ಕರ್ನಾಟಕ

karnataka

ETV Bharat / business

7,300 ಕೋಟಿ ರೂ.ನಷ್ಟು ಐಪಿಒ ಘೋಷಣೆಗೆ ಅರ್ಜಿ ಸಲ್ಲಿಸಿದ ಆಧಾರ್ ಹೌಸಿಂಗ್​ ಫೈನಾನ್ಸ್! - ಭಾರತದಲ್ಲಿ ಐಪಿಒ

ಆಧಾರ್ ಹೌಸಿಂಗ್​ ಫೈನಾನ್ಸ್​ನ ಐಪಿಒನಲ್ಲಿ 1,500 ಕೋಟಿ ರೂ. ಒಟ್ಟು ಷೇರುಗಳು ಮತ್ತು ಪ್ರವರ್ತಕ ಬಿಸಿಪಿ ಟಾಪ್ಕೊ VII ಪ್ರೈವೇಟ್ ಲಿಮಿಟೆಡ್ 5,800 ಕೋಟಿ ರೂ. ಷೇರುಗಳು ಮಾರಾಟದ ಪ್ರಸ್ತಾಪ ಒಳಗೊಂಡಿವೆ.

IPO
IPO

By

Published : Jan 27, 2021, 2:06 PM IST

ಮುಂಬೈ: ಬ್ಲಾಕ್‌ಸ್ಟೋನ್ ಬೆಂಬಲಿತ ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 7,300 ಕೋಟಿ ರೂ. ಮೌಲ್ಯದ ಆರಂಭಿಕ ಸಾರ್ವಜನಿಕ ಕೊಡುಗೆಗಾಗಿ ಅರ್ಜಿ ಸಲ್ಲಿಸಿದೆ.

ಈ ಐಪಿಒನಲ್ಲಿ 1,500 ಕೋಟಿ ರೂ. ಒಟ್ಟು ಷೇರುಗಳು ಮತ್ತು ಪ್ರವರ್ತಕ ಬಿಸಿಪಿ ಟಾಪ್ಕೊ VII ಪ್ರೈವೇಟ್ ಲಿಮಿಟೆಡ್ 5,800 ಕೋಟಿ ರೂ. ಷೇರುಗಳು ಮಾರಾಟದ ಪ್ರಸ್ತಾಪ ಒಳಗೊಂಡಿವೆ.

ತನ್ನ ಐಪಿಒ ಮೂಲಕ ಸಂಗ್ರಹಿಸಿದ ಹಣವನ್ನು ಬಂಡವಾಳದ ಮೂಲ ಹೆಚ್ಚಿಸಲು ಬಳಸಿಕೊಳ್ಳುವುದಾಗಿ ಕಂಪನಿ ಹೇಳಿದೆ. ಸಾಂಕ್ರಾಮಿಕ ರೋಗದ ಮಧ್ಯೆ ಐಪಿಒಗಳ ಬ್ಯಾಂಡ್‌ಗೆ ಸೇರ್ಪಡೆಗೊಳ್ಳುವುದರಿಂದ ಈ ಕೊಡುಗೆ ಮಹತ್ವ ಪಡೆಯಲಿದ್ದು, ಷೇರು ಮಾರುಕಟ್ಟೆಗಳ ಉಲ್ಬಣದಿಂದ ಲಾಭ ಪಡೆದಿದೆ.

ಇದನ್ನೂ ಓದಿ: ಭಾರತದ ಹೊಸ ಕೃಷಿ ಕಾಯ್ದೆಗಳು ರೈತರ ಆದಾಯ ಹೆಚ್ಚಿಸಲಿವೆ: IMF ಮುಖ್ಯಸ್ಥೆ ಗೀತಾ ಗೋಪಿನಾಥ್

ಇತ್ತೀಚಿನ ಇವೈ ವರದಿಯ ಪ್ರಕಾರ, ದೇಶದ ಆರಂಭಿಕ ಸಾರ್ವಜನಿಕ ಕೊಡುಗೆಗಳಿಂದ (ಐಪಿಒ) ಕಳೆದ ವರ್ಷ ಶೇ 61ರಷ್ಟು ಏರಿಕೆಯಾಗಿ 4.09 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಐಪಿಒ ಚಟುವಟಿಕೆಯಲ್ಲಿ ಬಲವಾದ ಮರು ಚೇತರಿಕೆ ಕಂಡುಬಂದಿದೆ. ಮಾರುಕಟ್ಟೆ ಮನೋಭಾವವು ಸಕಾರಾತ್ಮಕವಾಗಿ ಸಾಗಿದೆ ಎಂದು ಹೇಳಿದೆ.

ABOUT THE AUTHOR

...view details