ನವದೆಹಲಿ: ಹೈದರಾಬಾದ್ ನಗರದ ವಾಣಿಜ್ಯ ನೆಟ್‌ವರ್ಕ್ ಮೂಲಕ ಲೈವ್ 5ಜಿ ಸೇವೆಯ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಟೆಲಿಕಾಂ ಆಪರೇಟರ್ ಭಾರ್ತಿ ಏರ್‌ಟೆಲ್ ತಿಳಿಸಿದೆ.
ಈ ಪ್ರಯೋಗದ ಮೂಲಕ ಭವಿಷ್ಯದಲ್ಲಿ ಏರ್‌ಟೆಲ್ ಗ್ರಾಹಕರಿಗೆ ಸಂಪೂರ್ಣ 5ಜಿ ಅನುಭವದ ಸ್ಪೆಕ್ಟ್ರಮ್ ಲಭ್ಯವಾಗಲಿವೆ. ಇದಕ್ಕಾಗಿ ಸರ್ಕಾರದ ಅನುಮೋದನೆ ಪಡೆಯಲಾಗುತ್ತಿದೆ. ಹೈದರಾಬಾದ್‌ನಲ್ಲಿ ನಡೆದ ಪ್ರಯೋಗವು ಕಂಪನಿಯ ತಂತ್ರಜ್ಞಾನ ಸಾಮರ್ಥ್ಯವನ್ನು ಎತ್ತಿ ತೋರಿಸಿದೆ ಎಂದು ಹೇಳಿದೆ.
ಪ್ರಯೋಗಾರ್ಥ ಪರೀಕ್ಷೆಯು ನಮ್ಮ ಹೂಡಿಕೆಗಳು ಭವಿಷ್ಯದಲ್ಲಿ ಪುರಾವೆಗಳಾಗಿ ಸಾಬೀತಾಗಲಿದೆ ಎಂದು ಸಂಸ್ಥೆಯ ಎಂಡಿ ಮತ್ತು ಸಿಇಒ ಗೋಪಾಲ್ ವಿಟ್ಟಲ್ ಹೇಳಿದರು.
ಇದನ್ನೂ ಓದಿ: ಯಾರ ಮಾತೂ ಕೇಳದ ಹಠಮಾರಿ ಮೋದಿ ಸರ್ಕಾರ ಕಾಲ್ಪನಿಕ ಬಜೆಟ್ ಮಂಡಿಸಲಿದೆ: ಚಿದು ವ್ಯಂಗ್ಯ
ಇಂತಹ ಸಾಮರ್ಥ್ಯ ಪ್ರದರ್ಶಿಸಿದ ಮೊದಲ ಆಪರೇಟರ್ ಏರ್‌ಟೆಲ್ ಆಗಿದ್ದು, ಎಲ್ಲೆಡೆ ಭಾರತೀಯರನ್ನು ಸಬಲೀಕರಣಗೊಳಿಸುವ ಅನ್ವೇಷಣೆಯಲ್ಲಿ ಹೊಸ ತಂತ್ರಜ್ಞಾನ ಪರಿಚಯಿಸಿದವರಲ್ಲಿ ನಾವೇ ಮೊದಲಿಗರು ಎಂದು ಮತ್ತೆ ತೋರಿಸಿದ್ದೇವೆ ಎಂದು ಅವರು ತೋರಿಸಿದರು.