ಕರ್ನಾಟಕ

karnataka

ETV Bharat / business

ವಿದೇಶಿ ಪ್ರಯಾಣಕ್ಕೆ ಅಗ್ಗದ ಆಫರ್​ ನೀಡಿದ ಏರ್​ ಇಂಡಿಯಾ!

ಎಕಾನಮಿ ಮತ್ತು ಬ್ಯುಸಿನಸ್​ ಶ್ರೇಣಿಯಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗೆ ಆಗಸ್ಟ್​ 10ರವರೆಗೆ ಈ ರಿಯಾಯಿತಿ ಕೊಡುಗೆ ಲಭ್ಯವಿದೆ. ಪ್ರತಿ ಟಿಕೆಟ್​ ಮೇಲೆ ಶೇ 10ರಷ್ಟು ಆಫರ್ ನೀಡಲಾಗಿದೆ. ಇಂಗ್ಲೆಂಡ್​, ಯುರೋಪ್ ಮತ್ತು ಇಸ್ರೇಲ್‌ನ ಆಯ್ದ ನಗರಗಳಿಗೆ ಪ್ರಯಾಣಿಸಲು ಈ ರಿಯಾಯಿತಿ ದರಗಳು ಲಭ್ಯವಿದೆ ಎಂದು ವೆಬ್​ಸೈಟ್​ನಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

By

Published : Jul 13, 2019, 8:06 PM IST

ಮುಂಬೈ:ವಿಮಾನ ಪ್ರಯಾಣಿಕರನ್ನು ಸೆಳೆಯುವ ದೃಷ್ಟಿಯಿಂದ ಏರ್​ ಇಂಡಿಯಾ 'ಮಾನ್ಸೂನ್ ಬೊನಾಂಜಾ ಆಫರ್'ನಡಿ ಅಂತಾರಾಷ್ಟ್ರೀಯ ವಿಮಾನಯಾನ ಟಿಕೆಟ್​ಗಳಲ್ಲಿ ಆಯ್ದ ಸ್ಥಳಗಳಿಗೆ ರಿಯಾಯಿತಿ ಘೋಷಿಸಿದೆ.

ಎಕಾನಮಿ ಮತ್ತು ಬ್ಯುಸಿನಸ್​ ಶ್ರೇಣಿಯಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಣಿಕರಿಗೆ ಆಗಸ್ಟ್​ 10ರವರೆಗೆ ಈ ರಿಯಾಯಿತಿ ಕೊಡುಗೆ ಲಭ್ಯವಿದೆ. ಪ್ರತಿ ಟಿಕೆಟ್​ ಮೇಲೆ ಶೇ 10ರಷ್ಟು ಆಫರ್ ನೀಡಲಾಗಿದೆ. ಇಂಗ್ಲೆಂಡ್​, ಯುರೋಪ್ ಮತ್ತು ಇಸ್ರೇಲ್‌ನ ಆಯ್ದ ನಗರಗಳಿಗೆ ಪ್ರಯಾಣಿಸಲು ಈ ರಿಯಾಯಿತಿ ದರಗಳು ಲಭ್ಯವಿದೆ ಎಂದು ವೆಬ್​ಸೈಟ್​ನಲ್ಲಿ ತಿಳಿಸಿದೆ.

ಲಂಡನ್, ಬರ್ಮಿಂಗ್​ಹ್ಯಾಮ್, ಕೋಪನ್​ಹ್ಯಾಗನ್, ಫ್ರಾಂಕ್‌ಫರ್ಟ್, ಮ್ಯಾಡ್ರಿಡ್, ಪ್ಯಾರಿಸ್, ರೋಮ್, ಮಿಲನ್, ಸ್ಟಾಕ್‌ಹೋಮ್, ವಿಯೆನ್ನಾ ಮತ್ತು ಟೆಲ್ ಅವೀವ್‌ಗಳಿಗೆ ಪ್ರಯಾಣಿಸಲು ಏರ್ ಇಂಡಿಯಾದ ಕೊಡುಗೆ ಅನ್ವಯವಾಗಲಿದೆ.

ಇಂದೋರ್ ಮತ್ತು ಕೋಲ್ಕತ್ತಾದಿಂದ ದುಬೈಗೆ ತಡೆರಹಿತ ವಿಮಾನಯಾನಗಳನ್ನು ಏರ್ ಇಂಡಿಯಾ ಪ್ರಕಟಿಸಿದ್ದು, ಜುಲೈ 15ರಿಂದ ಈ ವಿಮಾನಗಳು ಕಾರ್ಯನಿರ್ವಹಿಸಲಿವೆ. ಸೆಪ್ಟೆಂಬರ್ 27ರಿಂದ ದೆಹಲಿ ಮತ್ತು ಟೊರೊಂಟೋ ನಡುವೆ ವಾರದಲ್ಲಿ ಮೂರು ವಿಮಾನಗಳು ತಡೆರಹಿತ ಹಾರಟ ನಡೆಸಲಿವೆ ಎಂದು ಮಾಹಿತಿ ನೀಡಿದೆ.

For All Latest Updates

TAGGED:

ABOUT THE AUTHOR

...view details