ನವದೆಹಲಿ:ಮುಂದಿನ ಮೇ 31ರವರೆಗೆ ಅನ್ವಯ ಆಗುವಂತೆ ಪ್ರಯಾಣಕ್ಕಾಗಿ ಪ್ರಸ್ತುತ ಮತ್ತು ಭವಿಷ್ಯದ ಬುಕ್ಕಿಂಗ್‌ಗಳ ಎಲ್ಲ ರೀ ಶೆಡ್ಯೂಲಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಏರ್‌ಏಷ್ಯಾ ಇಂಡಿಯಾ ಘೋಷಿಸಿದೆ.
ಕೊರೊನಾ ವೈರಸ್ ಏಕಾಏಕಿ ಹಬ್ಬುತ್ತಿದ್ದು, ವಾಯುಯಾಣ ಸೇರಿದಂತೆ ಇತರ ಉದ್ಯಮಗಳ ಮೇಲೆ ಅದು ಸೃಷ್ಟಿಸಿರುವ ಅನಿಶ್ಚಿತತೆಯ ದೃಷ್ಟಿಯಿಂದ ಏರ್‌ಏಷ್ಯಾ ಈ ಕೊಡುಗೆ ಘೋಷಿಸಿದೆ.
ಏರ್‌ಏಷ್ಯಾ ಇಂಡಿಯಾ www.airasia.com ಮತ್ತು ಏರ್‌ಏಷ್ಯಾ ಇಂಡಿಯಾ ಮೊಬೈಲ್ ಆ್ಯಪ್‌ನಲ್ಲಿ 14 ದಿನಗಳ ಮುಂಚಿತವಾಗಿ ಮಾಡಿದ ಬುಕ್ಕಿಂಗ್‌ಗಳಿಗೆ ಶೇ 10ರಷ್ಟು ವಿಶೇಷ ರಿಯಾಯಿತಿ ನೀಡುತ್ತಿದೆ. ಪ್ರೋಮೋ ಕೋಡ್ ಫ್ಲೈನವ್10 ( FLYNOW10) ಬಳಸಿ ಯಾರು ಟಿಕೆಟ್ ಬುಕ್ ಮಾಡುವರೋ ಅವರು ಈ ರಿಯಾಯಿತಿ ಪಡೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣಿಕರು ತಮ್ಮ ಬುಕಿಂಗ್ ಅನ್ನು ನಿರ್ವಹಿಸಬಹುದು ಮತ್ತು ರೀ ಶೆಡ್ಯೂಲಿಂಗ್ ಮಾಡಿಸುವ ಮೂಲಕ ವಿಮಾನಯಾನ ವೆಬ್‌ಸೈಟ್‌ನಲ್ಲಿ ಬಿಗ್ ಮೆಂಬರ್ ಆಗಿ ಸೈನ್ ಅಪ್ ಆಗಬಹುದು. ಈ ಮೂಲಕ ತಮ್ಮ ಮೂಲ ಬುಕ್ಕಿಂಗ್ ಮಾಡುವಾಗ ಬಳಸುವ ಇ-ಮೇಲ್ ಐಡಿಯೊಂದಿಗೆ ಅಸ್ತಿತ್ವದಲ್ಲಿರುವ ಪಿಎನ್‌ಆರ್ ಅನ್ನು ಬಿಗ್ ಮೆಂಬರ್ ಐಡಿಗೆ ಲಿಂಕ್ ಮಾಡಿ ಬುಕಿಂಗ್ ಮಾಡಬಹುದು.