ಕರ್ನಾಟಕ

karnataka

ETV Bharat / business

ಲಿಂಕ್ಡ್​​ಇನ್​ನಲ್ಲಿ ಪ್ರತಿ 20 ಸೆಕೆಂಡಿಗೆ ಒಬ್ಬ ನೇಮಕ: ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾಡೆಲ್ಲಾ - Company News

ಬಹುತೇಕ ವೃತ್ತಿಪರರು ತಮ್ಮ ಜ್ಞಾನದ ಮಟ್ಟ ಹೆಚ್ಚಿಸಿಕೊಳ್ಳಲು ಲಿಂಕ್ಡ್‌ಇನ್ ಲರ್ನಿಂಗ್​​ನತ್ತ ಮುಖ ಮಾಡುತ್ತಿದ್ದಾರೆ. ಪ್ರತಿ ವಾರ 1 ಮಿಲಿಯನ್ ಗಂಟೆಗಳಿಗಿಂತ ಹೆಚ್ಚಿನ ಸಂಗತಿ ವೀಕ್ಷಿಸುತ್ತಿದ್ದಾರೆ. ಒಂದು ವರ್ಷದ ಹಿಂದಿನ ಮಟ್ಟಕ್ಕಿಂತ ಇದು ಈಗ ಎರಡು ಪಟ್ಟು ಹೆಚ್ಚಾಗಿದೆ.

Satya Nadella
ಸತ್ಯ ನಾಡೆಲ್ಲಾ

By

Published : Oct 28, 2020, 3:07 PM IST

ನವದೆಹಲಿ:ಜಾಗತಿಕವಾಗಿ 722 ಮಿಲಿಯನ್​ಗೂ ಅಧಿಕ ಬಳಕೆದಾರರನ್ನು ಹೊಂದಿರುವ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್, ಪ್ರತಿ ನಿಮಿಷಕ್ಕೆ ಮೂರು ಜನರನ್ನು ನೇಮಿಸಿಕೊಳ್ಳುವ ಖಾತರಿ ಮತ್ತು ಹೊಸ ವೈಶಿಷ್ಟ್ಯಗಳ ಜತೆ ಸುಮಾರು 40 ಮಿಲಿಯನ್ ಉದ್ಯೋಗಾಕಾಂಕ್ಷಿಗಳು ತಮ್ಮ ಭವಿಷ್ಯತಿನ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಹೇಳಿದ್ದಾರೆ.

ಬಹುತೇಕ ವೃತ್ತಿಪರರು ತಮ್ಮ ಜ್ಞಾನದ ಮಟ್ಟ ಹೆಚ್ಚಿಸಿಕೊಳ್ಳಲು ಲಿಂಕ್ಡ್‌ಇನ್ ಲರ್ನಿಂಗ್​​ನತ್ತ ಮುಖ ಮಾಡುತ್ತಿದ್ದಾರೆ. ಪ್ರತಿ ವಾರ 1 ಮಿಲಿಯನ್ ಗಂಟೆಗಳಿಗಿಂತ ಹೆಚ್ಚಿನ ಸಂಗತಿ ವೀಕ್ಷಿಸುತ್ತಿದ್ದಾರೆ. ಒಂದು ವರ್ಷದ ಹಿಂದಿನ ಮಟ್ಟಕ್ಕಿಂತ ಇದು ಎರಡು ಪಟ್ಟು ಹೆಚ್ಚಾಗಿದೆ.

ಮಾರ್ಕೆಟಿಂಗ್ ಇತ್ಯರ್ಥಿತ ಲಿಂಕ್ಡ್ಇನ್​​ನಲ್ಲಿ ಜಾಹೀರಾತುದಾರರ ಬೇಡಿಕೆಯು ವರ್ಷಕ್ಕೆ 40 ಪ್ರತಿಶತದಷ್ಟು ಹೆಚ್ಚಾಗಿದೆ. ಮಾರಾಟಗಾರರು ತಮ್ಮ ವಹಿವಾಟಿಗೆ ಸಿದ್ಧವಾಗಿದ್ದು, ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸಲು ನಮ್ಮ ಸಾಧನಗಳನ್ನು ಬಳಸುತ್ತಾರೆ ಎಂದು ಕಂಪನಿಯ ಹಣಕಾಸಿನ ಮೊದಲನೇ ತ್ರೈಮಾಸಿಕದಲ್ಲಿ ಸತ್ಯ ನಾಡೆಲ್ಲಾ ಹೇಳಿದರು.

ಮಹತ್ವದ ಮರುವಿನ್ಯಾಸವನ್ನು ಸುವ್ಯವಸ್ಥಿತ ಹುಡುಕಾಟ ಮತ್ತು ಸಂದೇಶ ಅನುಭವದೊಂದಿಗೆ ಪ್ರಾರಂಭಿಸಿದ್ದೇವೆ. ಜೊತೆಗೆ ತಮ್ಮ ವೃತ್ತಿ ಕಥೆಗಳೊಂದಿಗೆ ಸಂಪರ್ಕ ಮತ್ತು ಮಾಹಿತಿ ಹಂಚಿಕೊಳ್ಳುವ ಹೊಸ ಮಾರ್ಗಗಳನ್ನು ನಾವು ಪ್ರಾರಂಭಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ABOUT THE AUTHOR

...view details