ಕರ್ನಾಟಕ

karnataka

ETV Bharat / business

ನಿಮ್ಮ ಹೇಳಿಕೆಗಳನ್ನು ಚಪಾತಿ, ದೋಸಾ ಥರ ಸುರುಳಿ ಸುತ್ತುತ್ತಿರಾ? ಪಾಂಟಿಂಗ್, ಕ್ಲಾರ್ಕ್​​ಗೆ ಮಹೀಂದ್ರಾ ಪಂಚ್‌! - ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಟೆಸ್ಟ್

ನಿಮ್ಮ ಮಾತುಗಳನ್ನು ಹೇಗೆ ವಾಪಸ್​ ಪಡೆಯಲು ನೀವು ಬಯಸುತ್ತೀರಿ? ಸುಟ್ಟು, ಹುರಿದ, ಬೇಯಿಸಿದ.. ಚಪಾತಿ ಅಥವಾ ದೋಸಾ ರೀತಿ ಸುರುಳಿ ಸುತ್ತುತ್ತಿರಾ ಎಂದು ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ..

Anand Mahindra
ಆನಂದ್ ಮಹೀದ್ರಾ

By

Published : Jan 19, 2021, 4:30 PM IST

ನವದೆಹಲಿ :ಬಾರ್ಡರ್-ಗವಾಸ್ಕರ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿಯಾಗಿ ಜಯಗಳಿಸಿದೆ. 328 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ರಹಾನೆ ಪಡೆ 7 ವಿಕೆಟ್​ ಕಳೆದುಕೊಂಡು ಗೆಲುವಿನ ನಗೆ ಬೀರಿತು.

ಟೀಂ ಇಂಡಿಯಾದ ಐತಿಹಾಸಿಕ ಗೆಲುವನ್ನು ಕ್ರೀಡಾಪಟುಗಳು, ರಾಜಕೀಯ ನಾಯಕರು, ಸಿನಿಮಾ ಕಲಾವಿದರು, ಉದ್ಯಮಿಗಳು ಸೇರಿ ಹಲವು ಗಣ್ಯರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹಿಂದ್ರಾ ಅವರು ಮಾರ್ಕ್ ವಾ, ಮೈಕೆಲ್ ಕ್ಲಾರ್ಕ್ ಮತ್ತು ರಿಕಿ ಪಾಂಟಿಂಗ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಿಮ್ಮ ಮಾತುಗಳನ್ನು ಹೇಗೆ ವಾಪಸ್​ ಪಡೆಯಲು ನೀವು ಬಯಸುತ್ತೀರಿ? ಸುಟ್ಟು, ಹುರಿದ, ಬೇಯಿಸಿದ.. ಚಪಾತಿ ಅಥವಾ ದೋಸಾ ರೀತಿ ಸುರುಳಿ ಸುತ್ತುತ್ತಿರಾ ಎಂದು ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

ಅವರ ಉಲ್ಲೇಖಗಳನ್ನು ಈಗ ಮಾರ್ಪಡಿಸಬೇಕು. ಹುಚ್ಚರಂತೆ ಆಡಬೇಡಿ ಮೇಲೆದ್ದು ಬನ್ನಿ. ಉತ್ತರ ಕೊಡುವುದಿದ್ದರೇ ಹೀಗೆ ಕೊಡಬೇಕು ಎಂದು ಬರೆದಿದ್ದಾರೆ.

ವೀರರನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?

ಉನ್ನತ ಬಹುಮಾನಕ್ಕಾಗಿ ಸಮಾಧಾನಕರ ಬಹುಮಾನವಲ್ಲ

ನಿರಾಕರಿಸದೆ ಮತ್ತು ಸಂದೇಹಪಡದೆ ವಿವರಿಸಿ

ಅಸಾಧ್ಯವಾದುದನ್ನು ಅವರಿಗೆ ಹೇಳಿದಾಗ ಚೈತನ್ಯ ಪಡೆಯಿರಿ

ಎಂದಿಗೂ ಸೋಲೊಪ್ಪಿಕೊಳ್ಳಬೇಡಿ

ಕ್ರಿಕೆಟ್ ಆಡುವವರೆಗೂ ಭಾರತ ಕ್ರಿಕಟ್ ಇಂಡಿಯಾದ ಕಥೆಯನ್ನು ಮಾತಾಡುತಲ್ಲೇ ಇರುತ್ತಾರೆ. ನಾನು ಅವರಿಗೆ ವಂದಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details