ಕರ್ನಾಟಕ

karnataka

ETV Bharat / business

Smartphoneಗೆ 'ಏಜೆಂಟ್​ ಸ್ಮಿತ್​' ಬಂದರೆ ಎಚ್ಚರ: ಇಲ್ಲವೆ ಬ್ಯಾಂಕಿಂಗ್ ಮಾಹಿತಿ ಸೋರಿಕೆ -

ಭಾರತದ ಸುಮಾರು 15 ಮಿಲಿಯನ್ ಸ್ಮಾರ್ಟ್‌ಫೋನ್ ಏಜೆಂಟ್ ಸ್ಮಿತ್ ದಾಳಿಗೆ ಒಳಗಾಗಿದ್ದು, ಚೆಕ್ ಪಾಯಿಂಟ್ (Check Point) ಎಂಬ ಸೈಬರ್ ಭದ್ರತಾ ಕಂಪನಿಯು ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ.

ಸಾಂದರ್ಭಿಕ ಚಿತ್ರ

By

Published : Jul 11, 2019, 8:15 PM IST

ನವದೆಹಲಿ: ಏಜೆಂಟ್​ ಸ್ಮಿತ್​ ಎಂಬ ಹೆಸರಿನ ಮಾಲ್​ವೇರ್​ ವೈರಸ್​ ಜಗತ್ತಿನಾದ್ಯಂತ ಇರುವ 25 ಮಿಲಿಯನ್​ ಮೊಬೈಲ್​ಗಳನ್ನು ಬಾಧಿಸಿದೆ.

ಇದರಲ್ಲಿ ಭಾರತದ ಸುಮಾರು 15 ಮಿಲಿಯನ್ ಸ್ಮಾರ್ಟ್‌ಫೋನ್ ಏಜೆಂಟ್ ಸ್ಮಿತ್ ದಾಳಿಗೆ ಒಳಗಾಗಿದ್ದು, ಚೆಕ್ ಪಾಯಿಂಟ್ (Check Point) ಎಂಬ ಸೈಬರ್ ಭದ್ರತಾ ಕಂಪನಿಯು ಈ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ.

ಗೂಗಲ್​ ಸಂಬಂಧಿಸಿದ ತಂತ್ರಾಂಶದ ಸೋಗಿನಲ್ಲಿ ಸ್ಮಾರ್ಟ್​ಫೋನ್​ಗಳ ಒಳ ನುಸುಳುವ ಏಜೆಂಟ್​ ಸ್ಮಿತ್​, ಉಳಿದ ಎಲ್ಲ ಅಪ್ಲಿಕೇಷನ್​ಗಳಿಗೆ ಧಕ್ಕೆ ತರುತ್ತದೆ. ಬಳಕೆದಾರರ ಅರಿವಿಗೆ ಬಾರದಂತೆ ಇತರ ಅಪಾಯಕಾರಿ ಅಪ್ಲಿಕೇಷನ್​ಗಳಿಂದ ಬದಲಾಯಿಸುತ್ತದೆ ಎಂದು ಚೆಕ್ ಪಾಯಿಂಟ್ ಎಚ್ಚರಿಸಿದೆ.

ಹಣಗಳಿಸುವ ವ್ಯವಹಾರಿಕ ಜಾಹೀರಾತುಗಳನ್ನು ಪ್ರದರ್ಶಿಸುವ ಈ ಮಾಲ್​ವೇರ್​ ಬಳಕೆದಾರರ ರಹಸ್ಯ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ. ಆ್ಯಂಡ್ರಾಯಿಡ್​ ಫೋನ್​ಗಳೇ ಇದರ ಸುಲಭದ ಟಾರ್ಗೆಟ್​ ಎಂದು ಅದು ತಿಳಿಸಿದೆ.

For All Latest Updates

TAGGED:

ABOUT THE AUTHOR

...view details