ಕರ್ನಾಟಕ

karnataka

ETV Bharat / business

ಕೊರೊನಾ ಸೋಂಕು ಮಟ್ಟಹಾಕಲು 1ವರ್ಷ ಬೇಕು.. ಶೇ.84%ರಷ್ಟು ಭಾರತೀಯರ ಅಭಿಮತ.. - ಕೊರೊನಾ ವೈರಸ್

70 ಪ್ರತಿಶತದಷ್ಟು ಜನ ವಯಸ್ಸಾದವರು ಮತ್ತು ಅನಾರೋಗ್ಯ ಪೀಡಿತ ಜನರು ವೈರಸ್ ಸೋಂಕಿಗೆ ಗುರಿಯಾಗುತ್ತಾರೆ ಎಂದು ಭಾವಿಸಿದ್ದಾರೆ. ಶೇ. 63ರಷ್ಟು ಜನರು ಸರಿಯಾದ ನೈರ್ಮಲ್ಯ ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಇದನ್ನು ನಿಭಾಯಿಸಬಹುದು ಎಂದು ಹೇಳಿದರು.

Velocity MR Survey
ವೆಲಾಸಿಟಿ ಎಂಆರ್

By

Published : Mar 31, 2020, 7:46 PM IST

ಬೆಂಗಳೂರು :ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಚೇತರಿಸಿಕೊಳ್ಳಲು 6 ತಿಂಗಳಿಂದ ಒಂದು ವರ್ಷದ ಸಮಯ ತೆಗೆದುಕೊಳ್ಳುತ್ತದೆ ಎಂದು ಸುಮಾರು ಶೇ.84ರಷ್ಟು ಭಾರತೀಯರು ಅಭಿಪ್ರಾಯಪಟ್ಟಿದ್ದಾರೆ ಎಂದು ನೂತನ ಸಮೀಕ್ಷೆ ತಿಳಿಸಿದೆ.

ಕೋವಿಡ್​-19 ಸಾಂಕ್ರಾಮಿಕ ಬಗ್ಗೆ ತಿಳಿದಿರುವ ಶೇ.94ರಷ್ಟು ಜನರಲ್ಲಿ 75 ಪ್ರತಿಶತದಷ್ಟು ಜನ ಈ ರೋಗದ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಿದ್ದಾರೆ. ಕೇವಲ ಶೇ.52ರಷ್ಟು ಜನರಿಗೆ ಮಾತ್ರ ಈ ರೋಗ ಹರಡುವ ವೈರಸ್ ಪ್ರಕಾರದ ಬಗ್ಗೆ ತಿಳಿದಿದೆ ಎಂದು ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ವೆಲಾಸಿಟಿ ಎಂಆರ್​ ಸಮೀಕ್ಷೆ ತಿಳಿಸಿದೆ. ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತಾ, ಚೆನ್ನೈ, ಹೈದರಾಬಾದ್, ಪುಣೆ, ಲಖನೌ, ಅಹಮದಾಬಾದ್ ಮತ್ತು ಜೈಪುರ ಸೇರಿ ವಿವಿಧ ನಗರಗಳಲ್ಲಿ 2,100 ಜನರನ್ನು ಸಮೀಕ್ಷೆಗೆ ಬಳಸಿಕೊಂಡು ಅಭಿಪ್ರಾಯ ಕೇಳಲಾಯಿತು.

70 ಪ್ರತಿಶತದಷ್ಟು ಜನ ವಯಸ್ಸಾದವರು ಮತ್ತು ಅನಾರೋಗ್ಯ ಪೀಡಿತ ಜನರು ವೈರಸ್ ಸೋಂಕಿಗೆ ಗುರಿಯಾಗುತ್ತಾರೆ ಎಂದು ಭಾವಿಸಿದ್ದಾರೆ. ಶೇ. 63ರಷ್ಟು ಜನರು ಸರಿಯಾದ ನೈರ್ಮಲ್ಯ ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಇದನ್ನು ನಿಭಾಯಿಸಬಹುದು ಎಂದು ಹೇಳಿದರು. ಮುನ್ನೆಚ್ಚರಿಕೆ ಕ್ರಮವಾಗಿ ಶೇ.81ರಷ್ಟು ಜನ ಈ ಮೊದಲಿಗಿಂತ ಹೆಚ್ಚಾಗಿ ಕೈ ತೊಳೆಯಲು ಆರಂಭಿಸಿದ್ದಾರೆ.

ಶೇ.78ರಷ್ಟು ಜನ ಕಿಕ್ಕಿರಿದ ಜನದಟ್ಟಣೆ ಮಧ್ಯೆ ಸೇರಲು ಹಿಂದೇಟಿ ಹಾಕುತ್ತಿದ್ದಾರೆ ಎಂದು ವೆಲಾಸಿಟಿ ಎಂಆರ್ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಜಸಲ್ ಷಾ ಹೇಳಿದರು. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ.72ರಷ್ಟು ಜನರು ಭವಿಷ್ಯದಲ್ಲಿ ವಿದೇಶ ಪ್ರವಾಸ ಮಾಡುವಾಗ ಹೆಚ್ಚು ಜಾಗರೂಕರಾಗಿ ಹಾಗೂ ಜವಾಬ್ದಾರರಾಗಿ ಇರುತ್ತಾರೆ. ಅನೇಕರು ಬಯಸಿದರೂ ಸಹ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.

ABOUT THE AUTHOR

...view details