ನವದೆಹಲಿ: ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಕಂಪನಿಯ ಸಿಇಓ ಜೆಫ್ ಬೆಜೋಸ್ ವಿಶ್ವದ ಅತೀ ಶ್ರೀಮಂತ ವ್ಯಕ್ತಿ. ತಮ್ಮ ಅಗಾದ ಸಂಪತ್ತನ್ನು ನಿತ್ಯ ಹೇಗೆ ವಿನಿಯೋಗಿಸತ್ತಾರೆ ಎಂಬುದರ ವರದಿ ಇದು.
ಬ್ಲೂಮ್ಬರ್ಗ್ ವಿಶ್ಲೇಷಣೆಯ ಪ್ರಕಾರ, 2018ರಲ್ಲಿ ಬೆಜೋಸ್ ಅವರ ಒಟ್ಟು ಸಂಪತ್ತು 8.7 ಲಕ್ಷ ಕೋಟಿ ರೂ.ಯಷ್ಟು (123 ಬಿಲಿಯನ್ ಡಾಲರ್) ಸಂಪತ್ತು ಹೊಂದಿದ್ದರು. ಇತ್ತೀಚೆಗೆ ತಮ್ಮ ಹೆಂಡತಿ ಮ್ಯಾಕೆಂಜಿ ಬೆಜೋಸ್ ಅವರಿಗೆ ವಿಚ್ಛೇದನ ನೀಡಿದ್ದು, 25 ವರ್ಷಗಳ ದಾಂಪತ್ಯ ಜೀವನವನ್ನು ಕಡಿದುಕೊಂಡಿದ್ದಾರೆ.
ಸದಾ ಮಾರಾಟ ಕೆಲಸದಲ್ಲಿ ತೊಡಗಿಸಿಕೊಳ್ಳುವ ಬೆಜೋಸ್ ಸಾಂದರ್ಭಿಕ ರಜೆ ತೆಗದುಕೊಂಡು ಕುಟುಂಬಸ್ಥರೊಂದಿಗೆ ವಿದೇಶಗಳಿಗೆ ಪ್ರಯಾಣ ಬೆಳೆಸುತ್ತಾರೆ. 2017ರಲ್ಲಿ ಬೆಜೋಸ್ ಕುಟುಂಬದವರು ರೋಮ್ಗೆ ತೆರಳಿದರು.
ಲಾಂಗ್ ನೌ ಫೌಂಡೇಷನ್ ಸ್ಥಾಪಿಸಿರುವ ಬೆಜೋಸ್, 10,000 ವರ್ಷ ಬಾಳಿಕೆ ಬರುವ ಗಡಿಯಾರದ ನಿರ್ಮಾಣಕ್ಕೆ 42 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಟೆಕ್ಸಾಸ್‌ನ ಸಿಯೆರಾ ಡಯಾಬ್ಲೊ ಪರ್ವತಗಳಲ್ಲಿ ವರ್ಷಕ್ಕೊಮ್ಮೆ ಟಿಕ್ ಮಾಡುವ ಗಡಿಯಾರವು ನಿರ್ಮಾಣ ಹಂತದಲ್ಲಿದೆ.
ಜೆಫ್ ಬೆಜೋಸ್ ಭಾರಿ ಬೆಲೆಯ ಗಡಿಯಾರ ಹೊಂದಿದ್ದಾರೆ. ಸ್ವಿಸ್ಕಿ ವಾಚ್‌ಮೇಕರ್ ಯುಲಿಸ್ ನಾರ್ಡಿನ್ ತಯಾರಿಸಿರುವ ಗಡಿಯಾರದ ಚಿಲ್ಲರೆ ದರವು 8,000 ದಿಂದ 12,000 ಡಾಲರ್ ಇದೆ. ಅತೀ ವಿರಳವಾದ ಹರಳು, ಚಿನ್ನದಿಂದ ತಯಾರಿಸಲಾಗಿದ್ದು, ಇದರ ಬಿಡಿ ಭಾಗಗಳು 1846ಕ್ಕಿಂತ ಹಿಂದಿನವು.
ಬೆಜೋಸ್ ಬ್ಲೂ ಆರಿಜಿನ್ ಎಂಬ ಏರೋಸ್ಪೇಸ್ ಕಂಪನಿಯ ಸ್ಥಾಪಕರು. ಬಾಹ್ಯಾಕಾಶ ಯಾನ ಮಾಡುವ ಕನಸು ಕಂಡವರ ಆಸೆ ಈಡೇರಿಸಲು ಈ ಮೂಲಕ ಪ್ರಯತ್ನಿಸುತ್ತಿದ್ದಾರೆ. ವಾಣಿಜ್ಯ ಉದ್ದೇಶದ ಬಾಹ್ಯಾಕಾಶ ಯಾನಕ್ಕೆ ಪ್ರತಿವರ್ಷ ಅಮೆಜಾನ್ ಷೇರುಗಳನ್ನು ಮಾರಾಟ ಮಾಡಿ ಸುಮಾರು 1 ಬಿಲಿಯನ್ ಡಾಲರ್ನಷ್ಟು ಸಂಪತ್ತು ಬ್ಲೂ ಆರಿಜಿನ್‌ಗೆ ನೀಡುವುದಾಗಿ ಹೇಳಿದ್ದಾರೆ.
ಬ್ಲೂ ಆರಿಜಿನ್ ಮತ್ತು 10,000 ವರ್ಷಗಳ ಗಡಿಯಾರ ಸಾಹಸೋದ್ಯಮದ ಭಾಗವಾಗಿದ್ದು ಎರ್‌ಬಿಎನ್‌ಬಿ, ಟ್ವಿಟರ್, ಉಬರ್ ಮತ್ತು ಇತರ ಅತ್ಯಾಧುನಿಕ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಗೂಗಲ್ ಸರ್ಚ್ ಎಂಜಿನ್ನಲ್ಲಿ ಸಹ 1 ಮಿಲಿಯನ್ ಡಾಲರ್ನಷ್ಟು ಹೂಡಿದ್ದಾರೆ.
ಬೆಜೋಸ್ ನ್ಯೂಯಾರ್ಕ್ನ ಎತ್ತರದ ಬಹುಮಹಡಿ ಕಟ್ಟಡದಲ್ಲಿ ಬೃಹತ್ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಮ್ಯೂಸಿಕ್ ಉದ್ಯಮದ ಕಾರ್ಯನಿರ್ವಾಹಕ ಟಾಮಿ ಮೊಟೊಲಾ ಅವರಿಂದ 1999ರಲ್ಲಿ ಖರೀದಿಸಿದ್ದು, 10,000 ಚದರ ಅಡಿಗಳ ಒಟ್ಟು ಮೂರು ಕನೆಕ್ಟಿವಿಟಿಯ ಅಪಾರ್ಟ್‌ಮೆಂಟ್ ಹೊಂದಿದೆ.
ಅಮೆಜಾನ್‌ನ ತವರೂರಾದ ಸಿಯಾಟಲ್‌ನಲ್ಲಿ ಬೆಜೋಸ್ ನಾಲ್ಕು ಡೌನ್ಟೌನ್ ಸಿಟಿ ಬ್ಲಾಕ್‌ಗಳನ್ನು ಖರೀದಿಸಿದ್ದಾರೆ. ಹಿಂದೆಂದೂ ಕಂಡಿರದಂತಹ ಅತ್ಯಾಧುನಿಕ ಕಚೇರಿಗಳನ್ನು ಇಲ್ಲಿ ನಿರ್ಮಿಸಲಿದ್ದಾರೆ. ಬೆಜೋಸ್ 2013ರಲ್ಲಿ ಅಮೆರಿಕದ ಪ್ರತಿಷ್ಠಿತ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯನ್ನು 250 ಮಿಲಿಯನ್ ಡಾಲರ್ಗೆ ಖರೀದಿಸಿದ್ದಾರೆ. ಸ್ಪ್ಯಾನಿಷ್ ಸೇರಿದಂತೆ ಇತರ ಸ್ಥಳೀಯ ಭಾಷೆಗಳ ಪತ್ರಿಕೆಗಳಲ್ಲಿ ಹೂಡಿಕೆ ಮಾಡಿದ್ದಾರೆ.
'ಬೆಜೋಸ್ ಫ್ಯಾಮಿಲಿ ಫೌಂಡೇಷನ್', ಬೆಜೋಸ್ ಅವರ ಎಲ್ಲ ಸಾಮಾಜಕ ಕಾರ್ಯಗಳ ವ್ಯವಹಾರವನ್ನು ನಿರ್ವಹಿಸುತ್ತದೆ. ಮಾರ್ಕ್ ಜುಕರ್‌ಬರ್ಗ್ ಮತ್ತು ಬಿಲ್ ಗೇಟ್ಸ್ ಅವರಿಗೆ ಹೋಲಿಸಿದರೆ ಬೆಜೋಸ್ ಅವರ ಕೊಡುಗೆ ಕಡಿಮೆ.
ವಾಷಿಂಗ್ಟನ್‌ನ ಮದೀನಾದಲ್ಲಿರುವ ಬೆಜೋಸ್ ಎಸ್ಟೇಟ್, 10 ಎಕರೆಯಷ್ಟು ವಿಸ್ತಾರವಾಗಿದೆ. ಎರಡು ಮನೆಗಳು ಹೊಂದಿದ್ದು, ಪ್ರತಿಯೊಂದೂ ಮನೆ ಐದು ಮಲಗುವ ಕೋಣೆಗಳು ಮತ್ತು ನಾಲ್ಕು ಸ್ನಾನ ಗೃಹ ಇವೆ. ಇಲ್ಲಿಂದ ಅಮೆಜಾನ್‌ನ ಮುಖ್ಯ ಕಚೇರಿಯನ್ನು 15 ನಿಮಿಷದಲ್ಲಿ ತಲುಪಬಹುದು.