ಕರ್ನಾಟಕ

karnataka

ETV Bharat / business

ಫೇಸ್​ಬುಕ್​ ಬಳಿಕ ಜಿಯೋದಲ್ಲಿ ಸಿಲ್ವರ್‌ ಲೇಕ್ 5,655 ಕೋಟಿ ರೂ. ಹೂಡಿಕೆ - ಸಿಲ್ವರ್ ಲೇಕ್

ರಿಲಯನ್ಸ್​​ ಇಂಡಸ್ಟ್ರೀಸ್ ಭಾಗವಾದ ಜಿಯೋ ಮೊಬೈಲ್ ಕಂಪನಿಯಲ್ಲಿ ಸಿಲ್ವರ್ ಲೇಕ್, 5,655.75 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಲೇಕ್​ನ ಹೂಡಿಕೆ ಮಾಡುವ ಮೊತ್ತದ ಷೇರು ಬೆಲೆ 4.90 ಲಕ್ಷ ಕೋಟಿ ರೂ. ಮತ್ತು ಉದ್ಯಮ ಮೊತ್ತ 5.15 ಲಕ್ಷ ಕೋಟಿ ರೂ. ಇರಲಿದೆ. ಫೇಸ್​ಬುಕ್ ಹೂಡಿಕೆ ಮೊತ್ತದ ಶೇ12.5ರಷ್ಟಿದೆ.

Reliance jio
ರಿಲಯನ್ಸ್ ಜಿಯೋ

By

Published : May 4, 2020, 4:47 PM IST

ನವದೆಹಲಿ :ರಿಲಯನ್ಸ್​ ಜಿಯೋದಲ್ಲಿ ಫೇಸ್​ಬುಕ್ ಹೂಡಿಕೆ ಮಾಡಿದ ಬಳಿಕ ಸಿಲ್ವರ್ ಲೇಕ್ ಕಂಪನಿ ಹೂಡಿಕೆ ಮಾಡಲಿದೆ.

ರಿಲಯನ್ಸ್​​ ಇಂಡಸ್ಟ್ರೀಸ್ ಭಾಗವಾದ ಜಿಯೋ ಮೊಬೈಲ್ ಕಂಪನಿಯಲ್ಲಿ ಸಿಲ್ವರ್ ಲೇಕ್, 5,655.75 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದೆ. ಲೇಕ್​ನ ಹೂಡಿಕೆ ಮಾಡುವ ಮೊತ್ತದ ಷೇರು ಬೆಲೆ 4.90 ಲಕ್ಷ ಕೋಟಿ ರೂ. ಮತ್ತು ಉದ್ಯಮ ಮೊತ್ತ 5.15 ಲಕ್ಷ ಕೋಟಿ ರೂ. ಇರಲಿದೆ. ಫೇಸ್​ಬುಕ್ ಹೂಡಿಕೆ ಮೊತ್ತದ ಶೇ12.5ರಷ್ಟಿದೆ.

ಭಾರತದ ಡಿಜಿಟಲ್ ಕ್ಷೇತ್ರದ ಬೆಳವಣಿಗೆಗೆ ಸಹಭಾಗಿಯಾಗಿ ಸಿಲ್ವರ್ ಲೇಕ್ ನಮ್ಮ ಕಂಪೆನಿ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದು ಸಂತಸದ ಸಂಗತಿ. ಸಿಲ್ವರ್ ಲೇಕ್ ಹಣಕಾಸು ಮತ್ತು ತಂತ್ರಜ್ಞಾನದಿಂದ ಈಗಾಗಲೇ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಈ ಕಂಪನಿಯ ತಾಂತ್ರಿಕ ಜ್ಞಾನ ಬಳಸಿ ಡಿಜಿಟಲ್ ಲೋಕದ ಸುಧಾರಣೆಗೆ ಪ್ರಯತ್ನಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದರು.

ಜಿಯೋ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಮೊಬೈಲ್​ನಲ್ಲೇ ಬಹು ಮುಂಚೂಣಿಯಲ್ಲಿರುವ ದೊಡ್ಡ ಕಂಪನಿ. ಸದೃಢವಾದ ಹಾಗೂ ಉದ್ಯಮಶೀಲ ನಿರ್ವಹಣೆಯಂತಹ ಪರಿಣಿತರ ತಂಡ ಹೊಂದಿದೆ. ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಡಿಜಿಟಲ್ ಸೇವೆಗಳನ್ನು ಸಿಗುವಂತೆ ಮಾಡುವ ಅಸಾಧಾರಣ ಎಂಜಿನಿಯರಿಂಗ್ ಸಾಮರ್ಥ್ಯ ಹೊಂದಿದೆ ಎಂದು ಸಿಲ್ವರ್ ಲೇಕ್ ಮುಖ್ಯ ಕಾರ್ಯನಿರ್ವಹಕ ಮತ್ತು ಎಂಡಿ ಎಗೊನ್ ದುರ್ಬನ್ ಸಂತಸ ವ್ಯಕ್ತಪಡಿಸಿದರು.

ABOUT THE AUTHOR

...view details