ನವದೆಹಲಿ :ಸೂಯೆಜ್ ಕಾಲುವೆಯಲ್ಲಿ ಸಿಲುಕಿ ಸುಮಾರು ಒಂದು ವಾರ ಜಲಮಾರ್ಗವನ್ನು ನಿರ್ಬಂಧಿಸಿದ್ದ ದೈತ್ಯ ಕಂಟೇನರ್ ಎವರ್ ಗಿವನ್ ಹಡಗು ತೆರವಿನ ಬಗ್ಗೆ ಡೈರಿ ಬ್ರಾಂಡ್ ಅಮೂಲ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಡೂಡಲ್ ಒಂದನ್ನು ಹಂಚಿಕೊಂಡಿದ್ದು ನೆಟ್ಟಿಗರ ಮನಗೆದ್ದಿದೆ.
ತಮ್ಮ ಹೊಸ ಡೂಡಲ್ ಗ್ರಾಫಿಕ್‌ನಲ್ಲಿ ಅಮೂಲ್ ಬೇಬಿ, ಸೂಯೆಜ್ ಕಾಲುವೆಯ ಮರಳಿನ ರಾಶಿಯಲ್ಲಿ ಸಿಲುಕಿದ್ದ ಬೃಹತ್ ಕಂಟೇನರ್ ಹಡಗು ಮೇಲೆತ್ತಲು ಸಿಬ್ಬಂದಿ ಹರ ಸಾಹಸಪಟ್ಟರು. ಎವರ್ ಗಿವನ್‌ನ ನೀರಿನ ಮೇಲೆ ತೇಲಿಸಲು ದಣಿವರಿಯದೆ ಶ್ರಮಿಸಿದರು.