ಕರ್ನಾಟಕ

karnataka

ETV Bharat / business

ಮಿಲೇನಿಯರ್ ಆಗಿ ವಿಮಾನ ಖರೀದಿಸಲು ಬಯಸುವವರಿಗೆ ಆನಂದ್ ಮಹೀಂದ್ರ ಕಿವಿಮಾತು -

ಲಲಿತ್ ಮಂಥಪಾಲ್​ ಎಂಬುವರು ತಮ್ಮ ಟ್ವಿಟರ್​ನಲ್ಲಿ'ನನಗೆ ಅನಿಸುತ್ತೆ ನೀವು (ಆನಂದ್ ಮಹೀಂದ್ರ) ಜೆಟ್ ಏರ್​ವೇಸ್​ನ ಖರೀದಿಸಬೇಕು' ಎಂದು ಆನಂದ್ ಅವರ ಖಾತೆಗೆ ಟ್ಯಾಗ್ ಮಾಡಿ ಬರೆದುಕೊಂಡಿದ್ದರು.

ಸಂಗ್ರಹ ಚಿತ್ರ

By

Published : Jun 29, 2019, 11:19 PM IST

Updated : Jun 29, 2019, 11:56 PM IST

ನವದೆಹಲಿ:ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೆಟ್​ ಏರ್​ವೇಸ್ ಸಂಸ್ಥೆ ಖರೀದಿಯ ಕುರಿತು ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಆನಂದ್​ ಮಹೀಂದ್ರ ಅವರ ಕಾಲೆಳೆದ ವ್ಯಕ್ತಿಗೆ ನಾಜೂಕಾಗಿ ಉತ್ತರಿಸಿದ್ದಾರೆ.

ಲಲಿತ್ ಮಂಥಪಾಲ್​ ಎಂಬುವರು ತಮ್ಮ ಟ್ವಿಟರ್​ನಲ್ಲಿ 'ನನಗೆ ಅನಿಸುತ್ತೆ ನೀವು (ಆನಂದ್ ಮಹೀಂದ್ರ) ಜೆಟ್ ಏರ್​ವೇಸ್‌ನ ಖರೀದಿಸಬೇಕು' ಎಂದು ಆನಂದ್ ಅವರ ಖಾತೆಗೆ ಟ್ಯಾಗ್ ಮಾಡಿ ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತ್ಯುತ್ತರ ನೀಡಿದ ಆನಂದ್ ಮಹೀಂದ್ರ ಅವರು, 'ನೀವು ಮಿಲೇನಿಯರ್​ ಆಗಲು ಬಯಸಿದರೆ, ಬಿಲಿಯನ್​ ಡಾಲರ್​ಗಳಿಂದ ಆರಂಭಿಸಿ ನಂತರ ವಿಮಾನಯಾನ (ಖರೀದಿ) ಆರಂಭಿಸಿ' ಎಂದು ಹೇಳಿದ್ದಾರೆ.ಈ ಬಗ್ಗೆ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದ್ದು, 6,560 ಜನರು ಲೈಕ್ ಮಾಡಿದ್ದಾರೆ. 897 ಹಿಂಬಾಲಕರು ರೀ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

Last Updated : Jun 29, 2019, 11:56 PM IST

For All Latest Updates

TAGGED:

ABOUT THE AUTHOR

...view details