ಕರ್ನಾಟಕ

karnataka

ETV Bharat / business

ಅಮೆಜಾನ್​ ಪ್ರೈಮ್​ನಲ್ಲಿ ಭಾರತ- ನ್ಯೂಜಿಲ್ಯಾಂಡ್​​ ಕ್ರಿಕೆಟ್​ ಪಂದ್ಯಗಳ ನೇರ ಪ್ರಸಾರ!

ಫುಟ್ಬಾಲ್, ಪ್ರೀಮಿಯರ್ ಲೀಗ್, ಎಟಿಪಿ ಟೂರ್ ಈವೆಂಟ್‌, ಡಬ್ಲ್ಯುಟಿಎ, ಯುಎಸ್ ಓಪನ್ (ಟೆನಿಸ್), ಯುಇಎಫ್‌ಎ ಚಾಂಪಿಯನ್ಸ್ ಸೇರಿದಂತೆ ವಿಶ್ವದಾದ್ಯಂತ ನಡೆಯುತ್ತಿರುವ ಲೈವ್ ಕ್ರೀಡೆಗಳ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆಗುತ್ತಿವೆ..

Amazon Prime
ಅಮೆಜಾನ್

By

Published : Nov 10, 2020, 5:21 PM IST

ನವದೆಹಲಿ :2025-26ರ ವೇಳೆಗಿನ ನ್ಯೂಜಿಲ್ಯಾಂಡ್​ ಹಾಗೂ ಭಾರತದ ನಡುವಣ ಕ್ರಿಕೆಟ್​ ಪಂದ್ಯಾವಳಿಗಳ ನೇರ ಪ್ರಸಾರದ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ಸ್ವಾಧೀನಪಡಿಸಿಕೊಂಡಿದ್ದಾಗಿ ತಿಳಿಸಿದೆ.

ಅಮೆಜಾನ್ ಮತ್ತು ನ್ಯೂಜಿಲ್ಯಾಂಡ್​ ಕ್ರಿಕೆಟ್ ಮಂಡಳಿಯ ನಡುವಿನ ಬಹು ವರ್ಷದ ಒಪ್ಪಂದದಡಿ, ಪುರುಷ ಮತ್ತು ಮಹಿಳಾ ಕ್ರಿಕೆಟ್‌ ಪಂದ್ಯಗಳು ಬರಲಿವೆ. ನ್ಯೂಜಿಲ್ಯಾಂಡ್​ನಲ್ಲಿ ನಡೆಯಲಿರುವ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಪ್ರೈಮ್ ವಿಡಿಯೋ ಒನ್​ ಸ್ಟಾಪ್ ಸ್ಟ್ರೀಮಿಂಗ್ ತಾಣವಾಗಲಿದೆ. 2021ರ ಕೊನೆಯಲ್ಲಿ ಏಕದಿನ, ಟಿ20 ಮತ್ತು ಟೆಸ್ಟ್‌ ಪಂದ್ಯಗಳು ಪ್ರಾರಂಭವಾಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆಜಾನ್ ಪ್ರೈಮ್ ವಿಡಿಯೋ ಪ್ರಮುಖ ಕ್ರಿಕೆಟಿಂಗ್ ಮಂಡಳಿಯಿಂದ ವಿಶೇಷ ಲೈವ್ ಕ್ರಿಕೆಟ್ ಹಕ್ಕು ಪಡೆದ ಮೊದಲ ಭಾರತೀಯ ಸ್ಟ್ರೀಮಿಂಗ್ ಸೇವೆಯಾಗಿದೆ. ಈ ಒಪ್ಪಂದವು 2022ರ ಆರಂಭದಲ್ಲಿ ಟೀಮ್ ಇಂಡಿಯಾದ ನ್ಯೂಜಿಲ್ಯಾಂಡ್​ ಪ್ರವಾಸ ಮತ್ತು ಎರಡನೇ ಪ್ರವಾಸವನ್ನು ಒಳಗೊಂಡಿದೆ. ಅದರ ದಿನಾಂಕಗಳನ್ನು ನಂತರ ಪ್ರಕಟಿಸಲಾಗುವುದು.

ಫುಟ್ಬಾಲ್, ಪ್ರೀಮಿಯರ್ ಲೀಗ್, ಎಟಿಪಿ ಟೂರ್ ಈವೆಂಟ್‌, ಡಬ್ಲ್ಯುಟಿಎ, ಯುಎಸ್ ಓಪನ್ (ಟೆನಿಸ್), ಯುಇಎಫ್‌ಎ ಚಾಂಪಿಯನ್ಸ್ ಸೇರಿದಂತೆ ವಿಶ್ವದಾದ್ಯಂತ ನಡೆಯುತ್ತಿರುವ ಲೈವ್ ಕ್ರೀಡೆಗಳ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಆಗುತ್ತಿವೆ.

For All Latest Updates

ABOUT THE AUTHOR

...view details