ಕರ್ನಾಟಕ

karnataka

By

Published : Aug 14, 2020, 7:20 PM IST

ETV Bharat / business

ಯೋಧರಿಗೆ ಸ್ವಾತಂತ್ರ್ಯ ದಿನದ ಗಿಫ್ಟ್​: ಶುಲ್ಕವಿಲ್ಲದೇ 50,000 ವಿಮಾನ​ ಸೀಟು ಮೀಸಲಿಟ್ಟ ಏರ್ ಏಷ್ಯಾ!

'ರೆಡ್‌ಪಾಸ್' ಪ್ರಸ್ತಾಪದಡಿ ಮೂಲ ಶುಲ್ಕ ಮನ್ನಾ ಮಾಡಲಾಗುವುದು. ವಿಮಾನ ನಿಲ್ದಾಣ ಶುಲ್ಕ, ಟಿಕೆಟ್​ ಶುಲ್ಕ ಮತ್ತು ತೆರಿಗೆ ಸಿಬ್ಬಂದಿ ಭರಿಸುತ್ತಾರೆ ಎಂದು ಏರ್ ಏಷ್ಯಾ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

AirAsia
ಏರ್ ಏಷ್ಯಾ

ನವದೆಹಲಿ: ಪ್ರಸಕ್ತ ವರ್ಷದ ಸೆಪ್ಟೆಂಬರ್ 25 ರಿಂದ ಡಿಸೆಂಬರ್ 31ರ ನಡುವಿನ ಪ್ರಯಾಣದ ಅವಧಿಗೆ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಮೂಲ ಶುಲ್ಕವಿಲ್ಲದೆ 50,000 ಸೀಟ್​ಗಳನ್ನು ಏರ್ ಏಷ್ಯಾ ಇಂಡಿಯಾ ನೀಡಿದೆ.

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನ ಪ್ರಯಾಣಿಕರು ತಮ್ಮ ವಿವರಗಳನ್ನು ಆನ್‌ಲೈನ್‌ನಲ್ಲಿ ಆಗಸ್ಟ್ 15 ಮತ್ತು ಆಗಸ್ಟ್ 21ರ ನಡುವೆ ಸಲ್ಲಿಸಬಹುದು.

'ರೆಡ್‌ಪಾಸ್' ಪ್ರಸ್ತಾಪದಡಿ ಮೂಲ ಶುಲ್ಕ ಮನ್ನಾ ಮಾಡಲಾಗುವುದು. ವಿಮಾನ ನಿಲ್ದಾಣ ಶುಲ್ಕ, ಟಿಕೆಟ್​ ಶುಲ್ಕ ಮತ್ತು ತೆರಿಗೆ ಸಿಬ್ಬಂದಿ ಭರಿಸುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

'ಅರ್ಜಿ ಪರಿಶೀಲಿಸಿದ ನಂತರ, ಏರ್ ಏಷ್ಯಾ ಇಂಡಿಯಾ ನಿರ್ವಹಿಸುವ ಯಾವುದೇ ದೇಶಿಯ ವಿಮಾನದ ಪ್ರಕ್ರಿಯೆ ಕುರಿತು ವಿವರಗಳನ್ನು ಅರ್ಜಿದಾರರಿಗೆ ಕಳುಹಿಸಲಾಗುತ್ತದೆ. ಈ ರೆಡ್‌ಪಾಸ್ ಏಕಮುಖ ಹಾರಾಟಕ್ಕೆ ಮಾತ್ರವೇ ಮಾನ್ಯವಾಗಿರುತ್ತದೆ. ಇದಕ್ಕಾಗಿ ನಿರ್ಗಮನದ ದಿನಾಂಕಕ್ಕಿಂತ ಕನಿಷ್ಠ 21 ದಿನ ಮೊದಲು ಕಾಯ್ದಿರಿಸಬೇಕಾಗುತ್ತದೆ ಎಂದು ಉಲ್ಲೇಖಿಸಿದೆ.

ಮೂಲ ಶುಲ್ಕ ರಿಯಾಯಿತಿಯ ಜೊತೆಗೆ ಚೆಕ್-ಇನ್ ಲಗೇಜ್ ಅನ್ನು ಬೋರ್ಡಿಂಗ್ ಮತ್ತು ಠೇವಣಿ ಮಾಡುವಾಗ ಸಿಬ್ಬಂದಿ ಆದ್ಯತೆ ನೀಡುತ್ತಾರೆ. ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ, ಕೋಸ್ಟ್ ಗಾರ್ಡ್, ಅರೆಸೈನಿಕ ಪಡೆ ಮತ್ತು ತರಬೇತಿ ಕೆಡೆಟ್‌ಗಳ ಸಿಬ್ಬಂದಿ ಪಡೆಯಬಹುದು ಎಂದು ವಿವರಿಸಿದೆ.

ABOUT THE AUTHOR

...view details