ಕರ್ನಾಟಕ

karnataka

ETV Bharat / business

ಭವಿಷ್ಯದ ವಂಚನೆ ಪ್ರಕರಣಗಳಿಗೆ ಬೆದರಿದ ಶೇ 80ರಷ್ಟು ಕಾರ್ಪೊರೇಟ್​ ಮಂದಿ! - ಭಾರತದಲ್ಲಿ ವಂಚನೆ ಪ್ರಕರಣಗಳು

ದ್ವೈವಾರ್ಷಿಕ ಸಮೀಕ್ಷೆಯ ಪ್ರಕಾರ, ದಿ ಇಂಡಿಯಾ ಕಾರ್ಪೊರೇಟ್ ಫ್ರಾಡ್ ಪರ್ಸೆಪ್ಷನ್ ಸರ್ವೆ, ಡೆಲಾಯ್ಟ್ ಟೌಚೆ ತೋಹ್ಮಾಟ್ಸು ಇಂಡಿಯಾ ಎಲ್​​ಎಲ್​​ ಪಿಯ (ಡಿಟಿಟಿಎಲ್​ಪಿ) ಆವೃತ್ತಿ IVಯಲ್ಲಿ, 'ಮುಂದಿನ ಎರಡು ವರ್ಷಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಲಿವೆ ಎಂದು 80 ಪ್ರತಿಶತದಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಇದು ಹಿಂದಿನ ಆವೃತ್ತಿಗೆ ಹೋಲಿಸಿದರೆ ಶೇ 22ರಷ್ಟು ಹೆಚ್ಚಳವಾಗಿದೆ. 2018ರಲ್ಲಿ III ಆವೃತ್ತಿಯ ಸಮೀಕ್ಷೆ ನಡೆದಿತ್ತು'.

fraud
ವಂಚನೆ

By

Published : Nov 30, 2020, 9:07 PM IST

ನವದೆಹಲಿ: ಕೋವಿಡ್​ ಸಾಂಕ್ರಾಮಿಕ ರೋಗ ತಂದೊಡ್ಡಿರುವ ಅನಿಶ್ಚಿತತೆ ಮತ್ತು ವ್ಯವಹಾರದ ಅಡ್ಡಿಯು ಭವಿಷ್ಯದಲ್ಲಿನ ವಂಚನೆ ಪ್ರಕರಣಗಳ ಏರಿಕೆಯ ಬಗ್ಗೆ ಭಾರತದ ಕಾರ್ಪೊರೇಟ್ ಕೂಟ ಆತಂಕಗಳಿಗೆ ಒಳಗಾಗಿದೆ.

ದ್ವೈವಾರ್ಷಿಕ ಸಮೀಕ್ಷೆಯ ಪ್ರಕಾರ, ದಿ ಇಂಡಿಯಾ ಕಾರ್ಪೊರೇಟ್ ಫ್ರಾಡ್ ಪರ್ಸೆಪ್ಷನ್ ಸರ್ವೆ, ಡೆಲಾಯ್ಟ್ ಟೌಚೆ ತೋಹ್ಮಾಟ್ಸು ಇಂಡಿಯಾ ಎಲ್​​ಎಲ್​​ ಪಿಯ (ಡಿಟಿಟಿಎಲ್​ಪಿ) ಆವೃತ್ತಿ IVಯಲ್ಲಿ, 'ಮುಂದಿನ ಎರಡು ವರ್ಷಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಲಿವೆ ಎಂದು 80 ಪ್ರತಿಶತದಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಇದು ಹಿಂದಿನ ಆವೃತ್ತಿಗೆ ಹೋಲಿಸಿದರೆ ಶೇ 22ರಷ್ಟು ಹೆಚ್ಚಳವಾಗಿದೆ. 2018ರಲ್ಲಿ ಹಿಂದಿನ ಆವೃತ್ತಿಯ ಸಮೀಕ್ಷೆ ನಡೆದಿತ್ತು'.

ನಾಳೆಯಿಂದ ಫ್ಲಿಪ್​ಕಾರ್ಟ್ 'ಫ್ಲಿಪ್‌ಸ್ಟಾರ್ಟ್ ಡೇಸ್' ಆಫರ್: ಎಲೆಕ್ಟ್ರಾನಿಕ್​ ಆ್ಯಕ್ಸಸರೀಸ್ ಮೇಲೆ ಶೇ 80ರಷ್ಟು ಡಿಸ್ಕೌಂಟ್​​!

ಸುಮಾರು 70 ಪ್ರತಿಶತದಷ್ಟು ಜನರು ವಂಚನೆ ನಷ್ಟವು ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರೇ ಮೂರನೇ ಒಂದು ಭಾಗದಷ್ಟು ಜನರು ನಷ್ಟದ ಪ್ರಮಾಣವು ಶೇ 1ರಿಂದ 5ರಷ್ಟು ಆದಾಯದ ಮಧ್ಯ ಇರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದ ವಂಚನೆಗಳನ್ನು ಪರಿಹರಿಸಲು ಈಗ ಅಸ್ತಿತ್ವದಲ್ಲಿ ಇರುವ ವಂಚನೆ ಅಪಾಯ ನಿರ್ವಹಣಾ ಚೌಕಟ್ಟುಗಳು ಅಸಮರ್ಪಕವೆಂದು ಶೇ 43ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details