ಕರ್ನಾಟಕ

karnataka

ETV Bharat / business

ಕೊರೊನಾ ಬಿಕ್ಕಟ್ಟಿನ ಮಧ್ಯೆ ಅಮೆಜಾನ್​ನಿಂದ ಸಾವಿರಾರು ಉದ್ಯೋಗ ಸೃಷ್ಟಿ - ಅಮೆಜಾನ್ ಇಂಡಿಯಾ

ಅಮೆಜಾನ್ ಡಾಟ್​ ಇನ್ 15 ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಗೋದಾಮು ಕೇಂದ್ರಗಳನ್ನು ಹೊಂದಿದ್ದು, ಒಟ್ಟು 32 ದಶಲಕ್ಷ ಘನ ಅಡಿಗಳಷ್ಟು ಸಂಗ್ರಹ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

job opportunities
ಉದ್ಯೋಗ ಸೃಷ್ಟಿ

By

Published : Jul 24, 2020, 8:48 PM IST

ನವದೆಹಲಿ: ಹಬ್ಬದ ಋತುವಿಗೂ ಮುನ್ನ ದೇಶದಲ್ಲಿ 10 ಹೊಸ ಗೋದಾಮುಗಳನ್ನು ಕಾರ್ಯರೂಪಕ್ಕೆ ತರಲು ಇ-ಕಾಮರ್ಸ್ ದೈತ್ಯ ಅಮೆಜಾನ್ ಯೋಜಿಸುತ್ತಿದ್ದು, ದೇಶದಲ್ಲಿ ಸಾವಿರಾರು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಮುಂದಾಗಿದೆ.

ಅಮೆಜಾನ್ ಡಾಟ್​ ಇನ್ 15 ರಾಜ್ಯಗಳಲ್ಲಿ 60ಕ್ಕೂ ಹೆಚ್ಚು ಗೋದಾಮು ಕೇಂದ್ರಗಳನ್ನು ಹೊಂದಿದ್ದು, ಒಟ್ಟು 32 ದಶಲಕ್ಷ ಘನ ಅಡಿಗಳಷ್ಟು ಸಂಗ್ರಹ ಸಾಮರ್ಥ್ಯ ಹೊಂದಿದೆ ಎಂದು ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

60ಕ್ಕೂ ಅಧಿಕ ವಿಸ್ತರಿತ ಕೇಂದ್ರಗಳ ನೆಟ್‌ವರ್ಕ್‌, ಸ್ಪರ್ಧಾತ್ಮಕ ವೇತನದೊಂದಿಗೆ ಸಾವಿರಾರು ಉದ್ಯೋಗವಕಾಶಗಳನ್ನು ಸೃಷ್ಟಿಸಲು ನಾವು ಎದುರು ನೋಡುತ್ತಿದ್ದೇವೆ ಎಂದು ಗ್ರಾಹಕ ಪೂರೈಕೆ ಕಾರ್ಯಾಚರಣೆಗಳ ಉಪಾಧ್ಯಕ್ಷ ಅಖಿಲ್ ಸಕ್ಸೇನಾ ಹೇಳಿದ್ದಾರೆ.

ದೆಹಲಿ, ಮುಂಬೈ, ಬೆಂಗಳೂರು, ಪಾಟ್ನಾ, ಲಖನೌ, ಕೋಲ್ಕತಾ, ಹೈದರಾಬಾದ್, ಚೆನ್ನೈ, ಲುಧಿಯಾನ ಮತ್ತು ಅಹಮದಾಬಾದ್‌ನಲ್ಲಿ ಈ ಹೊಸ ಗೋದಾಮುಗಳನ್ನು ಸ್ಥಾಪಿಸಲಾಗುವುದು. ಈ ವಿಸ್ತರಣೆಯು ದೇಶಾದ್ಯಂತ ಗ್ರಾಹಕರು ಮತ್ತು ಮಾರಾಟಗಾರರಿಗೆ ತ್ವರಿತ, ವೇಗ ಮತ್ತು ಸ್ಥಿರವಾದ ಸೇವೆ ನೀಡಲು ನೆರವಾಗಲಿದೆ ಎಂದು ಅಮೆಜಾನ್ ಇಂಡಿಯಾ ಹೇಳಿದೆ.

ABOUT THE AUTHOR

...view details