ನವದೆಹಲಿ: ಸಾಲದ ವಿಷವರ್ತುಲಕ್ಕೆ ಸಿಲುಕಿ ಖಾಸಗಿಯವರ ಪಾಲಾಗಲು ದಿನಗಣನೆ ಎಣಿಸುತ್ತಿರುವ ಏರ್ ಇಂಡಿಯಾ ಸಂಸ್ಥೆಯ ಮಹಾರಾಜನ ಬಳಿ ಕೇಂದ್ರ ಸರ್ಕಾರದ ಆರ್ಥಿಕ ನೆರವಿಲ್ಲದೇ ಬಿಡಿಗಾಸೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಾಕಿ ಉಳಿಸಿಕೊಂಡ ವೇತನದ ಹಣ ನೀಡುವಂತೆ ಸಂಸ್ಥೆಯ ನೌಕರರು ಮುಷ್ಕರಕ್ಕೆ ಕರೆ ನೀಡಲಿದ್ದಾರೆ.
ಏರ್ ಇಂಡಿಯಾ ಮಹಾರಾಜನ ಬಳಿ ಬಿಡಿಗಾಸೂ ಇಲ್ಲ.! ಬಾಕಿ ಹಣ ಕೊಡುವಂತೆ ನೌಕರರ ಮುಷ್ಕರ - ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ
ಏರ್ ಇಂಡಿಯಾ ಮಾರಾಟದ ಭವಿಷ್ಯದ ಬಗೆಗಿನ ಅನಿಶ್ಚಿತತೆಯಿಂದ ವಿಮಾನಯಾನ ನೌಕರರು ಬೇಸರಗೊಂಡಿದ್ದಾರೆ. ಮುಂಬೈನಲ್ಲಿ ಏರ್ ಇಂಡಿಯಾ ನೌಕರರ ಒಕ್ಕೂಟ ಮತ್ತು ಇತರ ನೌಕರರ ಒಕ್ಕೂಟಗಳ ಸಮಾಲೋಚನೆ ನಡೆಸಿದ ನಂತರ ಜನವರಿ 8ರಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (ಎನ್ಸಿಎಲ್ಟಿ) ಅಥವಾ ಮುಷ್ಕರ ಮುಖೇನ ವಿಮಾನಯಾನ ಪೈಲಟ್‌ಗಳು ಮತ್ತು ಎಂಜಿನಿಯರ್‌ಗಳು ತಮ್ಮ ಬಾಕಿ ಹಣವನ್ನು ತಕ್ಷಣ ಪಾವತಿಸಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರಲಿದ್ದಾರೆ.
ನಾವೆಲ್ಲರೂ ಇಂದು ಭೇಟಿಯಾಗಿ ಖಾಸಗೀಕರಣದ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಈ ಬಗ್ಗೆ ಕೆಲವು ಸ್ಪಷ್ಟತೆಗಳನ್ನು ನೀಡಬೇಕು ಎಂದು ನಿರ್ಧರಿಸಿದ್ದೇವೆ. ದೇಶದ ವಿಮಾನಯಾನ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಸೇವೆಯನ್ನ ಒದಗಿಸುವ ರಾಷ್ಟ್ರೀಯ ವಾಹಕವನ್ನು ನಿಷ್ಕ್ರೀಯಗೊಳಿಸುವುದು ಶಕ್ತವಾಗಿಲ್ಲ. ಇದು ನಿಧಾನಗತಿಯ ಸಮಯದಲ್ಲಿ ಆರ್ಥಿಕ ಬೆಳವಣಿಗೆಯ ವೃದ್ಧಿಸುವ ಎಂಜಿನ್ ಆಗಿದೆ ಎಂದು ಎಂಜಿನಿಯರ್‌ಗಳ ಒಕ್ಕೂಟದ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.