ಟಿಕ್ಸ್ ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ಲಭ್ಯತೆ ಮತ್ತು ಪ್ರವೇಶ ಸುಲಭಗೊಳಿಸಲು ನಾವು ಮಹತ್ವದ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನಮಗಿದೆ. ಕೋವಿಡ್​ ಲಸಿಕೆಗಳು ಸಮುದಾಯಕ್ಕೆ ದೊಡ್ಡ ಪಾತ್ರ ನಿರ್ವಹಿಸುತ್ತದೆ ಎಂದು ಅಪೊಲೊ ಆಸ್ಪತ್ರೆಗಳ ಅಧ್ಯಕ್ಷ ಕೆ ಹರಿ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಖಾಸಗಿ ವಲಯಕ್ಕೆ ವ್ಯಾಕ್ಸಿನೇಷನ್ ಕಾರ್ಯಕ್ರಮ ತೆರೆಯುವುದರೊಂದಿಗೆ, ಹೆಲ್ತ್‌ಕೇರ್ ಮೇಜರ್ ತನ್ನ ಆಸ್ಪತ್ರೆಯ ಜಾಲದಾದ್ಯಂತ ವ್ಯಾಕ್ಸಿನೇಷನ್ ಕೇಂದ್ರಗಳನ್ನು ತೆರೆಯುವ ಮೂಲಕ ವ್ಯಾಕ್ಸಿನೇಷನ್ ದರವನ್ನು ವೇಗಗೊಳಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ ಎಂದು ಹೇಳಿದರು.

ನಾವು ಕಾರ್ಪೊರೇಟ್‌ಗಳೊಂದಿಗೆ ಅವರ ಆವರಣದಲ್ಲಿ ವ್ಯಾಕ್ಸಿನೇಷನ್ ಕೈಗೊಳ್ಳಲು ಚರ್ಚಿಸುತ್ತಿದ್ದೇವೆ. ಪ್ರಸ್ತುತ ನಾವು ಅಪೊಲೊ ಆಸ್ಪತ್ರೆಗಳು, ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಗಳು ಮತ್ತು ಅಪೊಲೊ ಚಿಕಿತ್ಸಾಲಯಗಳು ಸೇರಿದಂತೆ ದೇಶಾದ್ಯಂತ 60 ಸ್ಥಳಗಳಲ್ಲಿ ಕೋವಿಡ್​ ಲಸಿಕೆ ನೀಡುತ್ತಿದ್ದೇವೆ ಎಂದರು.

ABOUT THE AUTHOR

...view details