ನವದೆಹಲಿ:ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ (ಆರ್ಐಎಲ್) ತನ್ನ ಮಹತ್ವಾಕಾಂಕ್ಷೆಯ ಉದ್ದೇಶಿತ ಶೈಕ್ಷಣಿಕ ಕೇಂದ್ರ ಜಿಯೋ ಇನ್ಸ್ಟಿಟ್ಯೂಟ್ ₹ 1,500 ಕೋಟಿ ವಿನಿಯೋಗಿಸುವುದಾಗಿ ಉನ್ನತ ಮಟ್ಟದ ಸಮಿತಿಯ (ಇಇಸಿ) ಮುಂದಿಟ್ಟಿದೆ.
ಮುಂದಿನ ಎರಡು ವರ್ಷಗಳಲ್ಲಿ ಈ ಹಣ ಹೂಡಿಕೆ ಆಗಲಿದ್ದು, ಪ್ರಸ್ತಾಪಿತ ಶೈಕ್ಷಣಿಕ ಕೇಂದ್ರದಲ್ಲಿ ವರ್ಲ್ಡ್ ಕ್ಲಾಸ್ ಕಲಿಕಾ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.
ಮುಕೇಶ್ ಅಂಬಾನಿ ನೇತೃತ್ವದ ತಂಡವು ಇನ್ಸ್ಟಿಟ್ಯೂಟ್ ಸ್ಥಾಪನೆಗೆ ಶೈಕ್ಷಣಿಕ ಹಾಗೂ ಸಾಂಸ್ಥಿಕ ಕ್ಷೇತ್ರದ ಪರಿಣಿತರಾದ ಅಮೆರಿಕದ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯ ಮತ್ತು ನಾರ್ತ್ವೆಸ್ಟ್ ವಿವಿ ಹಾಗೂ ಸಿಂಗಾಪೂರದ ನನ್ಯಂಗ್ ತಾಂತ್ರಿಕ ವಿವಿಯ ಚ ಅವರೊಂದಿಗೆ ಚರ್ಚಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೂ ಮಾಹಿತಿ ನೀಡಿದ್ದಾರೆ.
ಈ ಇನ್ಸ್ಟಿಟ್ಯೂಟ್ನ ಉಸ್ತುವಾರಿ ವಹಿಸಿಕೊಂಡ ರಿಲಯನ್ಸ್ ಫೌಂಡೇಷನ್ನ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಯು ಈಗಾಗಲೇ ₹ 775 ಕೋಟಿ ಬಂಡವಾಳ ಹೂಡಿದೆ. 2020ರ ಹಣಕಾಸು ವರ್ಷದಲ್ಲಿ ಮತ್ತೆ ₹ 600 ಕೋಟಿ ಹಣ ತೊಡಗಿಸಲಿದೆ. 2019 ಸೆಪ್ಟೆಂಬರ್ ಹಾಗೂ 2020 ಅಕ್ಟೊಬರ್ ಅವಧಿಯಲ್ಲಿ ಬೋಧಕರ ಮತ್ತು ಅಧಿಕಾರಿ ವರ್ಗದ ನೇಮಕಾತಿ ನಡೆಯಲಿದೆ. 2021-2022ರ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಆರಂಭವಾಗಲಿದೆ ಎಂದು ಇಇಸಿಗೆ ಮಾಹಿತಿ ನೀಡಿದೆ.