ನವದೆಹಲಿ:ಅಮೆಜಾನ್ ಸಂಸ್ಥಾಪಕ ಮತ್ತು ಸಿಇಒ ಜೆಫ್ ಬೆಜೊಸ್ ಅವರು ಭಾರತದ ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ ಬೆಂಬಲವಾಗಿ ನಿಲ್ಲಲು 1 ಬಿಲಿಯನ್ ಡಾಲರ್ (₹ 7,000 ಕೋಟಿ) ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಆನ್ಲೈನ್ ಮಾರುಕಟ್ಟೆಯ ದೈತ್ಯ ಅಮೆಜಾನ್, ಇದಕ್ಕೂ ಮೊದಲು ಅಮೆರಿಕ ಹೊರತುಪಡಿಸಿ ಭಾರತದಲ್ಲಿ ಸುಮಾರು 5.5 ಬಿಲಿಯನ್ ಡಾಲರ್ನಷ್ಟು ಹೂಡಿಕೆ ಮಾಡಿದೆ. 2025ರ ವೇಳೆಗೆ ಭಾರತದಲ್ಲಿ ತಯಾರಿಸಿದ ವಸ್ತುಗಳ ರಫ್ತು ಪ್ರಮಾಣವನ್ನು 10 ಬಿಲಿಯನ್ ಡಾಲರ್ಗೆ ಕೊಡಿಯ್ಯುವ ಗುರಿ ಇರಿಸಿಕೊಂಡಿದೆ.
ಭಾರತದೊಂದಿಗೆ ದೀರ್ಘಾವಧಿಯವರೆಗೆ ಸ್ನೇಹ ಸಂಬಂಧ ಇರಿಸಿಕೊಳ್ಳಲು ನಾವು ಬದ್ಧವಾಗಿದ್ದೇವೆ. ನಮ್ಮ ಕ್ರಿಯೆಯು ಪದಗಳಿಗಿಂತ ಹೆಚ್ಚು ಮಾತನಾಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಅಮೆಜಾನ್ ಭಾರತದಲ್ಲಿನ ಅತಿಸಣ್ಣ ಹಾಗೂ ಸಣ್ಣ ಉದ್ಯಮಗಳಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ. ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದ ಗ್ರಾಹಕರನ್ನು ತಲುಪಲು ಇದು ನೆರವಾಗಲಿದೆ ಎಂದು ಜೆಫ್ ಹೇಳಿದರು.
ಸಮೃದ್ಧಿಯ ಭಾರತದಲ್ಲಿ ಹೆಚ್ಚಿನ ಜನರು ಭಾಗವಹಿಸಬಹುದೆಂದು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯ ಭಾಗವಾಗಿದೆ. ಏನಾದರೂ ಕೆಲಸ ಮಾಡುವಾಗ ನೀವು ಅದರ ಮೇಲೆ ದ್ವಿಗುಣಗೊಳ್ಳಬೇಕು. ಅದಕ್ಕಾಗಿಯೇ ನಾವು ಇದನ್ನು ಮಾಡುತ್ತಿದ್ದೇವೆ. ಈ ಹೂಡಿಕೆಯು ಲಕ್ಷಾಂತರ ಭಾರತೀಯರನ್ನು ಅವರ ಭವಿಷ್ಯದ ಏಳಿಗೆಗೆ ಕೊಂಡ್ಯೊಯಲಿದೆ. ಭಾರತದ ಶ್ರೀಮಂತ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರತಿನಿಧಿಸುವ 'ಮೇಕ್ ಇನ್ ಇಂಡಿಯಾ' ಉತ್ಪನ್ನಗಳನ್ನು ಜಗತ್ತಿನ ಮುಂದಿಡಲು ಸಹ ಸಹಾಯಕವಾಗಲಿದೆ ಎಂದು ಅಮೆಜಾನ್ ಆಶಿಸಿದೆ.