ಕರ್ನಾಟಕ

karnataka

ETV Bharat / business

ಮಾರುತಿ ಸುಜುಕಿ ಹಾದಿಯಲ್ಲಿ ಸಾಗಿದ ನಿಸ್ಸಾನ್​ ಇಂಡಿಯಾ! - ಕಾರು ದರ ಏರಿಕೆ

ಆಟೋ ಕಾಂಪೊನೆಂಟ್ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡುಬಂದಿದೆ. ಕಳೆದ ಕೆಲವು ತಿಂಗಳಿಂದ ನಾವು ಈ ಹೆಚ್ಚಳ ತೆಡೆಯಲು ಪ್ರಯತ್ನಿಸಿದ್ದೇವೆ. ಈಗ ನಾವು ಎಲ್ಲಾ ನಿಸ್ಸಾನ್ ಮತ್ತು ದಟ್ಸನ್ ಮಾದರಿಗಳಲ್ಲಿ ಬೆಲೆಗಳನ್ನು ಹೆಚ್ಚಿಸುತ್ತಿದ್ದೇವೆ. ಈ ಹೆಚ್ಚಳವು ಮಾಡಲ್​ನಿಂದ ಮಾಡಲ್​ಗಳಿಗೆ ಬದಲಾಗುತ್ತದೆ ಎಂದು ನಿಸ್ಸಾನ್ ಹೇಳಿದೆ.

Nissan
Nissan

By

Published : Mar 23, 2021, 2:47 PM IST

ನವದೆಹಲಿ: ನಿನ್ನೆಯಷ್ಟೇ ತನ್ನ ಉತ್ಪನ್ನಗಳ ದರ ಏರಿಕೆ ಮಾಡುವುದಾಗಿ ಘೋಷಿಸಿದ್ದ ಮಾರುತಿ ಸುಜುಕಿ ಬಳಿಕ ನಿಸ್ಸಾನ್ ಇಂಡಿಯಾ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಿಸ್ಸಾನ್ ಮತ್ತು ದಟ್ಸನ್​ನಲ್ಲಿ ಲಭ್ಯವಿರುವ ಎಲ್ಲಾ ಮಾಡಲ್​ಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದೆ.

ಆಟೋ ಕಾಂಪೊನೆಂಟ್ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡುಬಂದಿದೆ. ಕಳೆದ ಕೆಲವು ತಿಂಗಳಿಂದ ನಾವು ಈ ಹೆಚ್ಚಳ ತೆಡೆಯಲು ಪ್ರಯತ್ನಿಸಿದ್ದೇವೆ. ಈಗ ನಾವು ಎಲ್ಲಾ ನಿಸ್ಸಾನ್ ಮತ್ತು ದಟ್ಸನ್ ಮಾದರಿಗಳಲ್ಲಿ ಬೆಲೆಗಳನ್ನು ಹೆಚ್ಚಿಸುತ್ತಿದ್ದೇವೆ. ಈ ಹೆಚ್ಚಳವು ಮಾಡಲ್​ನಿಂದ ಮಾಡಲ್​ಗಳಿಗೆ ಬದಲಾಗುತ್ತದೆ ಎಂದು ನಿಸ್ಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶ್ರೀವಾಸ್ತವ್​ ಹೇಳಿದರು.

ಇದನ್ನೂ ಓದಿ: ಕಾನೂನುಬದ್ಧ ಕುಡಿಯುವ ವಯೋಮಿತಿ 25 ರಿಂದ 21ಕ್ಕೆ ಇಳಿಸಿದ ಕೇಜ್ರಿವಾಲ್​ ಸರ್ಕಾರ

ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಬೆಲೆ ಏರಿಕೆ ಘೋಷಣೆ ಮಾಡಿದ ಒಂದು ದಿನದ ನಂತರ ನಿಸ್ಸಾನ್ ತನ್ನ ನಿರ್ಧಾರ ಪ್ರಕಟಿಸಿದೆ. ಮಾರುತಿ ಈ ವರ್ಷ ತನ್ನ ಎರಡನೇ ಬಾರಿ ದರ ಏರಿಕೆ ಮಾಡುವುದಾಗಿ ಪ್ರಕಟಿಸಿದೆ. ಹೆಚ್ಚಿನ ಇನ್‌ಪುಟ್ ವೆಚ್ಚಗಳ ಪರಿಣಾಮವನ್ನು ಸರಿದೂಗಿಸಲು ಮುಂದಿನ ತಿಂಗಳಿನಿಂದ ತನ್ನ ಮಾದರಿ ವ್ಯಾಪ್ತಿಯಲ್ಲಿ ಬೆಲೆಗಳನ್ನು ಹೆಚ್ಚಿಸುವುದಾಗಿ ತಿಳಿಸಿದೆ. ಈ ಹಿಂದೆ ಜನವರಿ 18ರಂದು ದರ ಪರಿಷ್ಕರಣೆ ಮಾಡಲಾಯಿತು.

ABOUT THE AUTHOR

...view details