ನವದೆಹಲಿ:ಟೆಲಿಕಾಂ ಆಪರೇಟರ್ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಬೆಲೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಅನಿಯಮಿತ ಧ್ವನಿ ಕರೆಗಳ ಗುಚ್ಚ ಮತ್ತು ಡೇಟಾ ಟಾಪ್ಅಪ್‌ಗಳು ಸೇರಿದಂತೆ ವಿವಿಧ ಪ್ರಿಪೇಯ್ಡ್ ಕೊಡುಗೆಗಳಿಗಾಗಿ ಶೇಕಡಾ 20-25 ರಷ್ಟು ಬೆಲೆ ಹೆಚ್ಚಳವನ್ನು ಘೋಷಿಸಿದೆ.
ಆರಂಭಿಕ ಕರೆಗಳ ಟಾರಿಫ್ ಯೋಜನೆಯ ದರವನ್ನು ಸುಮಾರು 25 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಆದರೆ, ಅನಿಯಮಿತ ಕರೆಗಳ ಗುಚ್ಚದ ಹೆಚ್ಚಳವು ಶೇ 20 ರಷ್ಟಿದೆ. ಪ್ರತಿ ಬಳಕೆದಾರರ ಸರಾಸರಿ ಮೊಬೈಲ್ ಬಳಕೆ ಆದಾಯ (ARPU) 200 ರೂ. ಮತ್ತು ಅಂತಿಮವಾಗಿ 300 ಆಗಿರಬೇಕು ಎಂಬುದು ಕಂಪನಿಯ ಉದ್ದೇಶವಾಗಿದೆ. ಪ್ರತಿ ಬಳಕೆದಾರ ಸರಾಸರಿ ಇಷ್ಟೊಂದು ಪ್ರಮಾಣದಲ್ಲಿ ಮಾತ್ರ ಆರೋಗ್ಯಕರ ವ್ಯವಹಾರ ಹಾಗೂ ಸಮಂಜಸ ಬಂಡವಾಳ ಹರಿದು ಬರಲಿದೆ ಎಂಬುದು ಕಂಪನಿಯ ಅಂದಾಜಾಗಿದೆ.
ಒಬ್ಬ ಗ್ರಾಹಕರ ಸರಾಸರಿ ಇಷ್ಟು ಪ್ರಮಾಣದ ಕರೆಗಳ ಬಳಕೆ ಮಾಡಿದರೆ ಕಂಪನಿ ಉಳಿವು ಹಾಗೂ ನೆಟ್ವರ್ಕ್ ಹಾಗೂ ಸ್ಪೆಕ್ಟ್ರಮ್ಗಳಲ್ಲಿ ಗಣನೀಯ ಹೂಡಿಕೆ ಮಾಡಲು ಸಹಾಯಕವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅಷ್ಟೇ ಅಲ್ಲ ಭಾರತದಲ್ಲಿ 5G ಅನ್ನು ಹೊರತರಲು ಏರ್‌ಟೆಲ್ ಬಲ ನೀಡುತ್ತದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದೆ.