ಕರ್ನಾಟಕ

karnataka

ETV Bharat / business

ರಿಲಯನ್ಸ್​ ಸಾಹುಕಾರನ ಮ್ಯಾಜಿಕ್.. 28 ದಿನಗಳಲ್ಲಿ ₹37,710 ಕೋಟಿ ಗಳಿಕೆ.. ಕುಬೇರನ ಆಸ್ತಿ ಏರಿದ್ಹೇಗೆ? - ರಿಲಯನ್ಸ್ ರಿಟೇಲ್

ಸಿಂಗಾಪುರ ಹೂಡಿಕೆ ಕಂಪನಿ ಜಿಐಸಿ 5512.5 ಕೋಟಿ ರೂ.ಗಳನ್ನು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್​ನಲ್ಲಿ (ಆರ್‌ಆರ್‌ವಿಎಲ್) ಹೂಡಿಕೆಯ ಯೋಜನೆ ಪ್ರಕಟಿಸಿದ ಮೂರು ದಿನಗಳ ಬಳಿಕ ಈ ಒಪ್ಪಂದವಾಗಿದೆ..

Mukesh Ambani
ಮುಖೇಶ್ ಅಂಬಾನಿ

By

Published : Oct 6, 2020, 8:11 PM IST

ಮುಂಬೈ :ಅಬುಧಾಬಿ ಹೂಡಿಕೆ ಅಥಾರಿಟಿ ಸ್ವಾಮ್ಯದ ಅಂಗಸಂಸ್ಥೆಯಾದ ಎಡಿಐಎ 5,512.50 ಕೋಟಿ ರೂ.ಗಳನ್ನು ರಿಲಯನ್ಸ್ ಇಂಡಸ್ಟ್ರೀಸ್​ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್​ನಲ್ಲಿ (ಆರ್‌ಆರ್‌ವಿಎಲ್‌) ಹೂಡಿಕೆ ಮಾಡಲಿದೆ.

ಈ ಹೂಡಿಕೆಯೊಂದಿಗೆ ಆರ್‌ಆರ್‌ವಿಎಲ್ ಪ್ರಮುಖ ಜಾಗತಿಕ ಹೂಡಿಕೆದಾರರಾದ ಸಿಲ್ವರ್ ಲೇಕ್, ಕೆಕೆಆರ್, ಜನರಲ್ ಅಟ್ಲಾಂಟಿಕ್, ಮುಬಡಾಲಾ, ಜಿಐಸಿ, ಟಿಪಿಜಿ ಮತ್ತು ಎಡಿಐಎಗಳಿಂದ ನಾಲ್ಕು ವಾರಗಳಲ್ಲಿ 37,710 ಕೋಟಿ ರೂ.ನಷ್ಟು ಸ್ವೀಕರಿಸಿದೆ. ಈ ಮೂಲಕ ಆರ್​ಐಎಲ್​ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಸಂಪತ್ತಿನಲ್ಲಿ ಏರಿಕೆಯಾಗಿದೆ.

ಸಿಂಗಾಪುರ ಹೂಡಿಕೆ ಕಂಪನಿ ಜಿಐಸಿ 5512.5 ಕೋಟಿ ರೂ.ಗಳನ್ನು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್​ನಲ್ಲಿ (ಆರ್‌ಆರ್‌ವಿಎಲ್) ಹೂಡಿಕೆಯ ಯೋಜನೆ ಪ್ರಕಟಿಸಿದ ಮೂರು ದಿನಗಳ ಬಳಿಕ ಈ ಒಪ್ಪಂದವಾಗಿದೆ.

ಒಪ್ಪಂದವನ್ನು ಪ್ರಕಟಿಸಿದ ಮುಖೇಶ್ ಅಂಬಾನಿ, “ನಾವು ಎಡಿಐಎನ ಪ್ರಸ್ತುತ ಹೂಡಿಕೆ ಮತ್ತು ನಿರಂತರ ಬೆಂಬಲದಿಂದ ಸಂತೋಷವಾಗಿದ್ದೇವೆ. ಜಾಗತಿಕವಾಗಿ ನಾಲ್ಕು ದಶಕಗಳ ಮೌಲ್ಯ ರಚನೆಯ ಪ್ರಬಲ ದಾಖಲೆಯಿಂದಾಗಿ ಲಾಭ ಪಡೆಯುವ ಉತ್ತಮ ಭರವಸೆ ಇದೆ. ಎಡಿಐಎ ಹೂಡಿಕೆಯು ರಿಲಯನ್ಸ್ ರಿಟೇಲ್‌ನ ಕಾರ್ಯಕ್ಷಮತೆ ಮತ್ತು ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ. ಅದರ ಪರಿವರ್ತನೆಯ ಹೊಸ ವಾಣಿಜ್ಯ ವ್ಯವಹಾರ ಮಾದರಿಯಾಗಿದೆ ಎಂದರು.

1976ರಲ್ಲಿ ಸ್ಥಾಪನೆಯಾದ ಎಡಿಐಎ ಜಾಗತಿಕವಾಗಿ ವೈವಿಧ್ಯಮಯ ಹೂಡಿಕೆ ಸಂಸ್ಥೆಯಾಗಿದೆ. ಅಬುಧಾಬಿ ಸರ್ಕಾರದ ಪರವಾಗಿ ದೀರ್ಘಾವಧಿಯ ಮೌಲ್ಯದ ಮೇಲೆ ಕಾರ್ಯತಂತ್ರದ ಮೂಲಕ ಹಣ ಹೂಡಿಕೆ ಮಾಡುತ್ತದೆ.

ABOUT THE AUTHOR

...view details