ನವದೆಹಲಿ: ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಭಾರತ- ಬಾಂಗ್ಲಾ ನಡುವಣ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕ್ರೀಡಾಭಿಮಾನಗಳ ಹೃದಯ ಗೆದ್ದ 87ರ ಅಜ್ಜಿ ಚಾರುಲತಾ ಪಟೇಲ್ ಅವರಿಗೆ ಮಹೀಂದ್ರ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರ ಭರ್ಜರಿ ಉಡುಗೊರೆ ನೀಡಿದ್ದಾರೆ.
ತಮ್ಮ ಮುಖದ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ರ ಬಿಡಿಸಿಕೊಂಡು ಕೈಯಲ್ಲಿ ಊದುವ ವಾದ್ಯ ಹಿಡಿದು 87 ವರ್ಷದ ಅಜ್ಜಿಯೊಬ್ಬರು ಎಲ್ಲರ ಗಮನ ಸೆಳೆದರು. ಇಳಿ ಪ್ರಾಯದಲ್ಲೂ ಕ್ರಿಕೆಟ್ ಮೇಲಿನ ಕಾಳಜಿ ಕಂಡ ಆನಂದ್ ಮಹೀಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
'ನನ್ನ ರೂಢಿಗತವಾಗಿ, ನಾನು ಕ್ರಿಕೆಟ್ ಪಂದ್ಯಗಳನ್ನು ವಿಕ್ಷೀಸುವುದಿಲ್ಲ. ಆದರೆ, ನಾನು ಈ ಮಹಿಳೆಯನ್ನು ನೋಡಲು ಟಿವಿ ಆನ್ ಮಾಡಿದೆ. ಅವಳು ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವರಂತೆ ಕಂಡಳು' ಎಂದು ಟ್ವೀಟ್ ಮಾಡಿದ್ದಾರೆ.