ಕರ್ನಾಟಕ

karnataka

ETV Bharat / business

ರಿಲಯನ್ಸ್‌ ಜತೆ 24,713 ಕೋಟಿ ರೂ. ಒಪ್ಪಂದ: ಫ್ಯೂಚರ್ ಗ್ರೂಪ್‌ಗೆ ನೋಟಿಸ್ ಕಳುಹಿಸಿದ ಅಮೆಜಾನ್

24,713 ಕೋಟಿ ರೂ. ಆಸ್ತಿ ಮಾರಾಟವು ಒಪ್ಪಂದಿತ ನಿಯಮ ಉಲ್ಲಂಘನೆ ಎಂದು ಆರೋಪಿಸಿ ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್.ಕಾಮ್ ಇಂಕ್, ಫ್ಯೂಚರ್ ಗ್ರೂಪ್‌ಗೆ ನೋಟಿಸ್ ಕಳುಹಿಸಿದೆ.

Amazon
ಅಮೆಜಾನ್

By

Published : Oct 8, 2020, 4:57 PM IST

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್​ಗೆ ಚಿಲ್ಲರೆ ವಹಿವಾಟಿನಡಿ 24,713 ಕೋಟಿ ರೂ. ಆಸ್ತಿ ಮಾರಾಟವು ಒಪ್ಪಂದಿತ ನಿಯಮ ಉಲ್ಲಂಘನೆ ಎಂದು ಆರೋಪಿಸಿ ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್.ಕಾಮ್ ಇಂಕ್, ಫ್ಯೂಚರ್ ಗ್ರೂಪ್‌ಗೆ ನೋಟಿಸ್ ಕಳುಹಿಸಿದೆ.

ನಾವು ಮಾಡಿಕೊಂಡ ಒಪ್ಪಂದದ ಹಕ್ಕುಗಳನ್ನು ಜಾರಿಗೊಳಿಸಲು ನಾವು ನಮ್ಮ ಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಈ ವ್ಯಾಜ್ಯವು ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ನಾವು ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಎಂದು ಸಿಯಾಟಲ್ ಮೂಲದ ಇ-ಕಾಮರ್ಸ್ ದೈತ್ಯ ವಕ್ತಾರರು ತಿಳಿಸಿದ್ದಾರೆ.

ಅಮೆಜಾನ್ ಕಳೆದ ವರ್ಷ ಫ್ಯೂಚರ್ ಕೂಪನ್ಸ್ ಲಿಮಿಟೆಡ್‌ನಲ್ಲಿ ಶೇ 49ರಷ್ಟು ಪಾಲು ಖರೀದಿಸಿದೆ. ಫ್ಯೂಚರ್​ ಕೂಪನ್‌ಗಳು ಭವಿಷ್ಯದ ಚಿಲ್ಲರೆ ವ್ಯಾಪಾರದಲ್ಲಿ ಶೇ 7.3ರಷ್ಟು ಪಾಲು ಹೊಂದಿವೆ. ಈ ವರ್ಷದ ಆಗಸ್ಟ್‌ನಲ್ಲಿ ಫ್ಯೂಚರ್ ತನ್ನ ಚಿಲ್ಲರೆ, ಸಗಟು, ಲಾಜಿಸ್ಟಿಕ್ಸ್ ಮತ್ತು ಉಗ್ರಾಣ ಘಟಕಗಳನ್ನು ರಿಲಯನ್ಸ್‌ಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದವು ನಿಯಂತ್ರಕ ಅನುಮೋದನೆಗಾಗಿ ಕಾಯುತ್ತಿದೆ.

ಈ ಬಗ್ಗೆ ಫ್ಯೂಚರ್ ಗ್ರೂಪ್‌ಗೆ ಸಲಹೆ ನೀಡುತ್ತಿರುವ ಮೂಲವೊಂದು ಪಿಟಿಐಗೆ ಫ್ಯೂಚರ್ ಕೂಪನ್‌ ಅಮೆಜಾನ್‌ನಿಂದ ನೋಟಿಸ್ ಸ್ವೀಕರಿಸಿದೆ ಎಂದು ಹೇಳಿವೆ.

ಕಿಶೋರ್ ಬಿಯಾನಿ ನೇತೃತ್ವದ ತಂಡವೊಂದು​ ಮಧ್ಯಸ್ಥಿಕೆಯ ಮೂಲಕ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಉದ್ದೇಶಿಸಿದೆ ಎಂದು ಬಲ್ಲ ಮೂಲವೊಂದು ತಿಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ (ಆರ್ಐಎಲ್) ಮತ್ತು ಫ್ಯೂಚರ್ ಗ್ರೂಪ್​ಗೆ ಇ-ಮೇಲ್ ಕಳುಹಿಸಲಾಗಿದ್ದು, ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ನಿಧಿ ಸಂಗ್ರಹದ ಹಾದಿಯಲ್ಲಿದ್ದು, ಸಿಲ್ವರ್ ಲೇಕ್, ಕೆಕೆಆರ್, ಜನರಲ್ ಅಟ್ಲಾಂಟಿಕ್, ಮುಬಡಾಲಾ, ಜಿಐಸಿ, ಟಿಪಿಜಿ ಮತ್ತು ಎಡಿಐಎ ಸೇರಿದಂತೆ ಜಾಗತಿಕ ಹೂಡಿಕೆದಾರರಿಂದ ನಾಲ್ಕು ವಾರಗಳಲ್ಲಿ 37,700 ಕೋಟಿ ರೂ.ಯಷ್ಟು ಷೇರು ಮಾರಾಟ ಮಾಡಿದೆ.

ABOUT THE AUTHOR

...view details