ಕರ್ನಾಟಕ

karnataka

ETV Bharat / business

'ಏರ್ ಇಂಡಿಯಾ' ಮಾರಾಟ ಸಮಿತಿಗೆ ಅಮಿತ್ ಶಾ ನಾಯಕತ್ವ -

ಏರ್ ಇಂಡಿಯಾ ಮಾರಾಟಕ್ಕೆ ನೂತನವಾಗಿ ರಚಿಸಲಾದ 'ಜಿಒಎಂ'ನಲ್ಲಿ ಶಾ ಮುಖ್ಯಸ್ಥರಾಗಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸದಸ್ಯರಾಗಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

By

Published : Jul 18, 2019, 8:56 PM IST

ನವದೆಹಲಿ: ಏರ್ ಇಂಡಿಯಾ ಮಾರಾಟದ ಹಿರಿಯ ಸಚಿವರ ಸಮಿತಿಗೆ (ಜಿಒಎಂ) ಗೃಹ ಸಚಿವ ಅಮಿತ್ ಶಾ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಈ ಹಿಂದೆ ನಾಯಕತ್ವ ವಹಿಸಿದ್ದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಮಿತಿಯಿಂದ ಕೈಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಏರ್ ಇಂಡಿಯಾ ಮಾರಾಟಕ್ಕೆ ನೂತನವಾಗಿ ರಚಿಸಲಾದ 'ಜಿಒಎಂ'ನಲ್ಲಿ ಶಾ ಮುಖ್ಯಸ್ಥರಾಗಿದ್ದಾರೆ. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ವಾಣಿಜ್ಯ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಸದಸ್ಯರಾಗಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಏರ್ ಇಂಡಿಯಾ ಸ್ಪೆಸಿಫಿಕ್ ಆಲ್ಟರ್​ನೇಟಿವ್​ ಮೆಕ್ಯಾನಿಸಮ್ (ಎಐಎಸ್ಎಎಂ) ಹೆಸರಿನ ಸಮಿತಿಯನ್ನು 2017ರ ಜೂನ್ ತಿಂಗಳಲ್ಲಿ ರಚಿಸಲಾಗಿತ್ತು. ಐದು ಸದಸ್ಯರನ್ನು ಹೊಂದಿದ್ದ ಈ ಸಮಿತಿಯಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನೇತೃತ್ವ ವಹಿಸಿದ್ದರು. ಅಂದಿನ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ರೈಲ್ವೆ ಸಚಿವ ಸುರೇಶ್ ಪ್ರಭು, ವಿದ್ಯುತ್ ಮತ್ತು ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸದಸ್ಯರಾಗಿದ್ದರು.

ಪ್ರಧಾನಿ ಮೋದಿ ಅವರ ಮೊದಲ ಅವಧಿಯಲ್ಲಿ ನಿರ್ವಹಣಾ ನಿಯಂತ್ರಣದೊಂದಿಗೆ ಏರ್ ಇಂಡಿಯಾದಲ್ಲಿನ ಸರ್ಕಾರದ ಶೇ. 76 ಪ್ರತಿಶತದಷ್ಟು ಪಾಲನ್ನು ಮಾರಲು ಮುಂದಾಗಿತ್ತು. 2018ರಲ್ಲಿ ಹೂಡಿಕೆದಾರರಿಂದ ಬಿಡ್‌ಗಳಿಗೆ ಆಹ್ವಾನಿಸಿದ್ದರೂ ಖರೀದಿಸಲು ಹೂಡಿಕೆದಾರರು ಮುಂದೆ ಬರಲಿಲ್ಲ. ಈಗ ಶಾ ನೇತೃತ್ವದಲ್ಲಿ ನೂತನ ಸಮಿತಿ ರಚಿಸಿದೆ.

For All Latest Updates

TAGGED:

ABOUT THE AUTHOR

...view details