ಬೆಂಗಳೂರು: ಇ-ಕಾಮರ್ಸ್ ದೈತ್ಯ ಅಮೆಜಾನ್ ಇಂಡಿಯಾ ನಗರದ ಆಯ್ದ ಭಾಗಗಳಲ್ಲಿ ಆಹಾರ ಮತ್ತು ದಿನಸಿ ವಸ್ತುಗಳನ್ನು ಪೂರೈಸುವ 'ಅಮೆಜಾನ್ ಫ್ರೆಶ್' ಸೇವೆಗೆ ಚಾಲನೆ ನೀಡಲಾಗಿದೆ ಎಂದು ಪ್ರಕಟಿಸಿದೆ.
ಆರ್ಡರ್ ಮಾಡಿದ 2 ಗಂಟೆಯೊಳಗೆ ಬರಲಿದೆ ಅಮೆಜಾನ್ನ ಈ ವಸ್ತುಗಳು - Amazon Fresh
ಅಮೆಜಾನ್ ಫ್ರೆಶ್ ಸ್ಟೋರ್ನ ಅಮೆಜಾನ್.ಇನ್ನಲ್ಲಿ ಗ್ರಾಹಕರು ಬೆಳಗ್ಗೆ 6ರಿಂದ ಮಧ್ಯರಾತ್ರಿಯವರೆಗೆ ಅತ್ಯಂತ ಅಗತ್ಯವಾದ ದಿನಸಿ ಪದಾರ್ಥಗಳನ್ನು ಆರ್ಡರ್ ಮಾಡಿದರೇ 2 ಗಂಟೆಗಳ ಒಳಗೆ ವಿತರಿಸಲಾಗುವುದು. ಈ ಸೇವೆಯು ನಗರದ ಆಯ್ದ ಭಾಗಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಅಮೆಜಾನ್ ಫ್ರೆಶ್ ಸ್ಟೋರ್ನ ಅಮೆಜಾನ್.ಇನ್ನಲ್ಲಿ ಗ್ರಾಹಕರು ಬೆಳಗ್ಗೆ 6ರಿಂದ ಮಧ್ಯರಾತ್ರಿಯವರೆಗೆ ಅತ್ಯಂತ ಅಗತ್ಯವಾದ ದಿನಸಿ ಪದಾರ್ಥಗಳನ್ನು ಆರ್ಡರ್ ಮಾಡಿದರೇ 2 ಗಂಟೆಗಳೊಳಗೆ ವಿತರಿಸಲಾಗುವುದು. ಈ ಸೇವೆಯು ನಗರದ ಆಯ್ದ ಭಾಗಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಅಮೆಜಾನ್ ಫ್ರೆಶ್‌ನಲ್ಲಿ ಗ್ರಾಹಕರು ತಮ್ಮ ಕಿರಾಣಿ ಅಂಗಡಿಗಳ ಅವಶ್ಯಕತೆಗಳಾದ 5,000ಕ್ಕೂ ಹೆಚ್ಚು ವಿಧದ ಹಣ್ಣು- ತರಕಾರಿಗಳು, ಹಾಲು, ಮಾಂಸ, ಐಸ್‌ಕ್ರೀಮ್, ಪ್ಯಾಕೇಜ್ಡ್ ಆಹಾರ ಸೇರಿದಂತೆ ಇತರೆ ಸಾಮಗ್ರಿಗಳನ್ನು ವಿತರಿಸಲಾಗುವುದು. ಈ ಸೇವೆಯು ಪ್ರೈಮ್ ನೌ ಆ್ಯಪ್ನಲ್ಲಿ ಮಾತ್ರವೇ ದೊರೆಯಲಿದೆ ಎಂದು ಹೇಳಿದೆ.