ನವದೆಹಲಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಅದಾನಿ ಗ್ರೂಪ್ ವಹಿಸಿಕೊಂಡಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ತಿಳಿಸಿದೆ.
2020ರ ಫೆಬ್ರವರಿ 14ರಂದು ಜಾರಿಗೊಳಿಸಲಾದ ರಿಯಾಯಿತಿ ಒಪ್ಪಂದದ ಪ್ರಕಾರ, ಎಎಐ ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿ ಸಮೂಹಕ್ಕೆ 50 ವರ್ಷಗಳ ಗುತ್ತಿಗೆಗೆ ಹಸ್ತಾಂತರಿಸಿದೆ ಎಂದು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿದೆ. ಅದಾನಿ ಗ್ರೂಪ್ ಲಖನೌ ಅಹಮದಾಬಾದ್ ವಿಮಾನ ನಿಲ್ದಾಣಗಳು ಕ್ರಮವಾಗಿ ನವೆಂಬರ್ 2 ಮತ್ತು ನವೆಂಬರ್ 7ರಂದು ತನ್ನ ಸುರ್ಪದಿಗೆ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಹಮದಾಬಾದ್, ಮಂಗಳೂರು ಮತ್ತು ಲಖನೌದ ವಿಮಾನ ನಿಲ್ದಾಣಗಳ ಖಾಸಗಿ ನಿರ್ವಹಣೆ ವಹಿಸಿಕೊಳ್ಳಲು ಎಎಐ ಈ ಹಿಂದೆ, ನವೆಂಬರ್ 12ರವರೆಗೆ ಅದಾನಿ ಉದ್ಯಮ ಸಮಯ ನೀಡಿತ್ತು. ಅಹಮದಾಬಾದ್ ಮೂಲದ ಸಂಘಟನೆಯು ಮೂರು ವಿಮಾನ ನಿಲ್ದಾಣಗಳನ್ನು ಆರು ತಿಂಗಳಲ್ಲಿ ಅಂದರೆ, 2020ರ ಆಗಸ್ಟ್ ವೇಳೆಗೆ ಸ್ವಾಧೀನಪಡಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೆ, ವಾಯುಯಾನ ಕ್ಷೇತ್ರದಲ್ಲಿ ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಅಡೆತಡೆಯಿಂದಾಗಿ, ಪಾವತಿ ಗಡುವು ಮುಂದೂಡಲು ಒತ್ತಡ ಮಂಜೂರು ಷರತ್ತು ಕೋರಿತು.
ಫೆಬ್ರವರಿ 2019ರಲ್ಲಿ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ಅಹಮದಾಬಾದ್, ಲಖನೌ, ಬೆಂಗಳೂರು, ತಿರುವನಂತಪುರಂ, ಜೈಪುರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳನ್ನು 50 ವರ್ಷಗಳ ಗುತ್ತಿಗೆ ಕಾರ್ಯಾಚರಣೆ ಮತ್ತು ಅಭಿವೃದ್ಧಿ ಬಿಡ್ ಅನ್ನು ತನ್ನದಾಗಿಸಿಕೊಂಡಿತ್ತು.