ನವದೆಹಲಿ: ಅಮೆಜಾನ್ ಮತ್ತು ಫ್ಯೂಚರ್ ಗ್ರೂಪ್ ನಡುವಿನ ಕಾನೂನು ಜಗಳ ಮುಂದುವರಿದಿದ್ದು, ಫ್ಯೂಚರ್ ಗ್ರೂಪ್ನಲ್ಲಿ ಕೆಲಸ ಮಾಡುವ ಮಹಿಳೆಯರ ತಂಡ, ವಿಮೆನ್ ಆಫ್ ಬಿಗ್ ಬಜಾರ್ ಎಸ್‌ಒಎಸ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಪತ್ರ ಬರೆದು, ತಮ್ಮ ಜೀವನೋಪಾಯ ರಕ್ಷಿಸಲು ಬೆಂಬಲ ನೀಡುವಂತೆ ಕೋರಿದೆ.
ಫ್ಯೂಚರ್ ರಿಟೇಲ್ ಮತ್ತು ರಿಲಯನ್ಸ್ ಒಂದು ಒಪ್ಪಂದ ಮಾಡಿಕೊಂಡಿದ್ದು, ಆ ಮೂಲಕ ಫ್ಯೂಚರ್ ರಿಟೇಲ್ ಅಂಗಡಿಗಳನ್ನು ರಿಲಯನ್ಸ್ ನಿರ್ವಹಿಸುವುದನ್ನು ಮುಂದುವರೆಸಿದೆ. ಫ್ಯೂಚರ್ ರಿಟೇಲ್ ಸರಬರಾಜುದಾರರು ಮತ್ತು ಮಾರಾಟಗಾರರಿಗೆ ನೀಡಬೇಕಿರುವ ಎಲ್ಲಾ ಸಾಲ ಮತ್ತು ಬಾಕಿ ಹಣ ನೀಡಲು ರಿಲಯನ್ಸ್ ಸಹ ಬದ್ಧವಾಗಿದೆ ಎಂದು ಪ್ರಧಾನಿ ಅವರಿಗೆ ಬರೆದ ಬಿಗ್ ಬಜಾರ್ ಎಸ್‌ಒಎಸ್ ತಂಡ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.