ಕರ್ನಾಟಕ

karnataka

ETV Bharat / business

ಕೊರೊನಾ ನಡುವೆ 3,000 ಹೊಸಬರು‌ ಸೇರಿ 12 ಸಾವಿರ ನೌಕರರಿಗೆ ಕೆಲಸ ಕೊಟ್ಟ ವಿಪ್ರೋ - ವಿಪ್ರೋ ಎರಡನೇ ತ್ರೈಮಾಸಿಕ ಗಳಿಕೆ

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಕೊನೆಯಲ್ಲಿ, ಕಂಪನಿಯ ಉದ್ಯೋಗಿಗಳ ಸಂಖ್ಯೆ 1,85,243 ಇದೆ ಎಂದು ಐಟಿ ಮೇಜರ್ ನಿಯಂತ್ರಕ ಫೈಲಿಂಗ್​ನಲ್ಲಿ ಹೇಳಿದೆ.

Wipro
ವಿಪ್ರೋ

By

Published : Oct 14, 2020, 9:01 AM IST

ಬೆಂಗಳೂರು: ಜುಲೈ- ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 3,000 ಫ್ರೆಶರ್‌ ಸೇರಿದಂತೆ ಸುಮಾರು 12,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಎಂದು ವಿಪ್ರೋ ತಿಳಿಸಿದೆ.

ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಕೊನೆಯಲ್ಲಿ, ಕಂಪನಿಯ ಉದ್ಯೋಗಿಗಳ ಸಂಖ್ಯೆ 1,85,243 ಇದೆ ಎಂದು ಐಟಿ ಮೇಜರ್ ನಿಯಂತ್ರಕ ಫೈಲಿಂಗ್​ನಲ್ಲಿ ಹೇಳಿದೆ.

ಇದೊಂದು ಹಣದ ಹರಿವಿನ ಬಲವಾದ ಕಾರ್ಯಕ್ಷಮತೆಯ ಮತ್ತೊಂದು ತ್ರೈಮಾಸಿಕವಾಗಿದೆ. ಐಟಿ ಸೇವೆಗಳ ವಿಭಾಗದಲ್ಲಿ ಕಂಪನಿಯ ವಿಸ್ತರಣೆಯನ್ನು ಶೇ 0.2 ರಿಂದ ಶೇ 19.2ಕ್ಕೆ ತಲುಪಿಸಲು ನಾವು ಹಲವು ಕಾರ್ಯಾಚರಣೆ ನಿಯತಾಂಕಗಳನ್ನು ಸುಧಾರಿಸಿದ್ದೇವೆ ಎಂದಿದೆ.

ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ವಿಪ್ರೋ ಒಟ್ಟು ನಿವ್ವಳ ಲಾಭದಲ್ಲಿ ಶೇ 3.4ರಷ್ಟು ಕುಸಿತ ಕಂಡು 2,465.7 ಕೋಟಿ ರೂ.ಗೆ ತಲುಪಿದೆ. 9,500 ಕೋಟಿ ರೂ. ಷೇರು ಮರುಖರೀದಿ (ಬೈ ಬ್ಯಾಕ್)​ ಯೋಜನೆಗೆ ಆಡಳಿತ ಮಂಡಳಿ ಅನುಮೋದನೆ ನೀಡಿದೆ ಎಂದು ಹೇಳಿದರು.

ABOUT THE AUTHOR

...view details