ನವದೆಹಲಿ: ಕೈಗಾರಿಕೋದ್ಯಮಿ ಹಾಗೂ ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿದ್ದು, ತಾವು ಕಂಡ ಚಿಕ್ಕ- ಚಿಕ್ಕ ಸಂಗತಿಗಳನ್ನು ಪ್ರಶಂಸಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಜೊತೆಗೆ ಇಂತಹ ಸಂಗತಿಗಳಿಗೆ ಪ್ರೋತ್ಸಾಹ ನೀಡಿ ಎಂದು ತಮ್ಮ ಅನುಯಾಯಿಗಳಿಗೆ ಸಲಹೆ ನೀಡುತ್ತಾರೆ.
ಮಕ್ಕಳ ಕೇರಂ ಬೋರ್ಡ್ ಆಟಕ್ಕೆ ಮನಸೋತ ಉದ್ಯಮಿ ಆನಂದ್ ಮಹೀಂದ್ರ... ಅಂತಹದ್ದೇನಿದೆ ಅದರಲ್ಲಿ? - ಆನಂದ್ ಮಹೀಂದ್ರ
ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸಕ್ರಿಯರಾಗಿದ್ದು, ತಾವು ಕಂಡ ಚಿಕ್ಕ- ಚಿಕ್ಕ ಸಂಗತಿಗಳನ್ನು ಪ್ರಶಂಸಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ. ಈಗ ಅಂತಹದ್ದೇ ಚಿತ್ರವೊಂದನ್ನು ಹಂಚಿಕೊಂಡಿದ್ದು, 'ವಾಟ್ಸ್ಆ್ಯಪ್ ವಂಡರ್ ಬಾಕ್ಸ್ಗೆ ಬಂದ ಫೋಟೋ ನೋಡಲು ಎಷ್ಟು ಸ್ಪೂರ್ತಿದಾಯಕವಾಗಿದೆ. ಭಾರತದಲ್ಲಿ ಶೂನ್ಯ ಬಡತನ ಹೊಂದಿದೆ ಎಂಬುದಕ್ಕೆ ತಡೆಯಲಾರದ ಪುರಾವೆಗಳು' ಎಂದು ಫೋಟೋ ಬಗ್ಗೆ ಬರೆದುಕೊಂಡಿದ್ದಾರೆ.
ಈಗ ಅಂತಹುದೇ ಒಂದು ಪೋಸ್ಟ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಕ್ಕಳ ಕೇರಂ ಬೋರ್ಡ್ ಆಟಕ್ಕೆ ಮನಸೋತಿದ್ದಾರೆ. ಈ ಬೆಳಗ್ಗೆ ಸ್ಪೂರ್ತಿದಾಯಕ ಫೋಟೋ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು 'ವಾಟ್ಸ್ಆ್ಯಪ್ ವಂಡರ್ ಬಾಕ್ಸ್'ನಿಂದ ಬಂದು ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ಬೆಳಗ್ಗೆ ನನ್ನ # ವಾಟ್ಸ್ಆ್ಯಪ್ ವಂಡರ್ ಬಾಕ್ಸ್ಗೆ ಬಂದ ಫೋಟೋ ನೋಡಲು ಎಷ್ಟು ಸ್ಪೂರ್ತಿದಾಯಕವಾಗಿದೆ. ಭಾರತದಲ್ಲಿ ಶೂನ್ಯ ಬಡತನ ಹೊಂದಿದೆ ಎಂಬುದಕ್ಕೆ ತಡೆಯಲಾರದ ಪುರಾವೆಗಳು...' ಎಂದು ಐದು ಮಕ್ಕಳು ನೆಲದ ಮೇಲೆ ಕೇರಂ ಬೋರ್ಡ್ ಮಾಡಿ ಆಟವಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.