ನವದೆಹಲಿ: ಅಮೆಜಾನ್ ತನ್ನ ಸ್ವತಂತ್ರ ಪ್ರೈಮ್ ನೌ ಡೆಲಿವರಿ ಆ್ಯಪ್ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದು, ಎರಡು ಗಂಟೆಗಳ ವಿತರಣಾ ಆಯ್ಕೆ ಈಗ ಮುಖ್ಯ ಅಪ್ಲಿಕೇಷನ್ ಮತ್ತು ವೆಬ್‌ಸೈಟ್‌ನಲ್ಲೇ ಲಭ್ಯವಿರುತ್ತವೆ.
ಭಾರತ, ಜಪಾನ್ ಮತ್ತು ಸಿಂಗಾಪುರದಲ್ಲಿ ಈಗಾಗಲೇ ಪ್ರೈಮ್ ನೌ ಅನುಭವವನ್ನು ಅಮೆಜಾನ್‌ಗೆ ವರ್ಗಾಯಿಸಿದೆ. ಪ್ರೈಮ್ ನೌ ಅಪ್ಲಿಕೇಷನ್ ಮತ್ತು ವೆಬ್ಸೈಟ್ಗೆ ತೆಗೆದು ಹಾಕಲಾಗಿದೆ ಎಂದು ಕಂಪನಿ ತಿಳಿಸಿದೆ.
2019ರಲ್ಲಿ ಅಮೆರಿಕದಲ್ಲಿ ಅಮೆಜಾನ್ ಫ್ರೆಶ್ ಮತ್ತು ಹೋಲ್ ಫುಡ್ಸ್ ಮಾರುಕಟ್ಟೆಯಿಂದ ಎರಡು ಗಂಟೆಗಳ ವಿತರಣೆ ಮಾಡಲು ಪ್ರಾರಂಭಿಸಿದ್ದೇವೆ. ಜಾಗತಿಕವಾಗಿ, ನಾವು ನಮ್ಮ ಮೂರನೇ ವ್ಯಕ್ತಿಯ ಪಾಲುದಾರರು ಮತ್ತು ಸ್ಥಳೀಯ ಮಳಿಗೆಗಳನ್ನು ಪ್ರೈಮ್ ನೌ ಅಪ್ಲಿಕೇಷನ್ ಮೊದಲು ಬಾರಿಗೆ ಅಮೆಜಾನ್ ಶಾಪಿಂಗ್ಗೆ ಸೇರಿಸುತ್ತೇವೆ. ವೆಬ್‌ಸೈಟ್ ಈ ವರ್ಷದ ಕೊನೆಯಲ್ಲಿ ನಿವೃತ್ತಿಯಾಗಿದೆ ಎಂದು ಅಮೆಜಾನ್‌ನ ಸ್ಟೋರ್ ಉಪಾಧ್ಯಕ್ಷೆ ಸ್ಟೆಫೆನಿ ಲ್ಯಾಂಡ್ರಿ ಮಾಹಿತಿ ನೀಡಿದ್ದಾರೆ.