ನವದೆಹಲಿ: ಭಾರ್ತಿ ಏರ್‌ಟೆಲ್ 'ಏರ್‌ಟೆಲ್ ಆ್ಯಡ್ಸ್' ಎಂಬ ಸಂಸ್ಥೆಯನ್ನು ಪ್ರಾರಂಭಿಸುವುದರೊಂದಿಗೆ ಜಾಹೀರಾತು ಮಾರುಕಟ್ಟೆಗೆ ಪ್ರವೇಶಿಸಿದೆ ಎಂದು ಕಂಪನಿ ತಿಳಿಸಿದೆ. ಈ ಮೂಲಕ ತನ್ನ ಮೊಬೈಲ್, ಡಿಟಿಎಚ್ ಪ್ಲಾಟ್ಫಾರ್ಮ್ಗಳನ್ನು ಬಳಸುತ್ತಿರುವ ವಿಶಾಲ 320 ದಶಲಕ್ಷ ಬಳಕೆದಾರರಿಗೆ ಸಮ್ಮತಿ ಆಧರಿತ ಹಾಗೂ ಗೌಪ್ಯತೆ ಸುರಕ್ಷತೆಯ ಸೇವೆಗಳನ್ನು ನೀಡಲಿದೆ ಎಂದು ಹೇಳಿದೆ.
ಏರ್‌ಟೆಲ್ ಆಡ್ಸ್ ಸ್ಥಾಪಿಸುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತೀಯ ಜಾಹೀರಾತು ಉದ್ಯಮದಲ್ಲಿ ಹೆಜ್ಜೆ ಇಡಲು ಕಂಪನಿ ಪ್ರಯತ್ನಿಸುತ್ತಿದೆ. ಏರ್‌ಟೆಲ್ ತನ್ನ ಡೇಟಾ ಸೈನ್ಸ್ ಸಾಮರ್ಥ್ಯದಿಂದ, ಕಂಪನಿಗಳು ಹೆಚ್ಚು ಪ್ರಸ್ತುತವಾದ ಹಾಗೂ ಪರಿಣಾಮಕಾರಿ ಜಾಹೀರಾತುಗಳನ್ನು ಏರ್‌ಟೆಲ್ ಗ್ರಾಹಕರಿಗೆ ತೋರಿಸಬಹುದು. ಅಂದರೆ ಏರ್‌ಟೆಲ್ ಗ್ರಾಹಕರು ಅವರಿಗೆ ಸೂಕ್ತವಾದ ಜಾಹೀರಾತುಗಳನ್ನು ಮಾತ್ರ ತೋರಿಸಲಿದ್ದು, ಸ್ಪ್ಯಾಮ್ಗಳನ್ನು ನಿವಾರಿಸಲಿದೆ.