ಮುಂಬೈ:ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಸ್ಥಗಿತಗೊಂಡಿದ್ದ ಮುಂಬೈ ಸ್ಥಳೀಯ ರೈಲ್ವೆ ಪ್ರಾರಂಭವಾಗಿದ್ದು, ಪ್ರಯಾಣಿಕನೊಬ್ಬ ರೈಲ್ವೆ ದ್ವಾರಕ್ಕೆ ಹಣೆ ಹಚ್ಚಿ ನಮಸ್ಕರಿಸಿದ್ದು ನೆಟ್ಟಿಗರ ಮನಗೆದ್ದಿದೆ.
ಲೋಕಲ್ ಟ್ರೈನ್ಗೆ ನಮಿಸಿದ ಪ್ರಯಾಣಿಕ: 'ಭಾರತದ ಆತ್ಮ ಹೀಗೇ ಇರಲಿ' ಎಂದ ಆನಂದ್ ಮಹೀಂದ್ರಾ - ಆನಂದ್ ಮಹೀಂದ್ರಾ ಇತ್ತೀಚಿನ ಸುದ್ದಿ
ನನ್ನ ಹೃದಯವನ್ನು ಮುಟ್ಟಿದ ಒಂದು ಕ್ಲಿಕ್. 11 ತಿಂಗಳ ನಂತರ ಹತ್ತುವ ಮುನ್ನ ಮುಂಬೈ ಲೋಕಲ್ ಅನ್ನು ಪೂಜಿಸುವ ಪ್ರಯಾಣಿಕ ಎಂದು ಗಾಡ್ಮ್ಯಾನ್ ಚಿಕನಾ ಎಂಬುವರು ಟ್ವೀಟ್ ಮಾಡಿದ್ದಾರೆ. ಇದನ್ನು ಉದ್ಯಮಿ ಆನಂದ ಮಹೀಂದ್ರಾ ರೀ ಟ್ವೀಟ್ ಮಾಡಿ, ಭಾರತದ ಆತ್ಮ ... ನಾವು ಅದನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮುಂಬೈ ಲೋಕಲ್ ಟ್ರೈನ್ ಇಲ್ಲಿನ ನಿವಾಸಿಗರ ನಿತ್ಯದ ಜೀವನಾಡಿ. 80 ಕಿ.ಮೀ. ಉದ್ದಕ್ಕೂ ಹಬ್ಬಿರುವ ಈ ರೈಲು ಜಾಲ ನಿತ್ಯ ಸುಮಾರು 80 ಲಕ್ಷ ಜನರನ್ನು ಹೊತ್ತೊಯ್ಯುತ್ತದೆ. ಕೊರೊನಾ ಲಾಕ್ಡೌನ್ನಿಂದಾಗಿ ಕಳೆದ ಹತ್ತು ತಿಂಗಳಿಂದ ನಿಂತಿತ್ತು. ಇದರಿಂದ ಇಡೀ ಮುಂಬೈ ಸ್ತಬ್ಧವಾದಂತೆ ಮಹಾನಗರದ ಉಸಿರಾಟವೇ ನಿಂತಂತಿದೆ ಎಂಬಂತೆ ಭಾಸವಾಗಿತ್ತು.