ಕರ್ನಾಟಕ

karnataka

ETV Bharat / business

ಕೊರೊನಾ ನಡುವೆ 5,000 ಟೆಕಿಗಳಿಗೆ ಚೀನಾದ ಅಲಿಬಾಬಾ ಉದ್ಯೋಗದ ಆಫರ್​ - ಕೊರೊನಾ ವೈರಸ್

ನೆಟ್​ವರ್ಕ್, ಡೇಟಾಬೇಸ್, ಸರ್ವರ್​, ಚಿಪ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸೇರಿದಂತೆ ಇತರೆ ವಿಭಾಗಗಳಿಗೆ ವಿಶ್ವದಾದ್ಯಂತ 5,000 ತಂತ್ರಜ್ಞರನ್ನು ನೇಮಕ ಮಾಡಲು ಯೋಜಿಸಲಾಗುತ್ತಿದೆ ಎಂದು ಅಲಿಬಾಬಾ ತಿಳಿಸಿದೆ.

tech jobs
ಟೆಕ್ಕಿ

By

Published : Jun 9, 2020, 5:19 PM IST

ನವದೆಹಲಿ: ಮುಂದಿನ 10 ತಿಂಗಳಲ್ಲಿ ಅಗತ್ಯವಿರುವ ವೃತ್ತಿ ಕೌಶಲ್ಯಗಳನ್ನು ಹೊಂದಿರುವ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಚೀನಾದ ಕಂಪನಿ ಅಲಿಬಾಬಾ ತಿಳಿಸಿದೆ.

ಮುಂದಿನ ಪೀಳಿಗೆಯ ಡೇಟಾಸೆಂಟರ್‌ಗಳನ್ನು ನಿರ್ಮಿಸಲು ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚುವರಿ 28 ಬಿಲಿಯನ್ ಡಾಲರ್​ ಹೂಡಿಕೆ ಮಾಡುವುದಾಗಿ ಕ್ಲೌಡ್ ಕಂಪ್ಯೂಟಿಂಗ್ ಕಂಪನಿ ಏಪ್ರಿಲ್‌ನಲ್ಲಿ ಘೋಷಿಸಿತ್ತು.

ಈ ಹಿಂದೆ 3ರಿಂದ 5 ವರ್ಷಗಳು ಬೇಕಾಗಬಹುದೆಂದು ನಿರೀಕ್ಷಿಸಲಾಗಿದ್ದ ಚೀನಾದಲ್ಲಿನ ವ್ಯವಹಾರಗಳಿಗೆ ಡಿಜಿಟಲ್ ರೂಪಾಂತರದ ಪ್ರಯಾಣವು ಈಗ ಒಂದು ವರ್ಷದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಕಂಪನಿಯ ಕ್ಲೌಡ್ ಇಂಟೆಲಿಜೆನ್ಸ್ ಅಧ್ಯಕ್ಷ ಜೆಫ್ ಜಾಂಗ್ ಹೇಳಿದ್ದಾರೆ.

ಎಲ್ಲಾ ಕ್ಷೇತ್ರಗಳ ಜಾಗತಿಕ ಗ್ರಾಹಕರಿಂದ ಡಿಜಿಟಲ್ ಬದಲಾವಣೆಯ ವೇಗವಾಗಿ ಬೆಳೆಯುತ್ತಿದೆ. ಬೇಡಿಕೆಯೂ ಸಹ ತ್ವರಿತವಾಗುತ್ತಿದೆ. ನಾವು ವಿಶ್ವದರ್ಜೆಯ ಕ್ಲೌಡ್ ಸೇವೆಗಳನ್ನು ನೀಡುವ ಬದ್ಧತೆಯೊಂದಿಗೆ ಮುಂದುವರಿಯುತ್ತಿದ್ದೇವೆ ಎಂದು ಜಾಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂಪನಿಯು 2017ರಲ್ಲಿ ಅಲಿಬಾಬಾ ಡಾಮೊ ಅಕಾಡೆಮಿ ಸ್ಥಾಪಿಸಿತು. ಇದು ಯಂತ್ರ ಬುದ್ಧಿಮತ್ತೆ, ವಿಸನ್ ಕಂಪ್ಯೂಟಿಂಗ್, ಭಾಷಾ ಸಂಸ್ಕರಣೆ, ಮಾನವ-ಯಂತ್ರ ಸಂವಹನ, ಐಒಟಿ ಮತ್ತು ಹಣಕಾಸು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಮೂಲಭೂತ ತಂತ್ರಜ್ಞಾನ ಸಂಶೋಧನೆಗೆ ಜಾಗತಿಕ ಪ್ರತಿಭೆಗಳನ್ನು ಒಗ್ಗೂಡಿಸುತ್ತದೆ.

ಪೂರ್ಣ ವೇಗದಲ್ಲಿ ಮುಂದುವರಿಯಲು ವಿಶ್ವಾಸಾರ್ಹ ಕ್ಲೌಡ್​ ತಂತ್ರಜ್ಞಾನ ಮತ್ತು ಸೇವೆಗಳನ್ನು ನಿರ್ಮಿಸುತ್ತಿದ್ದೇವೆ. ಅತ್ಯಾಧುನಿಕ ಕ್ಲೌಡ್​ ಮತ್ತು ದತ್ತಾಂಶ ಗುಪ್ತಚರ ತಂತ್ರಜ್ಞಾನಗಳ ಅಭಿವೃದ್ಧಿಗೆ ಮುಂಚೂಣಿಯಲ್ಲಿರುವ ವಿಶ್ವಾದ್ಯಂತ ಐಟಿ ಪ್ರತಿಭೆಗಳಲ್ಲಿ ಹೂಡುಕಾಟ ನಡೆಸುತ್ತಿದ್ದೇವೆ ಎಂದು ಜಾಂಗ್ ಹೇಳಿದ್ದಾರೆ.

ABOUT THE AUTHOR

...view details